ಬೆಂಗಳೂರು : ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದಲೇ ಸಂಭವಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 30 ರಿಂದ 35 ವರ್ಷ ವಯಸ್ಸಿನ ಜನರಲ್ಲಿ ಹೃದಯಾಘಾತದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ಒಮ್ಮೆ ಹೃದಯಾಘಾತವಾಗಿದ್ದರೆ ಆ ವ್ಯಕ್ತಿ ತನ್ನ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ಭವಿಷ್ಯದಲ್ಲಿ ಮತ್ತೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ಹೃದಯಾಘಾತವಾದ ನಂತರ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಯಾವ ಆಹಾರವನ್ನು ತೆಗೆದುಕೊಳ್ಳಬಾರದು ನೋಡೋಣ.
ಹೃದಯಾಘಾತದಿಂದ ಚೇತರಿಸಿಕೊಳ್ಳುವುದು ಹೇಗೆ ? :
ಮೊದಲನೆಯದಾಗಿ, ಆಹಾರದಲ್ಲಿ ಫೈಬರ್ ಅನ್ನು ಹೆಚ್ಚು ಹೆಚ್ಚು ಸೇರಿಸಿಕೊಳ್ಳಬೇಕು. ಆಹಾರದಲ್ಲಿ ಫೈಬರ್ ಹೆಚ್ಚಾಗುತ್ತಿದ್ದಂತೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಪ್ಪುಗಟ್ಟುವುದಿಲ್ಲ. ಇದಲ್ಲದೆ, ಧಾನ್ಯಗಳು ಮತ್ತು ನಾರಿನಾಂಶವಿರುವ ಆಹಾರಗಳು, ಹೆಚ್ಚು ಹೆಚ್ಚು ತರಕಾರಿಗಳನ್ನು ಸೇವಿಸಬೇಕು.
ಇದನ್ನೂ ಓದಿ : Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್
ಹೃದ್ರೋಗದಿಂದ ಬಳಲುತ್ತಿರುವವರು ಧೂಮಪಾನ ಮಾಡಬಾರದು. ಅದರಲ್ಲೂ ಒಮ್ಮೆ ಹೃದಯಾಘಾತವಾಗಿದ್ದರೆ ಬೀಡಿ ಸಿಗರೇಟಿನಿಂದ ಸಂಪೂರ್ಣ ಅಂತರ ಕಾಯ್ದುಕೊಳ್ಳಬೇಕು. ಇದಲ್ಲದೆ, ದೈಹಿಕ ಚಟುವಟಿಕೆಯನ್ನು ಹೆಚ್ಚಿಸಬೇಕು. ವ್ಯಾಯಾಮದ ಕೊರತೆಯಿಂದಾಗಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದಲ್ಲದೆ, ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.
ವಾಲ್ನಟ್ಸ್, ಅಗಸೆ ಬೀಜಗಳು ಮತ್ತು ಆವಕಾಡೊಗಳಂತಹ ಆಹಾರಗಳನ್ನು ತಿನ್ನಬೇಕು. ಅವುಗಳು ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಅನ್ನು ಹೊಂದಿರುತ್ತವೆ. ಇದು ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.
100 ಗ್ರಾಂ ಅಗಸೆಬೀಜವು 20 ಪ್ರತಿಶತ ಪ್ರೋಟೀನ್, 28 ಪ್ರತಿಶತ ಫೈಬರ್, 18 ಪ್ರತಿಶತ ಮೊನೊಸಾಚುರೇಟೆಡ್ (MUFA) ಮತ್ತು 73 ಪ್ರತಿಶತ ಬಹುಅಪರ್ಯಾಪ್ತ ಕೊಬ್ಬನ್ನು (PUFA) ಹೊಂದಿರುತ್ತದೆ.
ಇದನ್ನೂ ಓದಿ : ಈ ಒಂದು ಎಲೆಯನ್ನು ಬಳಸಿ ನೋಡಿ ಕೂದಲು ಉದುರುವುದು , ತಲೆಹೊಟ್ಟು ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಮುಕ್ತಿ
ಇದಲ್ಲದೆ, ತುಳಸಿ ರಸವನ್ನು ಬೆರೆಸಿದ ಹಾಲನ್ನು ತೆಗೆದುಕೊಳ್ಳಬಹುದು. ಹೃದ್ರೋಗಿಗಳಿಗೆ ಇದು ಬಹಳ ಪ್ರಯೋಜನಕಾರಿ. ತುಳಸಿಯನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಸೀಸನಲ್ ಕಾಯಿಲೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.