'ಮಹಿಳಾ ಜೀವನೋಪಾಯ ಸಂವರ್ಧನೆಗೆ 1,500 ಕೋಟಿ ರೂ. ಮೀಸಲು'

ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಮಹಿಳಾ ಸಮುದಾಯದ ಸಬಲೀಕರಣಕ್ಕೆ ಅಭೂತಪೂರ್ವ ಆದ್ಯತೆ ಕೊಟ್ಟಿದ್ದು, ಮಹಿಳಾ ಜೀವನೋಪಾಯ ಉಪಕ್ರಮದಡಿ ರಾಜ್ಯದಲ್ಲಿ 1,500 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (C. N. Ashwath Narayan) ಹೇಳಿದ್ದಾರೆ.

Written by - Prashobh Devanahalli | Edited by - Manjunath N | Last Updated : Mar 25, 2022, 12:16 PM IST
  • ಬಿ-ಕ್ಲಿಪ್ ಸಂಘಟನೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರಿಗೆ ಜೀವಮಾನ ಸಾಧನೆ’ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.
'ಮಹಿಳಾ ಜೀವನೋಪಾಯ ಸಂವರ್ಧನೆಗೆ 1,500 ಕೋಟಿ ರೂ. ಮೀಸಲು' title=
Photo Courtesy: Facebook

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಮಹಿಳಾ ಸಮುದಾಯದ ಸಬಲೀಕರಣಕ್ಕೆ ಅಭೂತಪೂರ್ವ ಆದ್ಯತೆ ಕೊಟ್ಟಿದ್ದು, ಮಹಿಳಾ ಜೀವನೋಪಾಯ ಉಪಕ್ರಮದಡಿ ರಾಜ್ಯದಲ್ಲಿ 1,500 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (C. N. Ashwath Narayan) ಹೇಳಿದ್ದಾರೆ.

ಬಿ-ಕ್ಲಿಪ್ ಸಂಘಟನೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಹಿಳಾ ಸಾಧಕಿಯರಿಗೆ ಜೀವಮಾನ ಸಾಧನೆ’ ಪ್ರಶಸ್ತಿ ಪುರಸ್ಕಾರವನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಮಹಿಳೆಯರ ಸಾಧನೆಗಳು ವಿಶೇಷದ್ದೂ ಅಪರೂಪದ್ದೂ ಆಗಿದ್ದು, ವಿಶ್ವದ ಗಮನ ಸೆಳೆಯುವಂತಿವೆ. ಬೆಂಗಳೂರಿನಲ್ಲಂತೂ ಎಲ್ಲ ಅರ್ಹರಿಗೂ ಉದ್ಯೋಗದ ಖಾತ್ರಿಯಿದ್ದು, ಸ್ತ್ರೀಯರು ಉದ್ಯಮಶೀಲತೆಯನ್ನು ರೂಢಿಸಿಕೊಳ್ಳಲು ಸೂಕ್ತ ವಾತಾವರಣವಿದೆ ಎಂದು ಅವರು ತಿಳಿಸಿದರು.

ಈ ವರ್ಷವನ್ನು ರಾಜ್ಯದಲ್ಲಿ `ಮಹಿಳಾ ಜೀವನೋಪಾಯ ವರ್ಷ’ವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಣ, ಬ್ಯಾಂಕ್ ಖಾತೆ, ಅಡುಗೆ ಅನಿಲ, ಕುಡಿಯುವ ನೀರು, ಉದ್ದಿಮೆಗಳನ್ನು ನಡೆಸಲು ಸಾಲ ಸೌಲಭ್ಯ ಇತ್ಯಾದಿಗಳನ್ನೆಲ್ಲ ಒದಗಿಸುವ ಮೂಲಕ ಮಹಿಳೆಯರಿಗೆ ಸರ್ವಾಂಗೀಣ ನೆರವನ್ನು ನೀಡಲಾಗುತ್ತಿದೆ. ಇದರಿಂದಾಗಿ ಸ್ವಸ್ಥ ಸಮಾಜದ ನಿರ್ಮಾಣ ಸುಲಭವಾಗುತ್ತದೆ ಎಂದು ಅವರು ನುಡಿದರು.

ಇದನ್ನೂ ಓದಿ: 12 ಲಕ್ಷ ಸಾಫ್ಟ್ವೇರ್ ಎಂಜಿನಿಯರುಗಳ ಬಲದಿಂದ ಬೆಂಗಳೂರಿಗೆ ಸಿಲಿಕಾನ್ ಸಿಟಿ ಹಿರಿಮೆ

ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಮಹಿಳೆಯರು ಕೂಡ ಈಗ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಸ್ವಾವಲಂಬಿಳಾಗುವುದು ಬಹಳ ಮುಖ್ಯ.ಇದರಿಂದ ಕುಟುಂಬದ ಅಭಿವೃದ್ಧಿಯ ಜೊತೆಗೆ ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬಿ-ಕ್ಲಿಪ್ ಸಂಘಟನೆಯ ಮುಖ್ಯಸ್ಥ ಆನಂದ ಬೇಗೂರು, ಶಾಸಕ ರಿಜ್ವಾನ್ ಅರ್ಷದ್, ಆಮ್ ಆದ್ಮಿ ಪಕ್ಷದ ಮುಖಂಡ ಪೃಥ್ವಿ ರೆಡ್ಡಿ, ಮಾಜಿ ಸಚಿವ ಸಂತೋಷ್ ಲಾಡ್, ಬಿಜೆಪಿ ನಾಯಕಿ ಕಾವೇರಿ ಕೇದಾರನಾಥ್, ಮಿಮಿ ಪಾರ್ಥಸಾರಥಿ, ರಶ್ಮಿ ರವಿಕಿರಣ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ವೈದ್ಯಕೀಯ ಉಪಕರಣಗಳ ಖರೀದಿ ಹಗರಣ: ಡಿಸಿಎಂ ಅಶ್ವತ್ ನಾರಾಯಣ್ ರಾಜಿನಾಮೆಗೆ AAP ಆಗ್ರಹ

6 ಸಾಧಕಿಯರಿಗೆ ಜೀವಮಾನ ಸಾಧನೆ ಪುರಸ್ಕಾರ

ಸಮಾರಂಭದಲ್ಲಿ, ನಾನಾ ಕ್ಷೇತ್ರಗಳಲ್ಲಿ ಅಪಾರ  ಸಾಧನೆ ಮಾಡಿರುವ ಜಾಯ್ ಶ್ರೀನಿವಾಸ್, ಶುಕ್ಲಾ ಬೋಸ್, ಕಾತ್ಯಾಯಿನಿ ಚಾಮರಾಜ್, ಮಾಯಾ ಶರ್ಮ, ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಮತ್ತು ಎಸ್.ಚಿತ್ರಾ ಅವರಿಗೆ `ಜೀವಮಾನ ಸಾಧನೆ’ ಪುರಸ್ಕಾರವನ್ನು ಸಚಿವ ಅಶ್ವತ್ಥನಾರಾಯಣ ಪ್ರದಾನ ಮಾಡಿದರು.ಜೊತೆಗೆ ಸಮಾಜಸೇವೆ, ಸಿಎಸ್ಆರ್, ಮಾಧ್ಯಮ, ಆರೋಗ್ಯ, ಕ್ರೀಡೆ, ಪೊಲೀಸ್, ವಿಜ್ಞಾನ, ಸಾಹಿತ್ಯ, ಎನ್ಎಸ್ಎಸ್, ಕಲೆ ಮತ್ತು ಸಂಸ್ಕೃತಿ, ವ್ಯಾಪಾರೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿರುವ 90 ಕ್ಕೂ ಹೆಚ್ಚು ಸಾಧಕಿಯರಿಗೆ ಪ್ರಶಸ್ತಿಗಳನ್ನು ಕೊಟ್ಟು, ಸನ್ಮಾನಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News