ಕಾಂಗ್ರೆಸ್ ನೇತೃತ್ವ ವಹಿಸಿರೋರೇ ರೌಡಿ ಶೀಟರ್-ಶೋಭಾ ಕರಂದ್ಲಾಜೆ

Shobha Karandlaje : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಹಲವು ಯೋಜನೆಗಳನ್ನು ಅನಾವರಣಗೊಳಿಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಂತೆ, ವಿರೋಧ ಪಕ್ಷವು ರೌಡಿ ಶೀಟರ್ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿಗೆ ಶುಭಾಶಯ ಕೋರಿದ್ದಾರೆ ಎಂದು ಆರೋಪಿಸಿ ಫೋಟೋ ಬಿಡುಗಡೆ ಮಾಡಿದೆ.   

Written by - Zee Kannada News Desk | Last Updated : Mar 13, 2023, 04:32 PM IST
  • ಪ್ರಧಾನಿಯವರಿಗೆ ಫೈಟರ್ ರವಿ ಯಾರು ಅನ್ನೋದೇ ಗೊತ್ತಿಲ್ಲ
  • ಇದಕ್ಕೆ ಪ್ರಧಾನಿ ಅವರು ಜವಾಬ್ದಾರಿಯಾಗಿರುವುದಿಲ್ಲ,
  • ಕಾಂಗ್ರೆಸ್ ನ ಕಾರ್ಯಾಧ್ಯಕ್ಷರೇ ರೌಡಿ ಶೀಟರ್ ಆಗಿರೋ ಮುಖಂಡರು ಇದ್ದಾರೆ
ಕಾಂಗ್ರೆಸ್ ನೇತೃತ್ವ ವಹಿಸಿರೋರೇ ರೌಡಿ ಶೀಟರ್-ಶೋಭಾ ಕರಂದ್ಲಾಜೆ   title=

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್, “ಬಿಜೆಪಿಯಷ್ಟು ಹೀನಾಯ ಪಕ್ಷ ಜಗತ್ತಿನಲ್ಲಿ ಇಲ್ಲ. ಹೋರಾಟಗಾರ ರವಿ ಅವರ ಮುಂದೆ ಪ್ರಧಾನಿ ಕೈಮುಗಿದು ನಿಂತಿದ್ದಾರೆ. ಇದು ಪ್ರಧಾನಿ ಹುದ್ದೆಗೆ ಕಳಂಕ ತಂದಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಹೇಳುತ್ತಿದ್ದ ಪಕ್ಷ ಈಗ ಪ್ರಧಾನಿಯನ್ನು ರೌಡಿ ಶೀಟರ್ ಎದುರು ನಿಲ್ಲುವಂತೆ ಮಾಡಿದೆ. ಎಂದು ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದೆ.  

ಇದನ್ನೂ ಓದಿ-ಮೈಕ್ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ- ಕೆ.ಎಸ್‌. ಈಶ್ವರಪ್ಪ 

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ " ಲೋಕಲ್ ಅವರ ಕಣ್ತ  ಪ್ಪಿನಿಂದ  ಆಗಿದೆ, ಪ್ರಧಾನಿಯವರಿಗೆ ಫೈಟರ್ ರವಿ ಯಾರು ಅನ್ನೋದೇ ಗೊತ್ತಿಲ್ಲ ಈ ತಪ್ಪು‌ ನಮ್ಮಿಂದ ಆಗಿದೆ ಎಸ್ ಪಿ ಅವರು ಕೂಡ ಅಲ್ಲಿ ಯಾರು ಇರಬೇಕು ಅನ್ನೋದನ್ನ ಗಮನಿಸಬೇಕಿತ್ತು ಅವರು ಅದನ್ನು ಮಾಡಿಲ್ಲ ಎಲ್ಲೋ ಒಂದು ಕೊರತೆಯಾಗಿದೆ ಇದಕ್ಕೆ ಪ್ರಧಾನಿ ಅವರು ಜವಾಬ್ದಾರಿಯಾಗಿರುವುದಿಲ್ಲ, ಈ‌ ಬಗ್ಗೆ ಕಾಂಗ್ರೆಸ್ ನವರು ಟೀಕೆ ಮಾಡುವ ಅಗತ್ಯವಿಲ್ಲ ಕಾಂಗ್ರೆಸ್ ನ ಕಾರ್ಯಾಧ್ಯಕ್ಷರೇ ರೌಡಿ ಶೀಟರ್ ಆಗಿರೋ ಮುಖಂಡರು ಇದ್ದಾರೆ ಇವತ್ತು ಕಾಂಗ್ರೆಸ್ ನೇತೃತ್ವ ವಹಿಸಿರೋರೇ.. ರೌಡಿ ಶೀಟರ್ ಕಾಂಗ್ರೇಸ್‌ ಗೆ ನೈತಿಕತೆಯಿಂದ ಮಾತನಾಡಲು ಬರುವುದಿಲ್ಲ ಕೇವಲ ಚುಣಾವನೆಗಾಗಿ ಈ ರೀತಿ ಆರೋಪ ಮಾಡಿದರೆ ಜನ ಉತ್ತರ ಕೊಡುತ್ತಾರೆ. ಎಂದಿದ್ದಾರೆ. 

​ಇದನ್ನೂ ಓದಿ-ಭಾರತವೆಂದರೆ ಕೇವಲ ಹಿಂದಿ ಭಾಷೆಯಲ್ಲ: ನಟಿ ರಮ್ಯಾ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News