ಬೀದರ್ : ಪಶ್ಚಿಮ ಬಂಗಾಳದ ಸಿಲಿಗುಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೀದರ್ ಮೂಲದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕಮಲನಗರ ತಾಲೂಕಿನ ಮುರ್ಗ (ಕೆ) ಗ್ರಾಮದ ಮಾಧವ ಜಟಿಂಗರಾವ್ ಕಾಲೇಕರ್ (58) ಮೃತಪಟ್ಟ ಯೋಧ. ಕಳೆದ 24 ವರ್ಷಗಳಿಂದ‌ ಬಿಎಸ್.ಎಫ್ ಕಾನ್ಸಟೆಬಲ್ ಆಗಿದ್ದ ಮಾಧವ ಅವರು ಜಮ್ಮು ಕಾಶ್ಮೀರದಲ್ಲಿ ಸೇವೆ ಬಳಿಕ ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಪಶ್ಚಿಮ ಬಂಗಾಳಕ್ಕೆ ವರ್ಗವಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹಳ್ಳ ದಾಟಲು ಹಗ್ಗವೇ ಆಸರೆ, ಮಕ್ಕಳಿಗೆ ಪಾಲಕರ ಹೆಗಲೇ ಗಟ್ಟಿ!


ಸೇವೆಗೆ ಹಾಜರಾಗಲು ತೆರಳಿದ್ದ ಅವರಿಗೆ ರೈಲ್ವೆ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ತೀವ್ರ ಹೃದಯಾಘಾತ ಕಾರಣ ಸಾವನ್ನಪ್ಪಿದ್ದಾರೆ.


ಮೃತ ಮಾಧವಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಬಿಎಸ್ಎಫ್ ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಕುಟುಂಬಸ್ಥರಿಗೆ ಖಚಿತಪಡಿಸಿದ್ದಾರೆ. ವಿಶೇಷ ವಿಮಾನದ ಮೂಲಕ ತಡರಾತ್ರಿ ಸ್ವಗ್ರಾಮಕ್ಕೆ ಮೃತದೇಹ ಬರುವ ಸಾಧ್ಯತೆ ಇದೆ.


ಇದನ್ನೂ ಓದಿ:ಬುದ್ಧಿಮಾಂದ್ಯ ಮಗನನ್ನು ಹತ್ಯೆಗೈದ ಕ್ರೂರ ತಾಯಿ 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.