ಯೋಗರಾಜ್ ಭಟ್ರುಗೆ ಚುನಾವಣಾ ಗೀತೆ ರಚಿಸೋ ಚಾನ್ಸ್; ರಾಯಭಾರಿಯಾಗಿ ರಾಹುಲ್ ದ್ರಾವಿಡ್
ಈ ಬಾರಿ ಚುನಾವಣೆಗೆ ಒಂದು ಅದ್ಭುತ ಗೀತೆಯನ್ನು ರಚನೆ ಮಾಡುವ ಜವಾಬ್ದಾರಿಯನ್ನು ಚಿತ್ರ ನಿರ್ದೇಶಕ ಹಾಗೂ ಗೀತೆ ರಚನೆಕಾರ ಯೋಗರಾಜ್ ಭಟ್ ಚುನಾವಣಾ ಆಯೋಗ ನೀಡಿದೆ.
ಬೆಂಗಳೂರು : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಸ್ಮರಣೀಯಗೊಳಿಸಿ, ಅತಿ ಹೆಚ್ಚು ಮತದಾರರನ್ನು ಮತಗಟ್ಟೆಗೆ ಸೆಳೆಯುವ ಮತ್ತು ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಚುನಾವಣೆಗೆ ಒಂದು ಅದ್ಭುತ ಗೀತೆಯನ್ನು ರಚನೆ ಮಾಡುವ ಜವಾಬ್ದಾರಿಯನ್ನು ಚಿತ್ರ ನಿರ್ದೇಶಕ ಹಾಗೂ ಗೀತೆ ರಚನೆಕಾರ ಯೋಗರಾಜ್ ಭಟ್ ಅವರಿಗೆ ಹಾಗೂ ಪಂಚತಂತ್ರ ಚಿತ್ರತಂಡಕ್ಕೆ ಚುನಾವಣಾ ಆಯೋಗ ನೀಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಹೂರ್ತ ಫಿಕ್ಸ್
ಮತದಾನದ ಅರಿವು ಮೂಡಿಸುವ ಗೀತೆಯನ್ನು ಯೋಗರಾಜ ಭಟ್ ಅವರು ರಚಿಸಿದ ನಂತರ ಪಂಚತಂತ್ರ ಚಿತ್ರತಂಡ ಚಿತ್ರೀಕರಣ ಮಾಡಲಿದೆ. ಈ ಗೀತೆಗೆ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದು, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜಿಸಲಿದ್ದಾರೆ. ಮೀಡಿಯಾ ಕನೆಕ್ಟ್ ಸಂಸ್ಥೆ ಈ ಹಾಡನ್ನು ಪ್ರಸ್ತುತಪಡಿಸುತ್ತಿದೆ. ಅಲ್ಲದೆ, ಯೋಗರಾಜ ಭಟ್ಟರ ಹಾಡು ಎಂದರೆ ಕೇಳಬೇಕೇ? ಈ ಹಾಡು ರಾಜ್ಯಾದ್ಯಂತ ಸಖತ್ ಹಿಟ್ ಆಗಲಿದೆ ಅನ್ನೋದಂತೂ ಖಂಡಿತ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಳಕೆಯಾಗಲಿದೆ ವಿವಿಪ್ಯಾಟ್!
ಚುನಾವಣಾ ರಾಯಭಾರಿಯಾಗಿ ರಾಹುಲ್ ದ್ರಾವಿಡ್ :
ರಾಜ್ಯದಲ್ಲಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಚುನಾವಣಾ ಆಯೋಗ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿದೆ.