ಬೆಂಗಳೂರು:  ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಜೇಮ್ಸ್ ಸಿನಿಮಾವನ್ನು ಆರ್ ಆರ್ ಆರ್ ಚಿತ್ರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ತೆಗೆದು ಹಾಕಲಾಗುತ್ತಿದೆ ಎನ್ನುವ ದೂರುಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅನವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: James Fans Response : ವೀಕೆಂಡ್‌ನಲ್ಲಿ 'ಜೇಮ್ಸ್‌' ಅಬ್ಬರ : ಅಭಿಮಾನಿಗಳ ರೆಸ್ಪಾನ್ಸ್ ಹೇಗಿದೆ? ನೋಡಿ


ಜೇಮ್ಸ್ (James) ಸಿನಿಮಾ ವಿವಾದ ಮಾಧ್ಯಮದಲ್ಲಿ ಬರ್ತಿದೆ.ಈಗಾಗಲೇ ಈ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಜೊತೆ ಮಾತಾಡಿದ್ದೀನಿ.ಶಿವರಾಜಕುಮಾರ್ ಜೊತೆಯೂ ಮಾತಾಡಿದ್ದೇನೆ.ಮತ್ತು ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತಂದು ಕೂಡಲೇ ಸರಿಪಡಿಸಿ ಅಂತಾ ಸೂಚಿಸಿದ್ದೇನೆ ಎಂದು ಅವರು ಹೇಳಿದರು.


Ravindra Jadeja : ಒಂದು ವಾರದಲ್ಲಿ ನಂಬರ್-1 ಸ್ಥಾನ ಕಳೆದುಕೊಂಡ ರವೀಂದ್ರ ಜಡೇಜಾ! 


ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ" ಬಿಜೆಪಿ ಶಾಸಕರು ಎತ್ತಂಗಡಿ ಮಾಡಿಸ್ತಿದ್ದಾರೆ ಅನ್ನೋದೆಲ್ಲ ಸುಳ್ಳು, ಅನಾವಶ್ಯಕವಾಗಿ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುವಂತಿಲ್ಲ ಇದಕ್ಕೆ ಸಂಬಂಧಪಟ್ಟ ವಿತರಕರು, ನಿರ್ಮಾಪಕರಿಗೆ ಅಧಿಕಾರ ಇದೆ, ನೀವೇ ಇದನ್ನ ಸರಿಪಡಿಸಬೇಕು ಅಂತಾ ಹೇಳಿದ್ದೇನೆ ಎಂದು ಅವರು ತಿಳಿಸಿದರು.


ಇದನ್ನೂ ಓದಿ: Siddharamaiah Allegations On BJP: ಜೇಮ್ಸ್ ಚಿತ್ರ ನಿಲ್ಲಿಸಲು ಬಿಜೆಪಿ ಒತ್ತಡ, ಸಿದ್ದರಾಮಯ್ಯ ಆರೋಪ! 


ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಬೊಮ್ಮಾಯಿ 'ಕಾಂಗ್ರೆಸ್ ಅವರು ಸಿನಿಮಾದಲ್ಲೂ ರಾಜಕೀಯ ಮಾಡ್ತಿದ್ದಾರೆ, ಎಷ್ಟು ಕೆಳಮಟ್ಟದಲ್ಲಿ ಹೋಗ್ತಿದೆ ನೋಡಿ, ಬೇರೆ ಏನೂ ಇಲ್ಲವಲ್ಲ ಅವರಿಗೆ ಎಂದು ಅವರು ಕಿಡಿ ಕಾರಿದರು. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.