ಬುದ್ಧಿಮಾಂದ್ಯ ಮಗನನ್ನು ಹತ್ಯೆಗೈದ ಕ್ರೂರ ತಾಯಿ

ಮಾತು ಬರದೆ ಬುದ್ದಿಮಾಂದ್ಯನಾಗಿದ್ದ ಮಗುವನ್ನು ಸ್ವತಃ ತಾಯಿಯೇ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

Written by - Zee Kannada News Desk | Last Updated : Aug 5, 2022, 02:00 PM IST
  • ಆದರೆ ನಿನ್ನೆ ಏಕಾಏಕಿ ತಾಯಿ ಮಧ್ಯಾಹ್ನ 3 ಗಂಟೆಗೆ ಬಿಲ್ಡಿಂಗ್ ನಿಂದ ಮಗುವನ್ನು ಎಸೆದು ಕ್ರೌರ್ಯ ಮೆರೆದಿದ್ದಾಳೆ.
  • ಇದೆ ವೇಳೆ ಮಗುವನ್ನು ಕೆಳಗೆ ಎಸೆದು ಆತ್ಮಹತ್ಯೆಗೆ ಯತ್ನಿಸುವಂತೆ ಆಕೆ ನಡೆಸಿದ್ದಾಳೆ ಎನ್ನಲಾಗಿದೆ.
ಬುದ್ಧಿಮಾಂದ್ಯ ಮಗನನ್ನು ಹತ್ಯೆಗೈದ ಕ್ರೂರ ತಾಯಿ  title=

ಬೆಂಗಳೂರು: ಮಾತು ಬರದೆ ಬುದ್ದಿಮಾಂದ್ಯನಾಗಿದ್ದ ಮಗುವನ್ನು ಸ್ವತಃ ತಾಯಿಯೇ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಗುವಿಗೆ ಮಾತು ಬರುವುದಿಲ್ಲ ಎಂದು ಆರೋಪಿ ಸುಷ್ಮಾ ತನ್ನ ಮಗನ ಬಗ್ಗೆಯೇ ಅಸಡ್ಡೆ ಧೋರಣೆಯನ್ನು ಹೊಂದಿದ್ದಳು ಹೀಗಾಗಿ ಆಕೆ 20 ದಿನಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು.ಆದರೆ ಕೊನೆಗೆ ತಂದೆ ಕಿರಣ್ ಆ ಮಗುವನ್ನು ಹುಡುಕಿ ತಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Vikrant Rona Collection : 150 ಕೋಟಿ ಗಡಿ ದಾಟುತ್ತಾ ವಿಕ್ರಾಂತ್ ರೋಣ? 7ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

ಆದರೆ ನಿನ್ನೆ ಏಕಾಏಕಿ ತಾಯಿ ಮಧ್ಯಾಹ್ನ 3 ಗಂಟೆಗೆ ಬಿಲ್ಡಿಂಗ್ ನಿಂದ ಮಗುವನ್ನು ಎಸೆದು ಕ್ರೌರ್ಯ ಮೆರೆದಿದ್ದಾಳೆ.ಇದೆ ವೇಳೆ ಮಗುವನ್ನು ಕೆಳಗೆ ಎಸೆದು ಆತ್ಮಹತ್ಯೆಗೆ ಯತ್ನಿಸುವಂತೆ ಆಕೆ ನಡೆಸಿದ್ದಾಳೆ ಎನ್ನಲಾಗಿದೆ.

ಮಗುವಿನ ತಂದೆ ಕಿರಣ್ ನೀಡಿದ ದೂರಿನ ಮೇರೆಗೆ ಸುಷ್ಮಾ ಮೇಲೆ ಸಂಪಂಗಿರಾಮನಗರ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News