ಬೆಂಗಳೂರು : ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಚಳಿಗಾಲದಲ್ಲಿ ನಾನಾ ರೀತಿಯ ಸೋಂಕು ತಗಲುವ ಭಯವಿರುತ್ತದೆ. ಈ ಕಾರಣದಿಂದಾಗಿ ದೇಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಕೊಳ್ಳುವುದು ಅಗತ್ಯ. ಇನ್ನು ಆರೋಗ್ಯಕರವಾಗಿರಬೇಕಾದರೆ ನಾವು ಸೇವಿಸುವ ಆಹಾರದತ್ತ ಗಮನಹರಿಸಬೇಕು. ಇದರ ಜೊತೆಗೆ ಫಿಟ್ ಆಗಿರುವ ಇನ್ನೊಂದು ಮಾರ್ಗವೆಂದರೆ ತೂಕ ಕಳೆದುಕೊಳ್ಳುವುದು. ಇದಕ್ಕಾಗಿ ರೋಗ ನಿರೋಧಕ ಹೆಚ್ಚಿಸುವ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ದೇಹ ತೂಕ ಕಳೆದುಕೊಂಡು ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುವಂತಾಗಲು   ಗ್ರೀನ್ ಟೀಗೆ ನಿಂಬೆ ರಸ ಬೆರೆಸಬೇಕು.  


COMMERCIAL BREAK
SCROLL TO CONTINUE READING

ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳು : 
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : 
ಗ್ರೀನ್ ಟೀಗೆ ನಿಂಬೆ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದು ದೇಹದ  ಎನರ್ಜಿ ಲೆವೆಲ್ ಅನ್ನು ಕೂಡಾ ಹೆಚ್ಚಿಸುತ್ತದೆ. ಪ್ರತಿದಿನ ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ  ದೇಹವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ : Fruit For Sugar Control : ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ರಾಮಬಾಣ ಈ ರಾಮಫಲ


ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : 
ಗ್ರೀನ್ ಟೀ ಮತ್ತು ನಿಂಬೆ ರಸವನ್ನು ಕುಡಿಯುವುದರಿಂದ, ನಿಂಬೆಯಲ್ಲಿರುವ ವಿಟಮಿನ್-ಸಿ ಉರಿಯೂತವನ್ನು ನಿಯಂತ್ರಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಪ್ರತಿದಿನ ಗ್ರೀನ್ ಟೀ ಸೇವಿಸುವುದರಿಂದ ನೆಗಡಿ ಮತ್ತು ಕೆಮ್ಮು ದೂರವಾಗುತ್ತದೆ.


ತೂಕ ಕಡಿಮೆ ಮಾಡಿಕೊಳ್ಳಲು : 
ನಿಂಬೆ ರಸವನ್ನು ಗ್ರೀನ್ ಟೀಯೊಂದಿಗೆ ಬೆರೆಸಿ ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಈ ಪಾನೀಯವನ್ನು ಸೇವಿಸುತ್ತಾ ಬಂದರೆ  ಬಳುಕುವ ಬಳ್ಳಿಯಂಥಹ ದೇಹವನ್ನು ಪಡೆಯುವುದು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : ಹೃದಯಾಘಾತದ ನಂತರ ಈ ವಸ್ತುಗಳಿಂದ ಅಂತರ ಕಾಯ್ದುಕೊಳ್ಳಲೇ ಬೇಕು .!


ತ್ವಚೆಯ ಆರೋಗ್ಯಕ್ಕಾಗಿ : 
ನಿಂಬೆ ಮತ್ತು ಗ್ರೀನ್ ಟೀ ಎರಡೂ ಚರ್ಮದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದರಲ್ಲಿರುವ ಖನಿಜಾಂಶಗಳು ಹೊಳೆಯುವ ಚರ್ಮವನ್ನು ಪಡೆಯಲು, ಸುಕ್ಕುಗಳನ್ನು ಹೋಗಲಾಡಿಸಲು ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದ್ದರಿಂದ,  ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರಬೇಕಾದರೆ ನಿತ್ಯ ಈ ಪಾನೀಯ ಸೇವಿಸಬೇಕು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.