ಮೈಸೂರು: ಪ್ರವಾಸಿಗರ ಪಾಲಿನ ಸ್ವರ್ಗ ನಾಗರಹೊಳೆ ಅರಣ್ಯ ಪ್ರದೇಶ(Nagarahole Forest Area)ದಲ್ಲಿ ಮತ್ತೊಂದು ವಿಸ್ಮಯ ಸಂಭವಿಸಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ವಿಶೇಷ ಅತಿಥಿಗಳ ದರ್ಶನವಾಗಿದೆ.


COMMERCIAL BREAK
SCROLL TO CONTINUE READING

ಸಫಾರಿಗೆ ತೆರಳಿದ್ದವರಿಗೆ ವೀರನ ಹೊಸಹಳ್ಳಿ ಬಳಿ ಹುಲಿ ಹಾಗೂ ಕರಡಿ(Tiger and Bear) ಕಾಣಿಸಿಕೊಂಡಿದ್ದು, ದಿಢೀರ್ ಈ ವಿಸ್ಮಯ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಸಫಾರಿಗೆ ತೆರಳಿದ್ದಾಗ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಹಳ್ಳಿ ಬಳಿ ಹುಲಿ ಹಾಗೂ ಕರಡಿ ದರ್ಶನವಾಗಿದೆ.


ಇದನ್ನೂ ಓದಿ: Bengaluru Police : ಬೆಳಗ್ಗೆ ಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಸದ್ದು! ರೌಡಿ ಕಾಲು ಪಂಕ್ಚರ್


ಬಿಂದಾಸ್ ವಾಕಿಂಗ್ ಮಾಡುತ್ತಿದ್ದ ಹುಲಿ(Tiger) ಹಾಗೂ ಮರ ಹತ್ತಲು ಪ್ರಯತ್ನಿಸುತ್ತಿದ್ದ ಕರಡಿ(Bear)ದೃಶ್ಯಗಳು ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಪ್ರವಾಸಿಗರನ್ನು ಕಂಡ ತಕ್ಷಣವೇ ಕರಡಿ ಕಾಲಿಗೆ ಬುದ್ದಿ ಹೇಳಿದೆ. 


ಮರವನ್ನು ಏರಲು ಪ್ರಯತ್ನಿಸುತ್ತಿದ್ದ ಕರಡಿ ಸ್ವಲ್ಪ ಹೊತ್ತು ಅಲ್ಲಿಯೇ ಸುತ್ತಾಡುತ್ತಿತ್ತು. ಪ್ರವಾಸಿಗರು ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆಯೇ ಹೆಜ್ಜೆ ಸಪ್ಪಳ ಕೇಳಿಸಿಕೊಂಡ ಕರಡಿ ಸ್ಥಳದಿಂದ ಕಾಲ್ಕಿತ್ತಿದೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಹುಲಿ ಕೂಡ ಸ್ವಲ್ಪಹೊತ್ತು ರಾಜಗಾಂಭಿರ್ಯದಿಂದ ಅಲ್ಲಿಯೇ ಸುತ್ತಾಡಿ ದರ್ಶನ ನೀಡಿದೆ. ಇವೆರಡು ಅತಿಥಿಗಳ ಅನಿರೀಕ್ಷಿತ ದರ್ಶನ ಪಡೆದ ಪ್ರವಾಸಿಗರ ಮೊಗದಲ್ಲಿ ಮಂದಹಾಸ ಮೂಡಿತ್ತು.


ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ‘ಒಮಿಕ್ರಾನ್’ ಆತಂಕ, ಟೆಸ್ಟಿಂಗ್ ಹೆಚ್ಚಿಸಿದ ಬಿಬಿಎಂಪಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.