Valentine's Day 2023: ಈ ರಾಶಿಗಳ ಜನರ ಪಾಲಿಗೆ ಪ್ರೇಮಿಗಳ ದಿನ ವಿಶೇಷವಾಗಿದೆ, ನೈಜ ಪ್ರೀತಿಯ ಹುಡುಕಾಟ ಅಂತ್ಯ!

Valentine's Day 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಜಾತಕದವರ ಪಾಲಿಗೆ ಈ ಬಾರಿಯ ವ್ಯಾಲೆಂಟೈನ್ ಡೇ ತುಂಬಾ ವಿಶೇಷವಾಗಿರಲಿದೆ. ಈ ಬಾರಿ ಕೆಲ ಜಾತಕದವರಿಗೆ ಅವರ ಜೀವನದ ನೈಜ ಪ್ರೀತಿ ಸಿಗಲಿದ್ದು, ಬಾಳ ಸಂಗಾತಿಯ ಅವರ ಹುಡುಕಾಟಕ್ಕೆ ತೆರೆಬೀಳಲಿದೆ.  

Written by - Nitin Tabib | Last Updated : Feb 9, 2023, 05:20 PM IST
  • ವಾಸ್ತವದಲ್ಲಿ, ಜ್ಯೋತಿಷ್ಯ ಶಾಸ್ತ್ರದ ದ ಪ್ರಕಾರ, ವ್ಯಾಲೆಂಟೈನ್ಸ್ ಡೇ ಕೆಲವು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದ್ದು.
  • ಇವರು ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪ್ರೇಮಿಗಳ ದಿನದಂದು ಕಂಡುಕೊಳ್ಳಬಹುದು,
Valentine's Day 2023: ಈ ರಾಶಿಗಳ ಜನರ ಪಾಲಿಗೆ ಪ್ರೇಮಿಗಳ ದಿನ ವಿಶೇಷವಾಗಿದೆ, ನೈಜ ಪ್ರೀತಿಯ ಹುಡುಕಾಟ ಅಂತ್ಯ! title=
ವ್ಯಾಲೆಂಟೈನ್ಸ್ ಡೇ 2023 ವಿಶೇಷ

Valentine's Day 2023 Special: ಪ್ರೇಮ ನಿವೇದನೆ ಹಾಗೂ ಅಭಿವ್ಯಕ್ತಿಗೆ ಕಾಲಾವಕಾಶ ಕೂಡಿಬಂದಿದೆ. ಅಂದರೆ ಫೆಬ್ರವರಿ ತಿಂಗಳು ಆರಂಭಗೊಂಡಿದೆ. ಈ ತಿಂಗಳಿನಲ್ಲಿ ಪ್ರೇಮಿಗಳ ಜೋಡಿಗಳು ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ವಿವಿಧ ಉಪಾಯಗಳನ್ನು ಮಾಡುತ್ತಾರೆ. ನಿಜವಾದ ಪ್ರೀತಿ ಮನುಷ್ಯನ ಜೀವನವನ್ನು ಸುಖಮಯಗೊಳಿಸುತ್ತದೆ ಎನ್ನಲಾಗುತ್ತದೆ. ವರ್ಷದ ಫೆಬ್ರುವರಿ 14ರ ದಿನ ಪ್ರೇಮಿಗಳ ಪಾಲಿಗೆ ತುಂಬಾ ವಿಶೇಷವಾಗಿರುತ್ತದೆ. ಏಕೆಂದರೆ ಈ ದಿನ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತದೆ. ಈ ದಿನ ಜನರಿಗೆ ತಮ್ಮ ಪ್ರೀತಿ ಪಡೆಯುವ ಭರವಸೆ ಹೆಚ್ಚಾಗಿರುತ್ತದೆ.

ಇಂದು ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೇಮಿಗಳ ದಿನದಂದು ಯಾವ ರಾಶಿಗಳ ಜನರು ಈ ಬಾರಿ ತಮ್ಮ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ ಎಂಬುದನ್ನು ಹೇಳಲಿದ್ದೇವೆ. ವಾಸ್ತವದಲ್ಲಿ, ಜ್ಯೋತಿಷ್ಯ ಶಾಸ್ತ್ರದ ದ ಪ್ರಕಾರ, ವ್ಯಾಲೆಂಟೈನ್ಸ್ ಡೇ ಕೆಲವು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಸಾಬೀತಾಗಲಿದ್ದು. ಇವರು ತಮ್ಮ ಜೀವನದಲ್ಲಿ ನಿಜವಾದ ಪ್ರೀತಿಯನ್ನು ಪ್ರೇಮಿಗಳ ದಿನದಂದು ಕಂಡುಕೊಳ್ಳಬಹುದು, ಆ ರಾಶಿಗಳ ಜನರು ಯಾರು ನೋಡೋಣ ಬನ್ನಿ,

ಮೇಷ ರಾಶಿ: ಈ ರಾಶಿಯವರಿಗೆ ಪ್ರೇಮಿಗಳ ದಿನ ತುಂಬಾ ಮುಖ್ಯವಾಗಿರಲಿದೆ.  ಈ ರಾಶಿಯವರಿಗೆ ಅಂದು ಹೊಸ ಪ್ರೀತಿ ಪ್ರಾರಂಭವಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಇರಲಿದೆ.

ವೃಷಭ ರಾಶಿ: ಮುಂಬರುವ ಪ್ರೇಮಿಗಳ ದಿನ ವೃಷಭ ರಾಶಿಯವರಿಗೆ ಅದ್ಭುತವಾದ ಪ್ರೇಮಿಗಳ ದಿನವಾಗಲಿದೆ. ಈ ದಿನ ಪ್ರೇಮ ಸಂಗಾತಿಯೊಂದಿಗೆ ವಿವಾಹದ ಶುಭ ಯೋಗ ಕೂಡ ನಿಮಗೆ ಒದಗಿ ಬರುತ್ತಿದೆ. ಈ ರಾಶಿಗಳ ವ್ಯಕ್ತಿಯ ಜೀವನದಲ್ಲಿ ಹೊಸ ಜೀವನ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಕರ್ಕ ರಾಶಿ: ಈ ರಾಶಿಯವರಿಗೆ ಪ್ರೇಮಿಗಳ ದಿನವು ಅಚ್ಚರಿಯಿಂದ ಕೂದಿರಲಿದೆ. ಏಕೆಂದರೆ ನೀವು ಬಯಸಿದ ಜೀವನ ಸಂಗಾತಿಯನ್ನು ನೀವು ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಈ ದಿನದಂದು ನೀವು ಯಾರೊಬ್ಬರ ಮುಂದೆ ನಿಮ್ಮ ಪ್ರೇಮ ನಿವೇದನೆ ಮಾಡಲು ಬಯಸುತ್ತಿದ್ದರೆ, ಖಂಡಿತ ಹಿಂಜರಿಯಬೇಡಿ, ಏಕೆಂದರೆ ಅದರಲ್ಲಿ ನೀವು ಅವರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ.

ಇದನ್ನೂ ಓದಿ-Shukra Gochara 2023: ಮೊದಲ ನಾಲ್ಕು ರಾಶಿಗಳ ಮೇಲೆ ಶುಕ್ರ ಗೊಚರದ ಪ್ರಭಾವ ಹೇಗಿರಲಿದೆ?

ಕನ್ಯಾ ರಾಶಿ: ಪ್ರೇಮಿಗಳ ದಿನದಂದು ಈ ರಾಶಿಯ ಜನರ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವಾಗಲಿದೆ. ಇದಲ್ಲದೇ ಈ ರಾಶಿಯವರು ಪ್ರೇಮಿಗಳ ದಿನದಂದು ತಮ್ಮ ಜೀವನವನ್ನು ಸಂತೋಷದಿಂದ ಕಳೆಯಲಿದ್ದಾರೆ.

ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿ-ಸೂರ್ಯ, 30 ವರ್ಷಗಳ ಬಳಿಕ ಶಿವರಾತ್ರಿ ದಿನ ದುಗ್ಧ ಶರ್ಕರಾ ಯೋಗ ನಿರ್ಮಾಣ, 3 ರಾಶಿಯವರಿಗೆ ಭಾಗ್ಯೋದಯ!

ತುಲಾ ರಾಶಿ: ಈ ರಾಶಿಯವರಿಗೆ ಪ್ರೇಮಿಗಳ ದಿನವು ತುಂಬಾ ರೋಮ್ಯಾಂಟಿಕ್ ಆಗಿರುತ್ತದೆ. ಈಗಾಗಲಿ ಇರುವ ಪ್ರೇಮಿಗಳ ನಡುವಿನ ಸಂಬಂಧವು ಸುಧಾರಿಸುತ್ತದೆ. ಹೊಸ ಪ್ರೀತಿಯನ್ನು ಕಂಡುಕೊಳ್ಳಲು ಬಯಸುವ ಈ ರಾಶಿಯ ಜನರಿಗೆ ಅವರ ನೆಚ್ಚಿನ ಪ್ರೀತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. 

ಇದನ್ನೂ ಓದಿ-Saturn Rise 2023: ಹೋಳಿ ಹಬ್ಬಕ್ಕೂ ಮುನ್ನ ಈ ರಾಶಿಗಳ ಜನರ ಭಾಗ್ಯೋದಯ, ಬಣ್ಣದ ಬದಲು ಹಣದ ಸುರಿಮಳೆ!

ಧನು ರಾಶಿ: ಪ್ರೇಮಿಗಳ ದಿನವು ಧನು ರಾಶಿಯವರಿಗೆ ತುಂಬಾ ಅದೃಷ್ಟದಿಂದ ಕೂದಿರಲಿದೆ. ಪ್ರೇಮಿಗಳ ದಿನದಂದು ನಿಮ್ಮ ಪಾಲಿಗೆ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಭರವಸೆ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News