Best day to cut nails: ಸನಾತನ ಧರ್ಮದಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಕೆಲಸಗಳಿಗೆ ಕೆಲವು ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಪಾಲಿಸಿದರೆ ದೇವತೆಗಳು ಸಂತೋಷಪಡುತ್ತಾರೆ. ಒಂದು ವೇಳೆ, ತಪ್ಪಾದ ರೀತಿಯಲ್ಲಿ ಮತ್ತು ತಪ್ಪು ಸಮಯದಲ್ಲಿ ಮಾಡಿದರೆ ಅಸಮಾಧಾನಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಇನ್ನು ಉಗುರು ಕತ್ತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಟ್ಟುಪಾಡುಗಳಿವೆ. ಈ ಬಗ್ಗೆ ಹಿರಿಯರು ಮಾತನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವೆ. ಅಂದಹಾಗೆ ಕೆಲವೊಂದು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭವೆಂಬುದು ನಿಮಗೆ ತಿಳಿದಿದೆಯೇ? ಉಗುರು ಕತ್ತರಿಸಲು ಯಾವುದು ಶುಭ ದಿನ ಮತ್ತು ಸರಿಯಾದ ಸಮಯ ಯಾವುದು ಎಂಬುದನ್ನು ಮುಂದಕ್ಕೆ ತಿಳಿಯೋಣ.


ಇದನ್ನೂ ಓದಿ: ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!


ವಾರದ ಕೆಲವು ದಿನ ಉಗುರು ಕತ್ತರಿಸುವುದು ಅಶುಭ. ಅಂತಹ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಜೀವನದಲ್ಲಿ ಕಷ್ಟಗಳು, ತೊಂದರೆಗಳು ಮತ್ತು ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಪ್ರಗತಿಯಲ್ಲಿ ಅಡೆತಡೆಗಳಿವೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಶನಿವಾರ ಉಗುರು ಕತ್ತರಿಸಿದರೆ ಶನಿದೇವ ಕೋಪಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಇದರಿಂದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಇನ್ನು ಭಾನುವಾರದಂದು ಉಗುರು ಕತ್ತರಿಸುವುದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ, ಇದು ಆತ್ಮ ವಿಶ್ವಾಸವನ್ನು ಸಹ ಕಡಿಮೆ ಮಾಡುತ್ತದೆ. ಪ್ರಗತಿ ಸಾಧಿಸಲು ಅಡೆತಡೆಗಳಿರುತ್ತವೆ. ಗುರುವಾರ ಮತ್ತು ಮಂಗಳವಾರವೂ ಉಗುರುಗಳನ್ನು ಕತ್ತರಿಸುವುದನ್ನು ನಿಷಿದ್ಧ.


ಶಾಸ್ತ್ರಗಳ ಪ್ರಕಾರ, ಬುಧವಾರ ಮತ್ತು ಶುಕ್ರವಾರ ಉಗುರು ಕತ್ತರಿಸಲು ಉತ್ತಮ ದಿನಗಳು. ಬುಧವಾರ ಉಗುರು ಕತ್ತರಿಸುವುದರಿಂದ ಸಂಪತ್ತು ಹೆಚ್ಚುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರುತ್ತದೆ. ಶುಕ್ರವಾರ ಉಗುರು ಕತ್ತರಿಸುವುದರಿಂದ ಸೌಂದರ್ಯ ಮತ್ತು ಆಕರ್ಷಣೆ ಹೆಚ್ಚುತ್ತದೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಬಹಳಷ್ಟು ಸಂಪತ್ತು ಸಿಗುತ್ತದೆ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.


ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಅಸಲಿ ವಯಸ್ಸೆಷ್ಟು? ಈಕೆ ಮೊದಲು ನಟಿಸಿದ್ದು ತೆಲುಗಿನಲ್ಲಿ ಅಲ್ಲ…


ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ