COMMERCIAL BREAK
SCROLL TO CONTINUE READING

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಮೂಲಕ ವಿವಾದದ ಕಿಡಿ ಹೊತ್ತಿ ಉರಿಯುತ್ತಿದೆ. ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ ಸೇರಿದಂತೆ ಹಲವು ಬಗೆಯಲ್ಲಿ ಈ ಬಾರಿಯ ಪಠ್ಯದಲ್ಲಿ ಬದಲಾವಣೆ ಮಾಡಲಾಗಿದೆ.ಈ ಬೆನ್ನಲ್ಲೇ ನಾಡಿನ ಹೋರಾಟಗಾರರು ಟ್ವಿಟರ್ ಕ್ಯಾಂಪೇನ್ ನಡೆಸುವ ಮೂಲಕ ಬಿಜೆಪಿ ಆಡಳಿತದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗ್ತಿದೆ.


ಇದನ್ನು ಓದಿ: Photos: ವಯಸ್ಸು 30 ದಾಟಿದರೂ ಮದುವೆಯಾಗಿದಿರುವ ಸ್ಟಾರ್‌ ನಟಿಮಣಿಗಳು!


ಹೌದು, ಹಿಜಾಬ್ ಬಳಿಕ ಸಾಲು ಸಾಲು ವಿವಾದಗಳಿಗೆ ಸಾಕ್ಷಿಯಾಗಿದ್ದ ರಾಜ್ಯ, ಹಲವು ದಿನಗಳ ಕಾಲ ತಣ್ಣಗಿತ್ತು. ಇದೀಗ ಮತ್ತೊಂದು ವಿವಾದಕ್ಕೆ ಸ್ವತಃ ಸರ್ಕಾರವೇ ದಾರಿ ಮಾಡಿಕೊಟ್ಟಿದ್ದು, ಇದೀಗ ಪಠ್ಯ ಪರಿಷ್ಕರಣೆ ಬಗ್ಗೆ ನಾಡಿನೆಲ್ಲಡೆ ಅಪಸ್ವರ ಎದ್ದಿದೆ. ಶಾಲಾ ಮಕ್ಕಳ ಪಠ್ಯದಲ್ಲೂ ಕೇಸರೀಕರಣ ತುಂಬಿ ದ್ವೇಷ ಹರಡುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಮುಖ್ಯವಾಗಿ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಪಠ್ಯದಿಂದ ಬಹುತೇಕ ವಿಚಾರಗಳಿಗೆ ಕೋಕ್ ನೀಡಲಾಗಿದೆ. ಲಂಕೇಶ್, ಅರವಿಂದ ಮಾಲಗತ್ತಿ, ಸಾರಾ ಅಬೂಬಕ್ಕರ್ ಹೀಗೆ ಹಲವು ಹಿರಿಯ ಸಾಹಿತಿಗಳ ಗದ್ಯ, ಪದ್ಯಕ್ಕೂ ಪಠ್ಯದಿಂದ ಗೇಟ್ ಪಾಸ್ ನೀಡಲಾಗಿದೆ. ಬದಲಿಗೆ ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೇವಾರ್ ಭಾಷಣ, ಚಕ್ರವರ್ತಿ ಸೂಲಿಬೆಲೆಯ ಲೇಖನ ಹೀಗೆ ಬಲಬಂಥೀಯ ವಾದಗಳನ್ನು ಹೇಳುವ ವಿಚಾರಗಳನ್ನು ಸೇರಿಸಲಾಗಿದೆ ಎಂದು‌ ಹೇಳಲಾಗಿದೆ. ಇದನ್ನು ವಿರೋಧಿಸಿ ಪ್ರಗತಿಪರ ಚಿಂತಕರು, ಕನ್ನಡ ಪರ ಹೋರಾಟಗಾರರು ಟ್ವಿಟ್ಟರ್ ಅಭಿಯಾನ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ.ನಿತ್ಯ ಮುಂಜಾನೆ ಕರಿಬೇವಿನ ಎಲೆ ತಿನ್ನುವುದರಿಂದ ಈ ರೋಗಗಳು ನಿಮ್ಮ ಹತ್ತಿರವೂ ಸುಳಿಯಲ್ಲ


ಒಟ್ಟಾರೆ ಇದೀಗ ಪಠ್ಯ ಪರಿಷ್ಕರಣೆ ಮತ್ತೊಂದು ಸುತ್ತಿನ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಅರ್ಹತೆಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗುತ್ತಿದೆ.ಟ್ವಿಟರ್ ನಲ್ಲೂ ಅಭಿಯಾನ ನಡೆಸುವ ಮೂಲಕ ಭಾರೀ ಅಸಮಾಧಾನ ಹೊರಹಾಕಲಾಗುತ್ತಿದೆ. ಆದರೆ ಸರ್ಕಾರ ಮಾತ್ರ ತನ್ನ ನಿರ್ದಾರವೇ ಅಂತಿಮ ಎಂಬಂತೆ ಉತ್ತರಿಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.