ಬೆಂಗಳೂರು : ಕಾಂಗ್ರೆಸ್ ಸರ್ಕಾರ ನಾಳೆ ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ ಯೋಜನೆ ಜಾರಿ ಮಾಡುವುದಕ್ಕೆ ಸಂಪುಟ ಸಿದ್ಧತೆ ನಡೆಸುತ್ತಿದ್ದು, ಆರ್ಥಿಕ ಇಲಾಖೆ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಈ ಮೂರು ಯೋಜನೆ ಅನುಷ್ಠಾನಕ್ಕೆ ಮೂವತ್ತು ಸಾವಿರ ಕೋಟಿ ರೂ ಅಂದಾಜು ಇದೇ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಗೃಹ ಜ್ಯೋತಿ ಯೋಜನೆ ಗ್ಯಾರೆಂಟಿ : ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂಬ ಶೀರ್ಷಿಕೆಯ ಗೃಹ ಜ್ಯೋತಿ ಯೋಜನೆಗೆ ₹ 12000 ಕೋಟಿ ಹೊರೆ ಆಗಲಿದ ಎಂದು ಆರ್ಥಿಕ ಇಲಾಖೆ ಅಂದಾಜಿಸಿದ್ದಾರೆ.


ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ತಯಾರಿ, ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ


ಅನ್ನಭಾಗ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 2013 ರಲ್ಲಿ ಜಾರಿ ಮಾಡಿದ್ದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ BPL ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಆ ಪ್ರಕಾರ ಈಗ ಮತ್ತೆ ಈ ಯೋಜನೆಗೆ ಮರುಜೀವ ನೀಡಲು ಹೊರಟ ಕಾಂಗ್ರೆಸ್, ಪ್ರತಿ ವರ್ಷ ₹7500 ಕೋಟಿ ಅಂದಾಜು ಆಗಲಿದೆ.


ಶಕ್ತಿ : ಮಹಿಳೆಯರಿಗೆ ಬಿಎಂಟಿಸಿ ಹಾಗೂ KSRTC ನಲ್ಲಿ ಉಚಿತ ಪ್ರಯಾಣ ಯೋಜನೆ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ. ಡೆಲ್ಲಿ ಹಾಗೂ ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ಅನುಷ್ಠಾನದಲ್ಲಿದೆ. ಈ ಯೋಜನೆ ರಾಜ್ಯದಲ್ಲಿ ಅನುಷ್ಠಾನ ಮಾಡಬೇಕು ಎಂದರೆ ₹3000 ಕೋಟಿ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ. 


ಇದನ್ನೂ ಓದಿ:  ಗ್ಯಾರೆಂಟಿಗಳ ಅನುಷ್ಠಾನಕ್ಕೆ ಆರ್ಥಿಕ ಸವಾಲು: ಅಧಿಕಾರಿಗಳ ಸಲಹೆ


ಆರ್ಥಿಕ ಇಲಾಖೆ ಸರ್ಕಾರಕ್ಕೆ ಸಲಹೆ : ಇನ್ನು ಈ ಮೂರು ಯೋಜನೆ ಅನುಷ್ಠಾನಕ್ಕೆ ತಂದರೆ ಅಂದಾಜು ₹25000 ಕೋಟಿ ವಾರ್ಷಿಕ ಹೊರೆ ಆಗಲಿದೆ. ಇದಕ್ಕೆ ಹಣ ಕೃಡೀಕರಣ ಮಾಡಲು ಕೆಲ ಸಲಹೆ ನೀಡಿದ್ದಾರೆ.


ಅನ್ನಭಾಗ್ಯ ಯೋಜನೆ ಈಗಾಗಲೇ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ನಡೆಸಬಹುದು ಜೊತೆಗೆ ಹೆಚ್ಚುವರಿ ಅಕ್ಕಿ ಖರೀದಿ ರಾಜ್ಯದಲ್ಲೇ ಮಾಡಿದರೆ ಹೆಚ್ಚುವರಿ ವೆಚ್ಚ ಉಳಿಸಬಹುದು ಎಂದಿದ್ದಾರೆ. ಉಚಿತ ವಿದ್ಯುತ್ ವಿಚಾರಕ್ಕೆ  ಬಹುಪಾಲು ಕುಟುಂಬಗಳು 200 ಯುನಿಟ್ ವಿದ್ಯುತ್ ಒಳಗೆ ಬಳಕೆ ಮಾಡುತ್ತಿದ್ದಾರೆ. 200 ಕ್ಕೂ ಹೆಚ್ಚು ಯುನಿಟ್ ಬಳಕೆ ಮಾಡುವ ಕುಟುಂಬಗಳು ಹವಾನಿಯಂತ್ರಕ ಸೇರಿದಂತೆ ಐಷಾರಾಮಿ ಉಪಕಾರಣಗಳನ್ನ ಬಳಕೆ ಮಾಡುತ್ತಾರೆ. ಈ ಕಾರಣಕ್ಕೆ ಪ್ರತಿ ಯುನಿಟ್ ಮೇಲೆ ಹೆಚ್ಚಿನ ಶುಲ್ಕ ವಿಧಿಸಬಹುದು ಎಂದು ಸಲಹೆ ನೀಡಿದ್ದಾರೆ.


ಇದನ್ನೂ ಓದಿ: ಚಾಮರಾಜನಗರದಲ್ಲಿ ಐ ಎಎಫ್ ತರಬೇತಿ ವಿಮಾನ ಪತನ


ಇನ್ನು ಇದೇ ರೀತಿ ಮಹಿಳೆಯರಿಗೆ ಉಚಿತ ಪ್ರಯಾಣ ವಿಚಾರಕ್ಕೂ ಕೆಲ ಸಲಹೆ ನೀಡಿದ್ದು, ವೋಲ್ವೋ ಅಥವಾ ಹವಾನಿಯಂತ್ರಿತ ಬಸ್ ಗಳ ಪ್ರಯಾಣ ದರ ಏರಿಸಬಹುದು. ಇದರಿಂದ ಹೊರೆ ಪ್ರಮಾಣ ಕಡಿಮೆ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ