ಬೆಂಗಳೂರು : ಕಾನೂನು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಧಾನಸೌಧದ ಮೂರನೆ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


COMMERCIAL BREAK
SCROLL TO CONTINUE READING

ನಿಯಮ-69 ರಡಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಪೊಲೀಸ್ ಇಲಾಖೆಯಲ್ಲಿ ಹೊಟೇಲ್ ನಲ್ಲಿ ತಿಂಡಿಗಳ ದರವಿದ್ದಂತೆ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.ಇಂತಹವರಿಂದ ಕಾನೂನು ಕಾಪಾಡುವ ನಿರೀಕ್ಷೆ ಸಾಧ್ಯವೇ? ಎಂದು ಪ್ರಶ್ನಿಸಿದರು.


ಇದನ್ನೂ ಓದಿ: Mekedatu Project: ತಮಿಳುನಾಡಿನ ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ ಕರ್ನಾಟಕ ಸರ್ಕಾರ


ಆಗ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra)  ಪ್ರತಿಕ್ರಿಯೆ ನೀಡಿ, ವರ್ಗಾವಣೆ ಮಾಡಲು ಹಿಂದೆ ಏಜೆಂಟ್ ಇಟ್ಟುಕೊಂಡಿದ್ದರು. ಅವರನ್ನು ನಾನು ಹತ್ತಿರ ಸೇರಿಸಲಿಲ್ಲ. ಪೊಲೀಸ್ ಇಲಾಖೆಯಲ್ಲಿ ಯಾವಾಗಿನಿಂದ ಭ್ರಷ್ಟಾಚಾರ ಶುರುವಾಗಿದೆ ಹೇಳಿ ಎಂದು ತಿಳಿಸಿದರು.


ಸಿದ್ದರಾಮಯ್ಯ: ಅದಕ್ಕಾಗಿಯೇ ಜನರು ಬದಲಿಸಿದ್ದಾರೆ. ನೀವು ಅಧಿಕಾರಕ್ಕೆ ಬಂದು ಏನು ಬದಲಾವಣೆ ತಂದಿದ್ದೀರಿ ಹೇಳಿ.ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ನಿಮ್ಮಲ್ಲಿ ದೂರದೃಷ್ಟಿ ಹೋಗಿದೆ.


ಗೃಹ ಸಚಿವ ಅರಗ ಜ್ಞಾನೇಂದ್ರ: ಹಳೆ ಕುದುರೆ ಹೊಸ ಸವಾರನನ್ನು ಎಳೆದುಕೊಂಡು ಹೋಗುತ್ತದೆ. ಹೆಂಡದಂಗಡಿಗೂ ಹೋಗುತ್ತದೆ, ಮತ್ತೆಲ್ಲಿಗೋ ಹೋಗುತ್ತದೆ. ನಾವು ನಿಭಾಯಿಸುತ್ತೇವೆ. ಏಜೆಂಟರನ್ನು ದೂರ ಇಟ್ಟಿದ್ದೇವೆ.ವರ್ಗಾವಣೆ ಭ್ರಷ್ಟಾಚಾರದ ಲೇಖನ ಪ್ರಕಟಿಸಿದ ಪತ್ರಿಕೆಯಿಂದ ಮಾಹಿತಿ ಕೇಳಿದ್ದೇವೆ. ಅವರೆಲ್ಲ ನನ್ನ ಕಾಲದಲ್ಲಿ ನೇಮಕವಾದವರಲ್ಲ,ನಿಮ್ಮ ಕಾಲದಲ್ಲಿ ಎಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಇತ್ತು.


ಸಿದ್ದರಾಮಯ್ಯ: ಆಗ ಜಾತಿ, ಧರ್ಮ ರಹಿತವಾಗಿ ಇರಬೇಕಾದ ಪೊಲೀಸ್ ಇಲಾಖೆ ಇತ್ತೀಚೆಗೆ ದಿಕ್ಕು ತಪ್ಪುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಬಡ್ಡಿಗೆ ಹಣ ತಂದು ವರ್ಗಾವಣೆ ಮಾಡಿಸಿಕೊಂಡಿದ್ದಾರಂತೆ.ಪೊಲೀಸರು ಲಂಚ ತಿಂದು ನಾಯಿಗಳ ತರ ಬಿದ್ದವರೆ ಎಂದು ಗೃಹ ಸಚಿವರು ಎಂಬ ಹೇಳಿಕೆ ನೀಡಿದ್ದು, ಕುದುರೆ ಸವಾರಿ ಮಾಡಲು ಆಗಲ್ಲ ನಿಮಗೆ ವೈಫಲ್ಯ ಒಪ್ಪಿಕೊಳ್ಳಿ ಎಂದರು.


ಇದನ್ನೂ ಓದಿ: ಕೇಂದ್ರ ಸರ್ಕಾರದ ಕೆಳಹಂತದ ಹುದ್ದೆಗಳ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಮನವಿ


ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಆ ಸಂದರ್ಭದಲ್ಲಿ ಗೃಹ ಸಚಿವರ ಹೇಳಿಕೆ ಉಲ್ಲೇಖಿಸಿದ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು, ಹೆಣ್ಣು ಮಕ್ಕಳು ಮಧ್ಯರಾತ್ರಿಯೂ ನಿರ್ಭೀತಿಯಿಂದ ಓಡಾಡಬೇಕು ಎಂದು ಹೇಳಿದ್ದರು ಎಂದಾಗ, ಆರಗ ಜ್ಞಾನೇಂದ್ರ ಅವರು ಗಾಂಧೀಜಿ ರಾಮರಾಜ್ಯವಾಗಬೇಕು ಎಂದಿದ್ದರು. ನಿಮ್ಮ ಕಾಲದಲ್ಲೂ ಆಗಿಲ್ಲ. ಮೃಗೀಯ ಮನಸ್ಸುಗಳಿರುತ್ತವೆ. ಹೆಣ್ಣು ಮಕ್ಕಳು ರಾತ್ರಿ 8, 9 ಗಂಟೆಯಲ್ಲಿ ಕಾಡಿಗೆ ಹೋಗಬಾರದು ಎಂದಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.


ಆರಗ ಜ್ಞಾನೇಂದ್ರ: ವಿಧಾನಸೌಧದ ಮೂರನೆ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೆ? ಎಂದು ಗೃಹ ಸಚಿವರು ಹೇಳಿದಾಗ, ಹಾಗೊಂದು ವೇಳೆ ಆಗಿದ್ದರೆ ಅದು ವೈಫಲ್ಯವೇ. ನೀವೂ ವೈಫಲ್ಯವನ್ನು ಒಪ್ಪಿಕೊಳ್ಳಿ ಎಂದು ಸಿದ್ದರಾಮಯ್ಯ ಕಾಲೆಳೆದರು.


ಇದೇ ವೇಳೆ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಬಂದ ಜಮ್ಮೀರ್ ಗೆ ಈಶ್ವರಪ್ಪ ತಿರುಗೇಟು ನೀಡಿದರು.


ಇದನ್ನೂ ಓದಿ: 'ಮಹಿಳಾ ಜೀವನೋಪಾಯ ಸಂವರ್ಧನೆಗೆ 1,500 ಕೋಟಿ ರೂ. ಮೀಸಲು'


ಈಶ್ವರಪ್ಪ:ನಿನಗೆ ಏನು ಗೊತ್ತಿದೆ ಕೂತ್ಕೊಳ್ಳಲೇ ಸುಮ್ಮನೆ ಎಂದು ಈಶ್ವರಪ್ಪ ಏಕವಚನ ಪ್ರಯೋಗ ಮಾಡಿದರು. 


ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಸಿದ್ಧರಾಮಯ್ಯ ಬಳಸಿದ ಶಬ್ದವನ್ನು ಕಡತದಿಂದ ತೆಗೆಯಬೇಕು ಎಂದು ಆಗ್ರಹಿಸಿದರು.


ಸ್ಪೀಕರ್ ಕಾಗೇರಿ: ಸಮಾಜದ ಸ್ವಾಸ್ಥ್ಯ ಕದಡುವಂತಹ ಯಾವುದೇ ಶಬ್ದ ಬಳಕೆ ಮಾಡಿದ್ದರೂ ಕಡತದಿಂದ ತೆಗೆಯಲಾಗುವುದು ಎಂದರು.


ಈಶ್ವರಪ್ಪ: ಮೇಲ್ಮನೆ ವಿರೋಧ ಪಕ್ಷದ ನಾಯಕನಾಗಿದ್ದೆ. ಆಗ ನೀವು ಸಿಎಂ ಆಗಿದ್ದಿರಿ. ಇಂತಹದ್ದೇ ಪ್ರಶ್ನೆ ಕೇಳಿದ್ದೆ. ಆಗ ಏಕೆ ಸ್ವೀಕರಿಸಲಿಲ್ಲ, ಒಪ್ಪಿಕೊಳ್ಳಲಿಲ್ಲ. ತನಿಖೆ ಮಾಡಿ ವರದಿ ತರಿಸುವ ಪ್ರಯತ್ನ ಮಾಡಿದಿರಿ ಎಂದು ಪ್ರಶ್ನಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.