ಶನಿ ಮಹಾತ್ಮನಿಗೆ ನೇರವಾಗಿ ಸಂಬಂಧಿಸಿದೆಯಂತೆ ಈ ಕನಸುಗಳು ! ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ತಿಳಿಯಿರಿ

ಶನಿ ದೇವರಿಗೆ ಸಂಬಂಧಿಸಿದ ಕನಸುಗಳು ಬಿದ್ದರೆ, ಅದು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಕಾರಣವಾಗಬಹುದು ಎನ್ನುವುದನ್ನು ತೋರಿಸುತ್ತದೆ. ಶನಿದೇವನು ನಿಮ್ಮ ಮೇಲೆ ಕೃಪೆ ತೋರುತ್ತಾನೆಯೋ ಅಥವಾ ಅವನ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆಯೋ ಎನ್ನುವುದನ್ನು ಕನಸುಗಳು ಹೇಳುತ್ತವೆ. 

Written by - Zee Kannada News Desk | Last Updated : Mar 14, 2022, 01:29 PM IST
  • ಈ ಕನಸುಗಳು ಶನಿದೇವನಿಗೆ ಸಂಬಂಧಿಸಿದ ಸೂಚನೆಗಳನ್ನು ನೀಡುತ್ತವೆ
  • ಈ ರೀತಿಯ ಕನಸು ಬಿದ್ದರೆ ಏನರ್ಥ ತಿಳಿಯಿರಿ
  • ಶುಭ ಮತ್ತು ಅಶುಭ ಘಟನೆಗಳ ಸೂಚನೆಯನ್ನು ನೀಡುತ್ತದೆ
ಶನಿ ಮಹಾತ್ಮನಿಗೆ ನೇರವಾಗಿ ಸಂಬಂಧಿಸಿದೆಯಂತೆ ಈ ಕನಸುಗಳು ! ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ತಿಳಿಯಿರಿ  title=
ಈ ರೀತಿಯ ಕನಸು ಬಿದ್ದರೆ ಏನರ್ಥ ತಿಳಿಯಿರಿ (file photo)

ನವದೆಹಲಿ : ಕನಸುಗಳು ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅವು ನಮ್ಮ ಮನಸ್ಸಿನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ (Dream interpretation) . ನಮ್ಮ ಭವಿಷ್ಯದ ಮೇಲೆಯೂ  ಪರಿಣಾಮ ಬೀರುತ್ತವೆ. ಕನಸುಗಳಿಂದ ಪಡೆಯುವ ಶುಭ ಮತ್ತು ಅಶುಭ ಸೂಚನೆಗಳನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ (swapna Shaastra).   

ಶನಿಯ ಕೃಪೆ ಇರಲಿದೆಯೇ ಅಥವಾ ಬೀರಲಿದ್ದಾನೆಯೇ ವಕ್ರ ದೃಷ್ಟಿ : 
 ಶನಿ ದೇವರಿಗೆ (Shani deva) ಸಂಬಂಧಿಸಿದ ಕನಸುಗಳು ಬಿದ್ದರೆ, ಅದು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಬದಲಾವಣೆಗಳಿಗೆ ಕಾರಣವಾಗಬಹುದು ಎನ್ನುವುದನ್ನು ತೋರಿಸುತ್ತದೆ. ಶನಿದೇವನು ನಿಮ್ಮ ಮೇಲೆ ಕೃಪೆ ತೋರುತ್ತಾನೆಯೋ ಅಥವಾ ಅವನ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆಯೋ ಎನ್ನುವುದನ್ನು ಕನಸುಗಳು ಹೇಳುತ್ತವೆ (dream interpretation). 

ಇದನ್ನೂ ಓದಿ : ಬಡತನ ವಕ್ಕರಿಸುವ ಮೊದಲು ಸಿಗುತ್ತವೆ ಈ ಸಂಕೇತಗಳು, ಎಚ್ಚೆತ್ತುಕೊಳ್ಳದಿದ್ದರೆ ಎದುರಿಸಬೇಕಾಗುತ್ತದೆ ನಷ್ಟ

ಕನಸಿನಲ್ಲಿ ಶನಿದೇವನ ವಿಗ್ರಹ (Shani deva statue)ಅಥವಾ ಚಿತ್ರ ಕಂಡುಬಂದರೆ, ಮುಂಬರುವ ಸಮಯವು ನಿಮಗೆ ಸಂತೋಷವನ್ನು ನೀಡುತ್ತದೆ ಎಂದರ್ಥ. ವ್ಯಕ್ತಿಯು ತನ್ನ ಜಾತಕದಲ್ಲಿ ಶನಿಯ ಸ್ಥಾನಕ್ಕೆ ಅನುಗುಣವಾಗಿ ಈ ಕನಸಿನ ಫಲಿತಾಂಶವನ್ನು ಪಡೆಯುತ್ತಾನೆ (shanideva place in kundali). ಜಾತಕದಲ್ಲಿ ಶನಿಯ ಸ್ಥಾನ ಶುಭವಾಗಿದ್ದರೆ ಉತ್ತಮ ಫಲಿತಾಂಶಗಳು ಬರುತ್ತವೆ. 

ನಿಮ್ಮ ಕನಸಿನಲ್ಲಿ ಶನಿದೇವನು ನಿಮ್ಮನ್ನು ಆಶೀರ್ವದಿಸಿದರೆ, ಈ ಕನಸು ತುಂಬಾ ಮಂಗಳಕರವಾಗಿರುತ್ತದೆ. ಇದರರ್ಥ ಶನಿದೇವನು ನಿಮ್ಮ ಜೀವನದ ಎಲ್ಲಾ ತೊಂದರೆಗಳನ್ನು ಕೊನೆಗೊಳಿಸಲಿದ್ದಾನೆ. ಅನಾರೋಗ್ಯ ಪೀಡಿತ ವ್ಯಕ್ತಿಯು ಇಂಥಹ  ಕನಸನ್ನು ಕಂಡರೆ, ಅವನ ರೋಗಗಳು ಶೀಘ್ರದಲ್ಲಿಯೇ ಕೊನೆಯಾಗಲಿದೆ ಎನ್ನುವುದನ್ನು ಸೂಚಿಸುತ್ತದೆ. 

ಇದನ್ನೂ ಓದಿ : Lakshmana Plant: ದೇವಿ ಲಕ್ಷ್ಮಿಗೆ ಈ ಸಸ್ಯ ತುಂಬಾ ಇಷ್ಟ, ನಿಮ್ಮ ಮನೆಯಲ್ಲಿಯೂ ಇದ್ದರೆ ಹಣದ ಹೊಳೆಯೇ ಹರಿಯಲಿದೆ

ಕನಸಿನಲ್ಲಿ ಶನಿದೇವರ ದೇವಸ್ಥಾನ ಕಂಡರೆ (Shani Temple), ಶನಿದೇವನ ಆಶೀರ್ವಾದ ನಿಮ್ಮ ಮೇಲಿರಲಿದೆ ಎಂದರ್ಥ. ಅಂತಹ ಕನಸು ವ್ಯಕ್ತಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುತ್ತದೆ ಎನ್ನುವುದನ್ನು ತೋರಿಸುತ್ತದೆ. ಜೊತೆಗೆ ಕೆಲವು ಪ್ರಮುಖ ಕೆಲಸದಲ್ಲಿ ಯಶಸ್ಸನ್ನು ಪಡೆಯುವ  ಸಾಧ್ಯತೆಯನ್ನು ತೋರಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News