National Animal vs National Bird: ಗರಿಬಿಚ್ಚಿದ ನವಿಲಿನ ಮೇಲೆ ಹುಲಿರಾಯನ ದಾಳಿ, ವಿಡಿಯೋ ವೈರಲ್!

ರಾಷ್ಟ್ರೀಯ ಪಕ್ಷಿಯ ಮೇಲೆ ರಾಷ್ಟ್ರೀಯ ಪ್ರಾಣಿ ದಾಳಿ ನಡೆಸಿದೆ.

Written by - Zee Kannada News Desk | Last Updated : Jul 19, 2021, 04:17 PM IST
  • ನಿದ್ರಿಸುತ್ತಿದ್ದ ಹುಲಿರಾಯನಿಗೆ ಕೂಗಿ ಕೂಗಿ ತೊಂದರೆ ನೀಡಿದ ನವಿಲು
  • ಗರಿಬಿಚ್ಚಿ ನರ್ತಿಸುತ್ತಿದ್ದ ನವಿಲಿನ ಮೇಲೆ ಏಕಾಏಕಿ ದಾಳಿ ಮಾಡಿದ ಹುಲಿ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ವಿಡಿಯೋ
National Animal vs National Bird: ಗರಿಬಿಚ್ಚಿದ ನವಿಲಿನ ಮೇಲೆ ಹುಲಿರಾಯನ ದಾಳಿ, ವಿಡಿಯೋ ವೈರಲ್! title=
ಗರಿಬಿಚ್ಚಿ ನರ್ತಿಸುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ

ನವದೆಹಲಿ: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ಮಾತ್ರ ನೋಡುಗರ ನೆನಪಿನಲ್ಲಿ ಉಳಿಯುತ್ತವೆ. ವೈರಲ್ ಲೋಕದಲ್ಲಿ ಆಗಾಗ ಪ್ರಾಣಿಗಳ ಅದ್ಭುತ ವಿಡಿಯೋಗಳು ಕಣ್ತುಂಬಿಕೊಳ್ಳಲು ಸಿಗುತ್ತವೆ. ಅಂತಹದ್ದೇ ಒಂದು ವಿಡಿಯೋದಲ್ಲಿ ಭಾರತೀಯ ರಾಷ್ಟ್ರೀಯ ಪ್ರಾಣಿ ಮತ್ತು ರಾಷ್ಟ್ರೀಯ ಪಕ್ಷಿ ಪರಸ್ಪರ ಮುಖಾಮುಖಿಯಾಗಿವೆ. ಕೇವಲ 16 ಸೆಕೆಂಡುಗಳಿರುವ ಈ ವಿಡಿಯೋ ನೋಡುಗರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಬೆರಳುಗಳಿಂದಲೇ ಚಾರ್ಜ್ ಆಗಲಿದೆ ಫೋನ್, ಬೆವರಿನಿಂದಲೇ ಉತ್ಪತ್ತಿಯಾಗುತ್ತದೆ ವಿದ್ಯುತ್

ಸದ್ಯ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಲಿಯೊಂದು ನಿದ್ರಿಸುತ್ತಿತ್ತು. ಈ ವೇಳೆ ಅಲ್ಲಿಯೇ ಇದ್ದ ನವಿಲು ಜೋರಾಗಿ ಕೂಗಿ ಹುಲಿಯ ನಿದ್ರೆಗೆ ಭಂಗ ತಂದಿದೆ. ಹತ್ತಿರವೇ ಹುಲಿ(Tiger) ಇದೆ ಎಂಬುದು ನವಿಲಿಗೆ ಗೊತ್ತಾಗಿಲ್ಲ. ಅದು ಕೂಗುತ್ತಾ ಕೂಗುತ್ತಾ ಗರಿಬಿಚ್ಚಿ ನರ್ತಿಸುತ್ತಿತ್ತು. ಇದರಿಂದ ಕೋಪಿಸಿಕೊಂಡ ಹುಲಿ ಮೆಲ್ಲನೆ ಬಂದು ಗರಿಬಿಚ್ಚಿ ನರ್ತಿಸುತ್ತಿದ್ದ ನವಿಲಿನ ಮೇಲೆ ದಾಳಿ ನಡೆಸಿದೆ. ಆದರೆ ಕ್ಷಣಮಾತ್ರದಲ್ಲಿಯೇ ನವಿಲು ಹುಲಿಯ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral Video: ಟ್ರೈನ್ ಕೆಳಗಡೆ ಬಂದ 70 ವರ್ಷದ ವೃದ್ಧ, ಮುಂದೇನಾಯ್ತು ನೀವೇ ನೋಡಿ

ತನ್ನ ನಿದ್ರೆಗೆ ಭಂಗ ತಂದ ನವಿಲನ್ನು ಹಿಡಿಯಬೇಕೆಂದು ಮೆಲ್ಲಗೆ ಬಂದು ದಾಳಿ ನಡೆಸಿದ ಹುಲಿ ಕೈಗೆ ನವಿಲು(Peacock) ಸಿಗದೆ ತಪ್ಪಿಸಿಕೊಂಡಿರುವ ವಿಡಿಯೋವನ್ನು ಅದ್ಭುತವಾಗಿ ಸೆರೆಹಿಡಿಯಲಾಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಜಂಗಲ್ ರಾಜನ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡ ನವಿಲು ಅದೃಷ್ಟದ್ದಾಗಿದೆ ಅಂತಾ ಕೆಲವರು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News