ಟಿಪ್ಪು ರೀತಿ ಹತ್ಯೆ ಹೇಳಿಕೆ ವಿಚಾರ: ಸಿದ್ದರಾಮಯ್ಯರ ಕ್ಷಮೆ ಕೋರಿದ ಸಚಿವ ಅಶ್ವತ್ಥ್ ನಾರಾಯಣ
ಸಿದ್ದರಾಮಯ್ಯರನ್ನು ರಾಜಕೀಯವಾಗಿ ವಿರೋಧ ಮಾಡ್ತಿದ್ದೇನೆ ವಿನಹ ವಯಕ್ತಿಕವಾಗಿ ಅಲ್ಲ. ಒಂದು ಸಮುದಾಯದ ಓಲೈಕೆ ಮಾಡುವ ಪಕ್ಷವನ್ನು ಸೋಲಿಸಬೇಕು ಎಂದು ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರು: ಟಿಪ್ಪು ಸುಲ್ತಾನ್ ಹೊಡೆದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೊಡೆಯಬೇಕು ಎಂಬ ಹೇಳಿಕೆಗೆ ಸಚಿವ ಅಶ್ವತ್ಥ್ ನಾರಾಯಣ ವಿಷಾದ ವ್ಯಕ್ತಪಡಿಸಿದ್ದಾರೆ. ಟಿಪ್ಪು ರೀತಿ ಸಿದ್ದರಾಮಯ್ಯ ಹತ್ಯೆ ಮಾಡಬೇಕು ಅನ್ನೋ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಬೇರೆ ಉದ್ದೇಶದಿಂದ ಆ ರೀತಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರದ ಕಾರ್ಯರ್ತರನ್ನುದ್ದೇಶಿಸಿ ಮಾತನಾಡುವಾಗ ಈ ರೀತಿ ಮಾತನಾಡಿದೆ. ಟಿಪ್ಪು ಹೆಸರು ಉಲ್ಲೇಖ ಮಾಡಿದೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡ್ತಿದೆ. ಅದನ್ನು ಖಂಡಿಸುವಂತೆ ಆಗಬೇಕು. ಜನರಿಗೆ ನಾನು ಸ್ಪಷ್ಟವಾಗಿ ಹೇಳಿದೆ. ಬರುವ ಚುನಾವಣೆಯಲ್ಲಿ ಜನರ ಬೆಂಬಲ ನಮ್ಮ ಪರವಾಗಿ ಪಡೆದುಕೊಳ್ಳಬೇಕು. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ, ಯುದ್ಧದ ಕಾಲದಲ್ಲಿ ಇಲ್ಲ. ಯುದ್ಧದ ಕಾಲದಲ್ಲಿ ಇಲ್ಲ, ಪ್ರಜಾಪ್ರಭುತ್ವದಲ್ಲಿ ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆ ಹೊರತು ಬೇರೆಯ ರೀತಿ ಅಲ್ಲವೆಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಕಾರ್ ಗ್ಯಾರೇಜ್‌ನಲ್ಲಿ ಬೆಂಕಿ ಅವಘಡ - ಕೋಟ್ಯಾಂತರ ರೂ. ಮೌಲ್ಯದ ಐಷಾರಾಮಿ ಕಾರ್‌ಗಳು ಭಸ್ಮ
ಸಿದ್ದರಾಮಯ್ಯರನ್ನು ರಾಜಕೀಯವಾಗಿ ವಿರೋಧ ಮಾಡ್ತಿದ್ದೇನೆ ವಿನಹ ವಯಕ್ತಿಕವಾಗಿ ಅಲ್ಲ. ಗೆಲುವು ಸೋಲು ಚುನಾವಣೆಯಲ್ಲಿ ಇದೆ. ಒಂದು ಸಮುದಾಯದ ಓಲೈಕೆ ಮಾಡುವ ಪಕ್ಷವನ್ನು ಸೋಲಿಸಬೇಕು. ಬಿಜೆಪಿ ಗೆಲ್ಲಿಸಬೇಕು ಅನ್ನೋದಷ್ಟೇ ನನ್ನ ಮಾತಿನ ಉದ್ದೇಶ. ಸಿದ್ದರಾಮಯ್ಯರಿಗೆ ವಯಕ್ತಿಕವಾಗಿ ನೋವಾಗಿದ್ರೆ ವಿಷಾಧ ವ್ಯಕ್ತಪಡಿಸ್ತೇನೆ’ ಎಂದು ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಸಿದ್ದರಾಮಯ್ಯರ ಹಾಗೆ ಸಿಎಂಗೆ ನಾಯಿ, ಪ್ರಧಾನಿಗೆ ನರ ಹಂತಕ, ಜಾತಿ-ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸವನ್ನು ನಾವು ಮಾಡಿಲ್ಲ. ಇವರ ಹಾಗೆ ವಯಕ್ತಿಕವಾಗಿ ವಿರೋಧ ಮಾಡಿಲ್ಲ. ಮತ ಗೆಲ್ಲಬೇಕೇ ವಿನಹ ಮತ್ತೆ ಬೇರೇನೂ ಅಲ್ಲವೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ... ಕಾವೇರಿ ನದಿ ದಾಟುತ್ತಿರುವ ಭಕ್ತ ಪ್ರವಾಹ!!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.