Sun-Saturn Conjunction 2023 Effects: ಫೆಬ್ರವರಿ 3, 2023 ರಂದು, ಸೂರ್ಯ ಬೆಳಗ್ಗೆ  08:21 ಕ್ಕೆ ಕುಂಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಅಲ್ಲಿ ಸೂರ್ಯ ಈಗಾಗಲೇ ವಿರಾಜಮಾನನಾಗಿರುವ ತನ್ನ ಪುತ್ರ ಶನಿಯನ್ನು ಭೇಟಿಯಾಗಲಿದ್ದಾನೆ. ಈ ರಾಶಿಯಲ್ಲಿ ಶುಕ್ರನೂ ವಿರಾಜಮಾನನಾಗಿದ್ದಾನೆ. ಆದರೆ ಶುಕ್ರ ಕೊನೆಯ ಕೋನದಲ್ಲಿರಲಿದ್ದಾನೆ, ಹೀಗಾಗಿ ಸೂರ್ಯ ಮತ್ತು ಶನಿ ಹತ್ತಿರದ ಕೋನದಲ್ಲಿರಲಿದ್ದಾರೆ. ಇದರಿಂದ ಕುಂಭ ರಾಶಿಯಲ್ಲಿ ಸೂರ್ಯ-ಶನಿ ಸಂಯೋಜನೆ ನೆರವೇರಲಿದೆ.


COMMERCIAL BREAK
SCROLL TO CONTINUE READING

ಮಾರ್ಚ್ 15, 2023 ರ ಬೆಳಗ್ಗೆ 6.13ರವರೆಗೆ ಸೂರ್ಯ ಕುಂಭ ರಾಶಿಯಲ್ಲಿ ಮುಂದುವರೆಯಲಿದ್ದಾನೆ. ಅದರ ನಂತರ ಆತ ಮುಂದಿನ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ-ಶನಿ ಸಂಯೋಗದ ಸಮಯದಲ್ಲಿ ಕೆಲ ರಾಶಿಗಳ ಜನರು ಹೆಚ್ಚು ಜಾಗರೂಕರಾಗಿರಬೇಕು. ಕುಂಭ ರಾಶಿಯಲ್ಲಿ ಶನಿ-ಸೂರ್ಯನ ಸಂಯೋಗವು ಹೇಗೆ ರೂಪುಗೊಳ್ಳುತ್ತದೆ ಮತ್ತು ಯಾವ ರಾಶಿಗಳ ಜನರು ಇದರಿಂದ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


ಕುಂಭ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಸಂಯೋಗ
ಕುಂಭ ರಾಶಿಯಲ್ಲಿ ಶನಿಯ ಸಂಕ್ರಮವು ಜನವರಿ 17, 2023 ರಂದು ಸಂಜೆ 05:04 ಕ್ಕೆ ನೆರವೇರಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಚಲನೆಯು ತುಂಬಾ ನಿಧಾನವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯು ಕುಂಭ ರಾಶಿಯಲ್ಲಿ ಹೆಚ್ಚು ಕಾಲ ಕಳೆಯುತ್ತಾನೆ ಎಂಬುದು ಸ್ಪಷ್ಟ. ಜ್ಯೋತಿಷಿಗಳ ಪ್ರಕಾರ, ಶನಿಯು ಇಡೀ ವರ್ಷವನ್ನು ಕುಂಭ ರಾಶಿಯಲ್ಲಿ ಕಳೆಯಲಿದ್ದಾನೆ. 13 ಫೆಬ್ರವರಿ 2023 ರಂದು, ಸೂರ್ಯ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಈ ರೀತಿಯಾಗಿ ಕುಂಭ ರಾಶಿಯಲ್ಲಿ ಸೂರ್ಯ-ಶನಿ ಸಂಯೋಗವು ರೂಪುಗೊಳ್ಳುತ್ತದೆ, ಇದು ಅನೇಕ ರಾಶಿಗಳ ಜನರ ಮೇಲೆ ಪ್ರಬಾವ ಬೀರುತ್ತದೆ. ಸೂರ್ಯ ಮತ್ತು ಶನಿಯ ಸಂಯೋಜನೆಯಿಂದ ಯಾವ ರಾಶಿಗಳ ಜನರು ಹೆಚ್ಚು ಜಾಗರೂಕರಾಗಿರಬೇಕು ತಿಳಿಯೋಣ.


ಕರ್ಕ ರಾಶಿ
ಶನಿ ಮತ್ತು ಸೂರ್ಯನ ಸಂಯೋಜನೆಯು ನಿಮ್ಮ ಜಾತಕದ ಅಷ್ಟಮ ಭಾವದಲ್ಲಿ ನೆರವೇರಲಿದೆ, ಇದು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ದೊಡ್ಡ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಸಾಕಷ್ಟು  ಎಚ್ಚರಿಕೆಯಿಂದ ಈ ಹೂಡಿಕೆ ಮಾಡಿ, ಏಕೆಂದರೆ ನಷ್ಟದ ಅಪಾಯವಿದೆ. ಕೆಲ ಸ್ಥಳೀಯರು ತಮ್ಮ ಹೆಸರಿನಲ್ಲಿ ಇರಬೇಕಾದ ಪಿತ್ರಾರ್ಜಿತ ಆಸ್ತಿ ಅಥವಾ ಪಿತ್ರಾರ್ಜಿತವನ್ನು ಪಡೆಯುವಲ್ಲಿ ಅಡೆತಡೆಗಳನ್ನು ಎದುರಿಸುವ ಸಾಧ್ಯತೆಯಿದೆ. ಈ ಸಂಯೋಜನೆಯು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.


ಸಿಂಹ ರಾಶಿ 
ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ಸೂರ್ಯ-ಶನಿ ಸಂಯೋಗದಿಂದ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು ಮತ್ತು ನೀವು ಹಾಗೆ ಮಾಡದಿದ್ದರೆ, ನಿಮ್ಮ ನಡುವಿನ ವೈಮನಸ್ಸು ಕಾನೂನು ಹೋರಾಟಕ್ಕೆ ತಿರುಗಬಹುದು. ಸಿಂಹ ರಾಶಿಯ ಜನರು ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಏಕೆಂದರೆ ತೆರಿಗೆಯನ್ನು ಪಾವತಿಸದಿದ್ದಕ್ಕಾಗಿ ನಿಮಗೆ ನೋಟೀಸ್ ಗಳು ಬರುವ ಸಾಧ್ಯತೆ ಇದೆ ಅಥವಾ ತಪ್ಪಾಗಿ ಮಾಡಿದ ಯಾವುದೇ ಕಾನೂನುಬಾಹಿರ ಕಾರ್ಯಕ್ಕಾಗಿ ನೀವು ದೋಷಾರೋಪಣೆಗೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೆ, ಯಾರನ್ನೂ ಕುರುಡಾಗಿ ನಂಬಬೇಡಿ ಏಕೆಂದರೆ ನಿಮ್ಮ ಸ್ನೇಹಿತ ನಿಮಗೆ ಮೋಸ ಮಾಡಬಹುದು. ನಿಮ್ಮ ಸ್ವಂತ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.


ಕನ್ಯಾ ರಾಶಿ 
ಕನ್ಯಾ ರಾಶಿಯಲ್ಲಿ ಸೂರ್ಯ-ಶನಿ ಸಂಯೋಗವು ಷಷ್ಠಮ ಭಾವದಲ್ಲಿರಲಿದೆ. ಈ ಎರಡೂ ಗ್ರಹಗಳು ನಿಮ್ಮ ಷಷ್ಠಮ ಭಾವದಲ್ಲಿ ಶತ್ರು ಹಂತ ಯೋಗವನ್ನು ರೂಪಿಸಲಿವೆ, ಇದು ಶತ್ರುಗಳನ್ನು ಅಥವಾ ವಿರೋಧಿಗಳನ್ನು ಸೋಲಿಸುತ್ತದೆ, ಆದರೂ ಈ ಎರಡರ ಸಂಯೋಜನೆಯು ತುಂಬಾ ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಶತ್ರುಗಳು ಮೊದಲ ಕೆಲವು ದಿನಗಳವರೆಗೆ ಸಕ್ರಿಯವಾಗಿರುತ್ತಾರೆ, ಇದರಿಂದಾಗಿ ನೀವು ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕವಾಗಿಯೂ ನಿಮ್ಮ ಖರ್ಚುಗಳಲ್ಲಿ ಗಮನಾರ್ಹ ಹೆಚ್ಚಳವಾಗುವ ಸಾಧ್ಯತೆ ಇದೆ. ನೀವು ಪ್ರೀತಿಯ ಸಂಬಂಧದಲ್ಲಿದ್ದರೆ ಏರಿಳಿತಗಳು ಉಂಟಾಗಬಹುದು. ಆದಾಗ್ಯೂ, ಈ ತೊಂದರೆಗಳು ಹೆಚ್ಚು ಕಾಲ ಉಳಿಯುವುದಿಲ್ಲ.


ಇದನ್ನೂ ಓದಿ-Valentine's Day 2023: ಈ ರಾಶಿಗಳ ಜನರ ಪಾಲಿಗೆ ಪ್ರೇಮಿಗಳ ದಿನ ವಿಶೇಷವಾಗಿದೆ, ನೈಜ ಪ್ರೀತಿಯ ಹುಡುಕಾಟ ಅಂತ್ಯ!


ವೃಶ್ಚಿಕ ರಾಶಿ
ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ಸೂರ್ಯ ಮತ್ತು ಶನಿ ಸಂಯೋಜನೆ ಇರಲಿದೆ, ಇದು ನಿಮ್ಮ ಕುಟುಂಬ ಜೀವನದಲ್ಲಿ ಘರ್ಷಣೆಯನ್ನು ಸೂಚಿಸುತ್ತದೆ. ಕೌಟುಂಬಿಕ ಸಮಸ್ಯೆಗಳ ಪರಿಣಾಮವಾಗಿ ನಿಮ್ಮ ವೃತ್ತಿ ಜೀವನವು ಪ್ರಭಾವಕ್ಕೆ ಒಳಗಾಗಲಿದೆ.ಇಂತಹ ಪರಿಸ್ಥಿತಿಯಲ್ಲಿ, ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇಲ್ಲದಿದ್ದರೆ, ನೀವು ಮಾನಸಿಕ ಒತ್ತಡದಿಂದ ಬಳಲಬಹುದು, ಅದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹೀಗಾಗಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.


ಇದನ್ನೂ ಓದಿ-Shukra Gochara 2023: ಮೊದಲ ನಾಲ್ಕು ರಾಶಿಗಳ ಮೇಲೆ ಶುಕ್ರ ಗೊಚರದ ಪ್ರಭಾವ ಹೇಗಿರಲಿದೆ?


ಕುಂಭ ರಾಶಿ
ಸೂರ್ಯನು ನಿಮ್ಮ ಲಗ್ನ ಭಾವದಲ್ಲಿ ಸಾಗುತ್ತಾನೆ ಮತ್ತು ಶನಿ ಈಗಾಗಲೇ ಅಲ್ಲಿಯೇ ಇದ್ದಾನೆ, ಹೀಗಾಗಿ ಈ ಎರಡು ಗ್ರಹಗಳ ಸಂಯೋಗವು ನಿಮ್ಮ ಭಾವದಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಆರೋಗ್ಯದ ವಿಷಯದಲ್ಲಿ, ನೀವು ನಿಮ್ಮ ದಿನಚರಿಯನ್ನು ಸುಧಾರಿಸಿದರೆ ಮತ್ತು ಯಾವುದೇ ನಿರ್ಲಕ್ಷ್ಯವನ್ನು ತೋರದಿದ್ದರೆ, ಬಚಾವಾಗುವಿರಿ. ಇಲ್ಲದಿದ್ದರೆ, ನೀವು ತಲೆನೋವು, ದೇಹ ನೋವು, ಜ್ವರ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆಗಳಿಗೆ ಬಲಿಯಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಏರಿಳಿತಗಳಿರಬಹುದು. ಅಲ್ಲದೆ, ನೀವು ದುರಹಂಕಾರದ ಭಾವನೆಯನ್ನು ತಪ್ಪಿಸಬೇಕು, ಏಕೆಂದರೆ ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.


ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿ-ಸೂರ್ಯ, 30 ವರ್ಷಗಳ ಬಳಿಕ ಶಿವರಾತ್ರಿ ದಿನ ದುಗ್ಧ ಶರ್ಕರಾ ಯೋಗ ನಿರ್ಮಾಣ, 3 ರಾಶಿಯವರಿಗೆ ಭಾಗ್ಯೋದಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.