Bengaluru Police : ಬೆಳಗ್ಗೆ ಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಸದ್ದು! ರೌಡಿ ಕಾಲು ಪಂಕ್ಚರ್

ಬೆಂಗಳೂರಿನ ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಬಳಿ ರೌಡಿಶೀಟರ್ ಲೋಹಿತ್ ಬಲಗಾಲಿಗೆ ಫೈರಿಂಗ್ ಮಾಡಲಾಗಿದೆ. ಇಂದಿರಾನಗರ ಠಾಣೆ ಪಿಎಸ್​ಐ ಅಮರೇಶ್ ಜೇಗರಕಲ್‌ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ.

Written by - Channabasava A Kashinakunti | Last Updated : Dec 11, 2021, 10:00 AM IST
  • ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕಾಲಿಗೆ ಗುಂಡು
  • ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಬಳಿ ರೌಡಿಶೀಟರ್ ಫೈರಿಂಗ್
  • ಹೆಚ್​ಎಸ್​ಆರ್ ಲೇಔಟ್ ಹಾಗೂ ಬನ್ನೇರುಘಟ್ಟ ಠಾಣೆಯಲ್ಲಿ ರೌಡಿಶೀಟರ್
Bengaluru Police : ಬೆಳಗ್ಗೆ ಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಸದ್ದು! ರೌಡಿ ಕಾಲು ಪಂಕ್ಚರ್ title=

ಬೆಂಗಳೂರು : ಕೊಲೆ ಹಾಗೂ ಅಪಹರಣ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ. ಬೆಂಗಳೂರಿನ ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಲ್ಲಘಟ್ಟ ಬಳಿ ರೌಡಿಶೀಟರ್ ಲೋಹಿತ್ ಬಲಗಾಲಿಗೆ ಫೈರಿಂಗ್ ಮಾಡಲಾಗಿದೆ. ಇಂದಿರಾನಗರ ಠಾಣೆ ಪಿಎಸ್​ಐ ಅಮರೇಶ್ ಜೇಗರಕಲ್‌ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ.

ಲೋಹಿತ್(Rowdy-Sheeter Lohit) ಹೆಚ್​ಎಸ್​ಆರ್ ಲೇಔಟ್ ಹಾಗೂ ಬನ್ನೇರುಘಟ್ಟ ಠಾಣೆಯಲ್ಲಿ ರೌಡಿಶೀಟರ್ ಅಗಿದ್ದ. ಈತ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಇದನ್ನೂ ಓದಿ : ಸಿಲಿಕಾನ್ ಸಿಟಿಗೆ ‘ಒಮಿಕ್ರಾನ್’ ಆತಂಕ, ಟೆಸ್ಟಿಂಗ್ ಹೆಚ್ಚಿಸಿದ ಬಿಬಿಎಂಪಿ..!

ವರ್ತೂರು ಕೇಸ್​ನಲ್ಲೂ ಫಿಟ್ ಆಗಿದ್ದ ಆರೋಪಿ

ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್(Varthur Prakash Kidnap Case)​ನಲ್ಲಿ ಕೂಡ ಈತ ಆರೋಪಿಯಾಗಿದ್ದ. ಹೀಗೆ ಸುಮಾರು 17 ಪ್ರಕರಣಗಳಲ್ಲಿ ಪೊಲೀಸರಿಗೆ ಲೋಹಿತ್ ಬೇಕಾಗಿದ್ದ. ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾಗಿದ್ದ. ಈ ವೇಳೆ ಹೆಡ್‌ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿ, ಶರಣಾಗಲು ನಿರಾಕರಿಸಿದ್ದ. ಅನಿವಾರ್ಯವಾಗಿ ಲೋಹಿತ್ ಬಲಗಾಲಿಗೆ ಗುಂಡು ಹಾರಿಸಿ ಪೊಲೀಸರು ಆತನನ್ನ ಬಂಧಿಸಿದ್ದಾರೆ.

ಪೊಲೀಸರು ಫೈರಿಂಗ್ ಮಾಡಿದ್ದೇಕೆ?

ಅಂದಹಾಗೆ ಆಟೋ ಚಾಲಕ ವಿಜಯ್ ಕುಮಾರ್ ಎಂಬಾತನ ಕಿಡ್ನಾಪ್ ಪ್ರಕರಣದಲ್ಲಿ ಇದೇ ಲೋಹಿತ್ ಪ್ರಮುಖ ಆರೋಪಿಯಾಗಿದ್ದ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ(DCP Dr. Sharanappa) ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಲೋಹಿತ್ ಮಾತ್ರ ತಲೆಮರೆಸಿಕೊಂಡು ಓಡಾಡುತ್ತಿದ್ದ.

ಇದನ್ನೂ ಓದಿ : ಪತ್ನಿ ಆತ್ಮಹತ್ಯೆಗೆ ಶರಣು, ಪತಿ ವಿರುದ್ಧ ಕಿರುಕುಳದ ಆರೋಪ

ಆರೋಪಿ ಪತ್ತೆಗೆ ಬಲೆ ಬಿಸಿದ್ದ ಪೊಲೀಸರು!

ಆರೋಪಿ ಲೋಹಿತ್ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ 4 ವಿಶೇಷ ತಂಡ ರಚನೆ ಮಾಡಲಾಗಿತ್ತು. ಇಂದು ಆರೋಪಿ ಜೀವನ್ ಭೀಮಾನಗರ ಕಡೆಗೆ ಬರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಪೊಲೀಸರು(Bengaluru Police) ಆತನ ಬೆನ್ನತ್ತಿ ಬಂಧಿಸಲು ಹೋಗಿದ್ದರು. ಆದರೆ ಕಾನ್ಸ್‌ಟೇಬಲ್ ಮೇಲೆ ಲೋಹಿತ್ ಹಲ್ಲೆ ಮಾಡಿದ್ದನಂತೆ. ಹೀಗಾಗಿ ಅನಿವಾರ್ಯವಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News