Astrology:  ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಹಣೆಬರಹದೊಂದಿಗೆ ಹುಟ್ಟುತ್ತಾನೆ. ಆದರೆ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ಅದೃಷ್ಟವಂತರು, ಅವರು ತಮ್ಮ ಆಪ್ತರ ಅದೃಷ್ಟವನ್ನು ಹೊಳೆಯುವಂತೆ ಮಾಡುತ್ತಾರೆ. ಅವರ ಹೆತ್ತವರು, ಜೀವನ ಸಂಗಾತಿ ಅವರ ಒಡನಾಟದ ಲಾಭವನ್ನು ಪಡೆಯುತ್ತಾರೆ, ಅವರ ಅದೃಷ್ಟವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ಅಂತಹ ಕೆಲವು ರಾಶಿಚಕ್ರ ಚಿಹ್ನೆಗಳ ಹುಡುಗಿಯರ ಬಗ್ಗೆ ತಿಳಿಸಲಿದ್ದೇವೆ. ಜ್ಯೋತಿಷ್ಯದ ಪ್ರಕಾರ 3 ರಾಶಿಚಕ್ರದ ಹುಡುಗಿಯರು ಪತಿಯ ಪಾಲಿಗೆ ಅದೃಷ್ಟವಂತರು ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಈ ರಾಶಿಯ ಹುಡಿಗಿಯರೊಂದಿಗೆ ವಿವಾಹದಿಂದ ಗಂಡನ ಅದೃಷ್ಟ ಹೊಳೆಯುತ್ತಂತೆ !
ವೃಷಭ ರಾಶಿ -
ವೃಷಭ ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು (Lucky). ಇವರು ತುಂಬಾ ಕಠಿಣ ಪರಿಶ್ರಮಿಗಳು, ಪ್ರಾಮಾಣಿಕರು ಮತ್ತು ಬುದ್ಧಿವಂತರೂ ಹೌದು. ಈ ರಾಶಿಯ ಹೆಣ್ಣು ಮಕ್ಕಳು  ತನ್ನ ಗಂಡನಿಗೆ ತುಂಬಾ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತಾರೆ. ಈ ರಾಶಿಯ ಹುಡುಗಿಯರನ್ನು ಮದುವೆಯಾದ ವ್ಯಕ್ತಿಯು ಜೀವನದಲ್ಲಿ ವೇಗವಾಗಿ ಯಶಸ್ಸನ್ನು ಪಡೆಯುತ್ತಾನೆ. ಈ ರಾಶಿಯ ಹುಡುಗಿಯರು ತಮ್ಮ ಗಂಡನನ್ನು ಎಲ್ಲ ರೀತಿಯಲ್ಲಿ ಬೆಂಬಲಿಸುತ್ತಾರೆ ಮತ್ತು ಪತಿಯ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತಾರೆ.  


ಇದನ್ನೂ ಓದಿ- Sun Transit: ಇಂದಿನಿಂದ ಸೂರ್ಯನಂತೆ ಹೊಳೆಯಲಿದೆ ಈ 4 ರಾಶಿಯವರ ಭವಿಷ್ಯ , ಇವರು ಮುಟ್ಟಿದ್ದೆಲ್ಲಾ ಚಿನ್ನ


ಕನ್ಯಾ ರಾಶಿ - ಕನ್ಯಾ ರಾಶಿಯ ಹುಡುಗಿಯರು ತುಂಬಾ ಬುದ್ಧಿವಂತರು. ಅವರು ಎಲ್ಲವನ್ನೂ ಚಿಂತನಶೀಲವಾಗಿ ಮತ್ತು ಚೆನ್ನಾಗಿ ಮಾಡುತ್ತಾರೆ. ಇವರು ಸ್ವಭಾವತಃ ತುಂಬಾ ಪ್ರೀತಿ ಮತ್ತು ಕಾಳಜಿಯುಳ್ಳವರು. ಈ ರಾಶಿಯ ಹುಡುಗಿಯರು ತನ್ನ ಪತಿ (Husband) ಮತ್ತು ಕುಟುಂಬದ ಎಲ್ಲ ಸದಸ್ಯರ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅವರು ತಮ್ಮ ಸಂಗಾತಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿಯೊಂದು ಸುಖ-ದುಃಖಗಳಲ್ಲಿಯೂ ಅವನೊಂದಿಗೆ ಗಟ್ಟಿಯಾಗಿ ನಿಲ್ಲುತ್ತಾಳೆ. 


ಇದನ್ನೂ ಓದಿ- ಹೋಳಿ ದಿನ ರೂಪುಗೊಳ್ಳುತ್ತಿದೆ ಮೂರು ರೀತಿಯ ರಾಜಯೋಗ, ಯಾರ ಮೇಲೆ ಏನು ಪರಿಣಾಮ ?


ಮಕರ ರಾಶಿ - ಮಕರ ರಾಶಿಯ ಹುಡುಗಿಯರು ತುಂಬಾ ಶ್ರಮಶೀಲರು ಮತ್ತು ಭಾವೋದ್ರಿಕ್ತರು. ಇವರು ಯಾವುದೇ ಸವಾಲುಗಳಿಗೆ ಹೆದರುವುದಿಲ್ಲ ಮತ್ತು ಅಷ್ಟು ಸುಲಭಕ್ಕೆ ಏನನ್ನೂ ಬಿಟ್ಟುಕೊಡುವುದಿಲ್ಲ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದನ್ನು ಪೂರ್ಣಗೊಳಿಸಿದ ನಂತರವೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಈ ರಾಶಿಯ ಹುಡುಗಿಯರು ಜೀವನದಲ್ಲಿ ಬಹಳ ಯಶಸ್ವಿಯಾಗುತ್ತಾರೆ ಮತ್ತು ತನ್ನ ಜೀವನ ಸಂಗಾತಿಯ ಯಶಸ್ಸಿನಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಲಾಗುತ್ತದೆ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.