ಬಾಗಲಕೋಟೆ: ಪ್ರಕೃತಿಯೇ ಒಂದು ವಿಸ್ಮಯ. ಇಡೀ ವಿಶ್ವದಲ್ಲಿ ನಿತ್ಯ ಒಂದಿಲ್ಲೊಂದು ವಿಸ್ಮಯಕಾರಿ ಸಂಗತಿಗಳನ್ನು ನಾವು ಕಾಣುತ್ತೇವೆ. ಇಂತಹದ್ದೇ ಒಂದು ವಿಸ್ಮಯ ಇತ್ತೀಚಿಗೆ ಕಂಡುಬಂದಿದೆ. ದೇವರು ಇದ್ದಾನೋ, ಇಲ್ಲವೋ ಎಂಬ ಬಗ್ಗೆ ಬಹಳಷ್ಟು ಬಾರಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೂ ದೇವರು ಇದ್ದಾನೆ ಎಂಬ ನಂಬಿಕೆ ಹಲವರದು. ಸದ್ಯ, ಬಾಗಲಕೋಟೆ ಜಿಲ್ಲೆಯಲ್ಲಿ ಗುಳೇದಗುಡ್ಡ ಪಟ್ಟಣದ ಗುಗ್ಗರಿಯಲ್ಲಿ ಕಲ್ಲಿನ ಬಸವ ಹಾಲು ಕುಡಿಯುತ್ತೆ ಎಂಬ ಗುಲ್ಲು ಹಬ್ಬಿತ್ತು.


COMMERCIAL BREAK
SCROLL TO CONTINUE READING

ಈ ರೀತಿಯ ಸುದ್ದಿಯೊಂದು ಹರಡುತ್ತಿದ್ದಂತೆ ಕಲ್ಲಿನ ಬಸವ ಎಲ್ಲಾದರೂ ಹಾಲು ಕುಡಿಯುತ್ತಾ? ಎಂದು ಕೆಲವರು ಗೊಣಗಿದ್ದೂ ಉಂಟು. ಆದರೆ, ಇದು ವಿಸ್ಮಯವೋ, ಪವಾಡವೋ.... ಎಂಬಂತೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಗುಳೇದಗುಡ್ಡ ಪಟ್ಟಣದ ಗುಗ್ಗರಿಯಲ್ಲಿ ಕಲ್ಲಿನ ಬಸವಣ್ಣನಿಗೆ ಮಹಿಳೆಯರು ಚಮಚದಿಂದ ಹಾಲು ಕುಡಿಸಿದರೆ, ಒಂದು ಹನಿಯೂ ಕೆಳಗೆ ಚೆಲ್ಲದಂತೆ ಬಸವಣ್ಣ ಹಾಲು ಕುಡಿದಿರುವ ಘಟನೆ ನಡೆದಿದೆ.


ಇದನ್ನೂ ಓದಿ- ರಾಜ್ಯದ ಮೊದಲ ವೈ-ಫೈ ಗ್ರಾಮ ಮೈಸೂರಿನ ರಮ್ಮನಹಳ್ಳಿ; 5 ಡಿಫರೆಂಟ್ ಪ್ಲ್ಯಾನ್ಸ್ ಉಂಟು ಇಲ್ಲಿ


ಕಲ್ಲಿನ ಬಸವ ಹಾಲು ಕುಡಿಯುವ ವಿಷಯ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಭಕ್ತರ (Devotees) ದಂಡು ಬಸವಣ್ಣನ ಗುಡಿಗೆ ಲಗ್ಗೆ ಇಟ್ಟಿದೆ. ಈ ವಿಸ್ಮಯಕಾರಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. 


ಇದನ್ನೂ ಓದಿ- Malemahadeshwara Betta: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ


ಹಾಲು ಕುಡಿಯುವ ಕಲ್ಲಿನ ಬಸವಣ್ಣನ ವಿಡಿಯೋವನ್ನು ನೀವೂ ನೋಡಿ... https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.