ಬೆಂಗಳೂರು: ಅನ್ಯಾಕ್ಕೆ ಒಳಗಾಗಿ ನ್ಯಾಯ ಅರಸಿ ಪೊಲೀಸ್ ಠಾಣೆಗಳಲ್ಲಿ ಹೋಗುವವರನ್ನು ಗಂಟೆಗಟ್ಟಲೇ ಪೊಲೀಸರು ಕಾಯಿಸುತ್ತಾರೆಂಬ ಆರೋಪವಿದೆ. ಆದರೆ ಈ ಆರೋಪವನ್ನು ದೂರ ಮಾಡಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ಆಗ್ನೇಯ ವಿಭಾಗ ಪೊಲೀಸರು ಮುಂದಾಗಿದ್ದಾರೆ. ತ್ವರಿತಗತಿಯಲ್ಲಿ ದೂರು ಸ್ವೀಕರಿಸುವ ನಿಟ್ಟಿನಲ್ಲಿ QR ಕೋಡ್ ಸಾಫ್ಟ್ ವೇರ್ ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿಗೆ ನಿಮ್ಮ ಐಡಿಯಾ ನೀಡಿ 25,000 ರೂ.ಬಹುಮಾನ ಗೆಲ್ಲಿ..!
ಬೆಂಗಳೂರು ನಗರ ಆಗ್ನೇಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸೈಬರ್ ಸ್ಟೇಷನ್ ಸೇರಿ 13 ಪೊಲೀಸ್ ಠಾಣೆಗಳಿದ್ದು, ಈ ಎಲ್ಲಾ ಪೊಲೀಸ್ ಠಾಣೆಗಳಿಗೆ ಬರುವ ದೂರುದಾರರು ಹಾಗೂ ಸಂದರ್ಶಕರಿಗಾಗಿ ಪೊಲೀಸ್ ಆ್ಯಪ್ ಸಿದ್ಧಪಡಿಸಲಾಗಿದೆ. ವಿವಿಧ ಕಾರಣಗಳಿಗಾಗಿ ಕಾಯುವ ಸಂದರ್ಶಕರು ಪೊಲೀಸರ ಸ್ಪಂದನೆ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ.
ಇದನ್ನೂ ಓದಿ: ಸೈಲೆಂಟ್ ಸುನೀಲ್ ಸೇರಿ ಯಾವುದೇ ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಸಿಎಂ ಬೊಮ್ಮಾಯಿ
ಹೆಸರು, ಮೊಬೈಲ್ ನಂಬರ್, ಠಾಣೆಯ ಹೆಸರು, ಯಾವ ಉದ್ದೇಶಕ್ಕಾಗಿ ಭೇಟಿ ಮಾಡಿರುವುದು? ಪೊಲೀಸರು ಸ್ಪಂದನಾ ಸಮಯ ಎಷ್ಟು? ಪೊಲೀಸರ ವರ್ತನೆ ಹೇಗಿತ್ತು? ಸೇರಿದಂತೆ ಒಟ್ಟಾರೆ ಠಾಣೆಗೆ ಎಷ್ಟು ಬಾರಿ ಭೇಟಿ ನೀಡಿದ್ದೇವೆ. ಸಂದರ್ಶನ ತೃಪ್ತಿಕರವಾಗಿದೆಯಾ? ಒಂದು ವೇಳೆ ಸಿಬ್ಬಂದಿ ವರ್ತನೆ ನಡವಳಿಕೆ ಸರಿಯಿಲ್ಲದಿದ್ದರೂ ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸಬಹುದಾಗಿದೆ. ನೂತನ QR ಕೋಡ್ ವ್ಯವಸ್ಥೆಯು ದೂರುದಾರರ ಪಾಲಿಗೆ ಆಶಾಕಿರಣವಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.