Anushka Shetty Age and Career: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಯಾರಿಗೆ ಗೊತ್ತಿಲ್ಲ ಹೇಳಿ! ಅಂದಹಾಗೆ ಇವರ ನಿಜ ಹೆಸರು ಸ್ವೀಟಿ ಶೆಟ್ಟಿ. ಸಿನಿಮಾ ಜಗತ್ತಿಗೆ ಕಾಲಿಟ್ಟ ಬಳಿಕ ಅನುಷ್ಕಾ ಶೆಟ್ಟಿ ಆಗಿ ಮರುನಾಮಕರಣ ಮಾಡಿಕೊಂಡರು. 7 ನವೆಂಬರ್ 1981ರಲ್ಲಿ ಜನಿಸಿದ ಅನುಷ್ಕಾ ಶೆಟ್ಟಿ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಫೇಮಸ್ ನಟಿ.
ಇದನ್ನೂ ಓದಿ: ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?
ಮೂರು ಫಿಲ್ಮ್‌ಫೇರ್ ಸೌತ್ ಅವಾರ್ಡ್, ಎರಡು ನಂದಿ ಅವಾರ್ಡ್, ಎರಡು SIIMA ಅವಾರ್ಡ್ ಮತ್ತು ಒಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. 50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಇನ್ನು 2010 ರಲ್ಲಿ ತಮಿಳುನಾಡು ಸರ್ಕಾರ “ಕಲೈಮಾಮಣಿ” ನೀಡಿ ಗೌರವಿಸಿದೆ.
2005ರ ತೆಲುಗು ಚಲನಚಿತ್ರ ‘ಸೂಪರ್’ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟರು. ಇದು ಅವರಿಗೆ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟಿ - ತೆಲುಗು ನಾಮನಿರ್ದೇಶನಗೊಳ್ಳುವಂತೆ ಮಾಡಿತು. ಅದಾದ ಬಳಿಕ ರಾಜಮೌಳಿ ಅವರ ಬ್ಲಾಕ್ ಬಸ್ಟರ್ ಹಿಟ್ ವಿಕ್ರಮಾರ್ಕುಡು ಚಿತ್ರದಲ್ಲಿ ನಟಿಸಿದರು. ಅದರ ನಂತರ ನಟಿಸಿದ ಲಕ್ಷ್ಯಂ (2007), ಶೌರ್ಯಂ (2008), ಮತ್ತು ಚಿಂತಕಾಯಲ ರವಿ (2008) ಕೂಡ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡವು.
2009 ರಲ್ಲಿ, ಶೆಟ್ಟಿ ಅವರು ತೆಲುಗು ಫ್ಯಾಂಟಸಿ ಚಲನಚಿತ್ರ 'ಅರುಂಧತಿ’ಯಲ್ಲಿ ದ್ವಿಪಾತ್ರಗಳನ್ನು ನಿರ್ವಹಿಸಿದರು, ಇದು ಅವರ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಕಾರಣವಾಯಿತು. ಅಷ್ಟೇ ಅಲ್ಲದೆ, ಈ ಸಿನಿಮಾಗೆ ನಂದಿ ಪ್ರಶಸ್ತಿ ಕೂಡ ಬಂದಿತ್ತು.
ಇನ್ನು ಅನೇಕರಿಗೆ ಅನುಷ್ಕಾ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವುದಷ್ಟೇ ತಿಳಿದಿದೆ. ಆದರೆ ಈಕೆ ಮೊದಲು ಅಭಿನಯಿಸಿರುವುದು ಕನ್ನಡದ ಧಾರವಾಹಿಯೊಂದರಲ್ಲಿ ಎಂಬುದು ಕೆಲವರಿಗಷ್ಟೇ ಗೊತ್ತು. ಆ ಧಾರವಾಹಿ ಹೆಸರು ‘ಬಣ್ಣ’
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ತುಳು ಮಾತನಾಡುವ ಬಂಟ ಕುಟುಂಬದಿಂದ ಬಂದ ಅನುಷ್ಕಾ ತಾಯಿ ಹೆಸರು ಪ್ರಫುಲ್ಲ ಮತ್ತು ತಂದೆದ ಎ.ಎನ್. ವಿಠಲ್ ಶೆಟ್ಟಿ. ಇವರಿಗೆ ಗುಣರಂಜನ್ ಶೆಟ್ಟಿ ಮತ್ತು ಸಾಯಿ ರಮೇಶ್ ಶೆಟ್ಟಿ ಎಂಬ ಇಬ್ಬರು ಅಣ್ಣಂದಿರಿದ್ದಾರೆ.
ಇದನ್ನೂ ಓದಿ: ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!
ಅನುಷ್ಕಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್’ನಲ್ಲಿ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಪಡೆದರು. ಜೊತೆಗೆ ಯೋಗ ತರಬೇತುದಾರರೂ ಆಗಿದ್ದರು. ಅನುಷ್ಕಾಗೆ ಸದ್ಯ 42 ವರ್ಷ ವಯಸ್ಸಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ