ವಿಧಾನಸಭೆಯ ವಿಪಕ್ಷ ಉಪನಾಯಕನಾಗಿ ಯು.ಟಿ ಖಾದರ್ ನೇಮಕ
ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಅವರನ್ನು ವಿಧಾನಸಭೆಯ ಉಪನಾಯಕನಾಗಿ ನೇಮಕ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿದೆ.
ಇತ್ತೀಚಿಗಷ್ಟೇ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿ ಜೆಡಿಎಸ್ ನತ್ತ ಮುಖ ಮಾಡಿರುವ ಸಿಎಂ ಇಬ್ರಾಹಿಮ್ ರಿಂದ ಉಂಟಾಗಿರುವ ನಷ್ಟವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಈಗ ಖಾದರ್ ಅವರಿಗೆ ಮಣೆಹಾಕಿದೆ.
ಇದನ್ನೂ ಓದಿ :"ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ": ಸಿಎಂ ಬೊಮ್ಮಾಯಿ
ಆ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸ್ಥಾನ ನೀಡಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.ಸಿಎಂ ಇಬ್ರಾಹಿಂಗೆ ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಯುಟಿ ಖಾದರ್ ಗೆ ಉಪನಾಯಕ ಸ್ಥಾನವನ್ನು ನೀಡಲಾಗಿದೆ.ಒಂದು ವೇಳೆ ಖಾದರ್ ಅವರಿಗೆ ಈ ಸ್ಥಾನವನ್ನು ನೀಡದೆ ಹೋಗಿದ್ದರೆ ಅಲ್ಪಸಂಖ್ಯಾತ ಸಮುದಾಯ ಮತಗಳನ್ನು ಕೈ ತಪ್ಪುವ ಆತಂಕ ಕಾಂಗ್ರೆಸ್ ಗೆ ಎದುರಾಗಿತ್ತು.
ಇದನ್ನೂ ಓದಿ :ಹಸಿದವರ ಪಾಲಿನ ಅನ್ನದಾತ.. ನೂರಾರು ಜನರ ತುತ್ತಿನ ಚೀಲ ತುಂಬುವ ಮಹನೀಯನೀತ
ಈಗ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಖಾದರ್ ಅವರಿಗೆ ಹೈಕಮಾಂಡ್ ಪ್ರಾಶಸ್ತ್ಯ ನೀಡಿದೆ.
Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.