Coronavirus : ಬೆಂಗಳೂರಿಗೂ ಬಂತು ರೂಪಾಂತರಿ ಕರೋನಾ : ತಾಯಿ ಮಗು ಸೇರಿ ಮೂವರಲ್ಲಿ ಸೋಂಕು ಪತ್ತೆ
ರಾಜ್ಯದ ಮೂವರಿಗೆ ರೂಪಾಂತರಿ ಕರೋನಾ ಸೋಂಕು ಇರುವುದು ದರಢಪಟ್ಟಿದೆ. ಕೇಂದ್ರದ ವರದಿಯ ಪ್ರಕಾರ ಬೆಂಗಳೂರಿನ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಬೆಂಗಳೂರು : ಬೇರೆ ದೇಶದಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಕೇಂದ್ರ ಈಗಾಗಲೇ ಮಾರ್ಗಸೂಚಿ ಹೊರಡಿಸಿದೆ. ಕೇಂದ್ರದ ಮಾರ್ಗಸೂಚಿಯನ್ವಯ ಬ್ರಿಟನ್ ನಿಂದ (Britain) ಬಂದಿರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ ಬೆಂಗಳೂರಿನ ಮೂರು ಜನರಿಗೆ ರೂಪಾಂತರಿ ಕರೋನಾ (COVID 19) ಸೋಂಕು ಇರುವುದು ಪತ್ತೆಯಾಗಿದೆ. ಕೇಂದ್ರದಿಂದ ಬಂದಿರುವ ವರದಿಯ ಪ್ರಕಾರ ಬೆಂಗಳೂರಿನ ಮೂವರಲ್ಲಿ ರೂಪಾಂತರಿ ಕರೋನಾದ ಸೋಂಕು ಇರುವುದು ದೃಢಪಟ್ಟಿದೆ. ಈ ವಿಚಾರವನ್ನು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸ್ಪಷ್ಪಪಡಿಸಿದ್ದಾರೆ.
ಕೊರೊನಾ ವೈರಾಣುವಿನ (Coronavirus) ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಾ.ಕೆ ಸುಧಾಕರ್ (Dr K Sudhakar) ತಿಳಿಸಿದ್ದಾರೆ.
Corona Strain: ವಿದೇಶದಿಂದ ಹಿಂದಿರುಗಿದ 6 ಪ್ರಯಾಣಿಕರಲ್ಲಿ 'ಬ್ರಿಟನ್' ಕರೋನಾ, ಹೆಚ್ಚಿದ ಆತಂಕ
ಬ್ರಿಟನ್ ನಿಂದ (Britain) ಬಂದಿರುವ ತಾಯಿ, ಮಗು ಸೇರಿ ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಇತರರಿಂದ ಪ್ರತ್ಯೇಕಗೊಳಿಸಲಾಗಿದೆ. ಅಲ್ಲದೆ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕೂಡಾ ಪತ್ತೆ ಮಾಡಲಾಗಿದ್ದು ಅವರ ಬಗ್ಗೆಯೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಮೂವರ ಜೊತೆ ಪ್ರಯಾಣ ಬೆಳೆಸಿದವರ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ಅವರ ಆರೋಗ್ಯದ ಬಗ್ಗೆಯೂ ನಿಗಾ ವಹಿಸಲಾಗಿದೆ ಎಂದು ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಸೋಂಕಿತರ ಸಹ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶದಿಂದ ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಡದೆ ತಪ್ಪಿಸಿಕೊಂಡಿರುವವರನ್ನು ಸಹಾ ಪತ್ತೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಪರೀಕ್ಷೆಯಿಂದ ತಪ್ಪಿಸಿಕೊಂಡವರನ್ನು 2 ದಿನಗಳೊಳಗೆ ಪತ್ತೆ ಮಾಡಿ ಆರೋಗ್ಯ ಇಲಾಖೆಗೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ALSO READ : Coronavirus Pandemic: ಕೊರೊನಾ ಅಂತಿಮ ಮಹಾಮಾರಿ ಅಲ್ಲ, ಎಚ್ಚರಿಕೆ ನೀಡಿದ WHO ಮುಖ್ಯಸ್ಥ
ಕೇಂದ್ರದ ಮಾರಗಸೂಚಿ ಪ್ರಕಾರ ಕರೋನಾ ಸೋಂಕಿಗೆ ಒಳಪಟ್ಟವರು 28 ದಿನ ಆಸ್ಪತ್ರೆಯ ಐಸೋಲೇಷನ್ ನಲ್ಲಿ (Isolation) ಇರಬೇಕು. ಈ ಮೊದಲು ಒಟ್ಟು 14 ದಿನದ ಐಸೋಲೆಷನ್ ಇತ್ತು. ಈ ಪೈಕಿ 7 ದಿನ ಆಸ್ಪತ್ರೆಯಲ್ಲಿ ಮತ್ತೆ 7 ದಿನ ಮನೆಯಲ್ಲಿ ಐಸೋಲೇಷನ್ ಗೆ ಒಳಪಡಬೇಕಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ