ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅಗ್ನಿ‌ ಮಹೋತ್ಸವ ಹಾಗೂ ರಥೋತ್ಸವ ಮಂಗಳವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು. ಕಳೆದ ಎರಡು ವರ್ಷಗಳಿಂದ ಕೋವೀಡ್  ಹಿನ್ನೆಲೆಯಲ್ಲಿ ಜಾತ್ರೆ ನಡೆದಿರಲಿಲ್ಲ. ಈ ವರ್ಷ ಅತ್ಯಂತ ವಿಜೃಂಭಣೆಯಿಂದ ಜಾತ್ರೆ ನಡೆದಿದ್ದು ಬೆಳಿಗ್ಗೆ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ  ಅಪಾರ ಪ್ರಮಾಣದ ಭಕ್ತರು ಭಾಗವಹಿಸಿದ್ದರು. ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭಕ್ತರು ನಿಗಿ ನಿಗಿ ಕೆಂಡ ಹಾಯ್ದು ಹರೆಕೆ ತೀರಿಸಿದರು.


COMMERCIAL BREAK
SCROLL TO CONTINUE READING

ಅದು ಅತ್ಯಂತ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದು. ನಾಡಿನ ವಿವಿಧ ಕಡೆಗಳಿಂದ ಜಾತಿ, ಮತ ಪಂಥ ಪ್ರಾದೇಶಿಕತೆ ಎನ್ನದೇ ಭಕ್ತರೂ ಇಲ್ಲಿಗೆ ಆಗಮಿಸುತ್ತಾರೆ. ಈ ದೇವಸ್ಥಾನದಲ್ಲೀಗ ವಿಶೇಷ ಜಾತ್ರೆಯ ಮೆರುಗು. ಈ ಜಾತರೆಯ ಭವ್ಯ ಮೆರವಣಿಗೆಯಲ್ಲಿ ಕರಡಿ ಮಜಲು, ದಾಲಪಟ, ಡೊಳ್ಳು, ನಂದಿಕೋಲು, ವೀರಗಾಸೆ ತಂಡಗಳು ಪಾಲ್ಗೊಂಡಿದ್ದವು. ಎತ್ತುಗಳ ಮೆರವಣಿಗೆ ವಿಶೇಷ ಆಕರ್ಷಣೆಯಾಗಿತ್ತು.


 ಇದನ್ನೂ ಓದಿ :  ಜನಸ್ನೇಹಿ ಆಯ್ತು ಆಗ್ನೇಯ ವಿಭಾಗ: ತ್ವರಿತಗತಿಯಲ್ಲಿ ದೂರು ಸ್ವೀಕರಿಸಲು ಹೊಸ ಪ್ಲ್ಯಾನ್!


ಉದ್ಯೋಗ, ಸಂತಾನ, ಆಸ್ತಿ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಹಲಾವಾರು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿ ಕೆಂಡ ಹಾಯಲಾಗುತ್ತದೆ.  ಈ ಬಾರಿ ಕೂಡಾ ಭಕ್ತರು ಕೆಂಡ ಹಾಯ್ದು ಹರಕೆ ತೀರಿಸಿದರು. ಈ ವೇಳೆ ಮಹಿಳೆಯರು ಹಾಗೂ ಮಕ್ಕಳು ಕೂಡಾ ಅಗ್ನಿಕೊಂಡ ಹಾಯ್ದರು. ಅಲ್ಲದೆ ಪುರವಂತರ ನೇತೃತ್ವದಲ್ಲಿ ವಿಧಿವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡರು. ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ  ಸುತ್ತಮುತ್ತಲಿನ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.


ಶ್ರೀ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ  ಕಾರ್ತಿಕ ಮಹೋತ್ಸವ : 
ಭಕ್ತಾಧಿಗಳು ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಡುಬಿನ ಕಾಳಗದ ಅಂಗವಾಗಿ ಅಗ್ನಿಕುಂಡವನ್ನು ಸಿದ್ಧಗೊಳಿಸಲಾಗಿತ್ತು. 


 ಇದನ್ನೂ ಓದಿ : ಚಿಲುಮೆ ಅವ್ಯವಹಾರದಲ್ಲಿ ತಮ್ಮದೇನು ಪಾಲಿಲ್ಲ ಎಂದ ಬಿಬಿಎಂಪಿ ಅಧಿಕಾರಿಗಳು...!


ಈ ಜಾತ್ರೆಯ ಪ್ರಮುಖ ವಿಶೇಷತೆಗಳು : 
1.ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೆಂಡದಲ್ಲಿ ಹಾಯ್ದು ಹರಕೆ ತೀರಿಸಿದ ಭಕ್ತರು
2. ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅಗ್ನಿ‌ ಮಹೋತ್ಸವ, ರಥೋತ್ಸವ
3.  ಗಮನ ಸೆಳೆದ ಕರಡಿ ಮಜಲು, ದಾಲಪಟ, ಡೊಳ್ಳು, ನಂದಿಕೋಲು, ವೀರಗಾಸೆ ತಂಡಗಳು
4. ಅಕ್ಕಿ ಹೊಂಡ, ದುರ್ಗದ ಬೈಲ್, ಅಕ್ಜಿಪೇಟೆ, ಜಂಗ್ಲಿಪೇಟೆ, ಹಿರೇಪೆಟೆ, ಗೋಡ್ಕೆ ಓಣಿ ಮೂಲಕ ಸಾಗಿದ ಮೆರವಣಿಗೆ
5.  ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದ ಭಕ್ತಾಧಿಗಳು
6.  ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಡುಬಿನ ಕಾಳಗ
7.  ಅಗ್ನಿಕುಂಡವನ್ನು ಸಿದ್ಧಗೊಳಿಸಿ ಮಹಿಳೆಯರು, ಮಕ್ಕಳು ಕೆಂಡ ಹಾಯ್ದು ಭಕ್ತಿಯ ಪರಾಕಾಷ್ಠೆ
8.  ಉದ್ಯೋಗ, ಸಂತಾನ, ಆಸ್ತಿ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಹಲಾವಾರು ಇಚ್ಟಾರ್ಥಗಳನ್ನು ಈಡೇರಿಸುವಂತೆ  ಭಕ್ತರ ಪ್ರಾರ್ಥನೆ 
9.  ಪುರವಂತರ ನೇತೃತ್ವದಲ್ಲಿ ವಿಧಿವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡ ಭಕ್ತರು 
10. ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡ ಭಕ್ತರು 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.