ಜೀವನದ ಸಮಸ್ಯೆಗಳಿಂದ ಮುಕ್ತಿ ಹೊಂದಲು ಅಮವಾಸ್ಯೆಯಂದು ಈ ಕೆಲಸ ಮಾಡಿ
ಅಮವಾಸ್ಯೆಯಂದು ಇರುವೆ, ಪಕ್ಷಿ, ಹಸು, ನಾಯಿ, ಕಾಗೆಗಳಿಗೆ ಆಹಾರ ಮತ್ತು ನೀರನ್ನು ನೀಡಬೇಕು. ಹಳದಿ ಬಟ್ಟೆ ಧರಿಸಿ, ಹಳದಿ ಆಹಾರ ಪದಾರ್ಥಗಳನ್ನು ದಾನ ಮಾಡಬೇಕು.
ನವದೆಹಲಿ: ಹಿಂದೂ ಧರ್ಮದಲ್ಲಿ ಅಮಾವಾಸ್ಯೆ-ಹುಣ್ಣಿಮೆ(Amavasya-Purnima)ಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ವಿವಿಧ ತಿಂಗಳುಗಳಲ್ಲಿ ಬರುವ ಅಮವಾಸ್ಯೆ-ಹುಣ್ಣಿಮೆಗಳು ತಮ್ಮದೇಯಾದ ಪ್ರಾಮುಖ್ಯತೆಯನ್ನು ಹೊಂದಿದೆ. ಇವುಗಳಲ್ಲಿ ಪಿತೃ ಮೋಕ್ಷ ಅಮಾವಾಸ್ಯೆ ಕೂಡ ಒಂದಾಗಿದೆ. ಪಿತೃ ಪಕ್ಷವು ಈ ದಿನದಂದು ಕೊನೆಗೊಳ್ಳುತ್ತದೆ ಮತ್ತು ಮರಣ ಹೊಂದಿದ ದಿನಾಂಕ ತಿಳಿದಿಲ್ಲದ ಮೃತರ ಶ್ರಾದ್ಧವನ್ನು ಈ ದಿನ ನಡೆಸಲಾಗುತ್ತದೆ.
ಮುಂದಿನ ತಿಂಗಳು ಅಕ್ಟೋಬರ್ 6 ರಂದು ಪಿತೃ ಮೋಕ್ಷ ಅಮಾವಾಸ್ಯೆ(Pitru Moksha Amavasya) ಇರುತ್ತದೆ. ನಿಮ್ಮ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳು ಮತ್ತು ಅಸ್ಥಿರತೆಯಿದ್ದರೆ ಈ ದಿನ ನೀವು ಕೆಲವು ಕಾರ್ಯಗಳನ್ನು ಮಾಡಬೇಕು. ಇದಿರಿಂದ ನಿಮ್ಮ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು. ಈ ಕ್ರಮಗಳನ್ನು ಬೇರೆ ಯಾವುದೇ ಅಮಾವಾಸ್ಯೆಯಲ್ಲೂ ಕೂಡ ನೀವು ಮಾಡಬಹುದಾಗಿದೆ.
ಇದನ್ನೂ ಓದಿ: Skin Hair Removal Remedies: ಮುಖದ ಅನಗತ್ಯ ಕೂದಲನ್ನು ತೆಗೆದುಹಾಕಲು, ಈ ಸಿಂಪಲ್ ಮನೆಮದ್ದನ್ನು ಟ್ರೈ ಮಾಡಿ
ಅಮಾವಾಸ್ಯೆಯ ದಿನ ಈ ಕಾರ್ಯ ಮಾಡಿ
ಅಮಾವಾಸ್ಯೆಯ ದಿನ ಚಂದ್ರ ಕಾಣುವುದಿಲ್ಲ. ಈ ದಿನ ದಾನ ಮತ್ತು ಕೆಲವು ಪರಿಹಾರ ಕಾರ್ಯಗಳನ್ನು ಮಾಡುವುದರಿಂದ ಪಿತೃ ದೋಷ, ಛಾಯಾ ದೋಷ(Pitra Dosh & Chhaya Dosh) ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ಈ ವಿಶೇಷ ದಿನದಂದು ಪೂರ್ವಜರ ಆತ್ಮದ ಶಾಂತಿಗಾಗಿ ನೀವು ಪ್ರಾರ್ಥನೆ ಮಾಡಬೇಕು.
1) ಅಮವಾಸ್ಯೆಯಂದು ಇರುವೆ, ಪಕ್ಷಿ, ಹಸು, ನಾಯಿ, ಕಾಗೆಗಳಿಗೆ ಆಹಾರ ಮತ್ತು ನೀರನ್ನು ನೀಡಬೇಕು. ಅಮಾವಾಸ್ಯೆಯ ದಿನ ಶ್ರೀಗಂಧ ಅಥವಾ ಕೇಸರಿ ತಿಲಕ ಹಚ್ಚಿ. ಹಳದಿ ಬಟ್ಟೆಗಳನ್ನು ಧರಿಸಿ, ಹಳದಿ ಆಹಾರ ಪದಾರ್ಥಗಳನ್ನು ದಾನ ಮಾಡಬೇಕು.
2) ಮನೆಯನ್ನು ಶುಚಿಗೊಳಿಸಿದ ನಂತರ 4 ಮೂಲೆಗಳಲ್ಲಿ ಗಂಗಾಜಲವನ್ನು ಸಿಂಪಡಿಸಿ. ಇದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
3) ಅಮಾವಾಸ್ಯೆಯಂದು ಖೀರ್(Kheer) ತಯಾರಿಸಿ ಮತ್ತು ಬ್ರಾಹ್ಮಣರಿಗೆ ಆಹಾರ ನೀಡಿ. ಇದು ಜೀವನದಿಂದ ಅಸ್ಥಿರತೆಯನ್ನು ತೆಗೆದುಹಾಕುತ್ತದೆ.
4) ಬಿಳಿ ಹೂವುಗಳನ್ನು ನೀರಿನಲ್ಲಿ ತೇಲಿಸಿ.
5) ಅಮಾವಾಸ್ಯೆಯ ದಿನದಂದು ಮನೆಯ ಈಶಾನ್ಯದಲ್ಲಿ ದೀಪವನ್ನು ಬೆಳಗಿಸಿ. ಇದಕ್ಕಾಗಿ ಕೆಂಪು ಬಣ್ಣದ ದಾರದಿಂದ ದೀಪಗಳನ್ನು ಮಾಡಿ ಮತ್ತು ಹಸುವಿನ ತುಪ್ಪದಲ್ಲಿ ಕೇಸರಿಯನ್ನು ಬೆರೆಸಿ ದೀಪಕ್ಕೆ ತುಂಬಿಸಿ. ಇದು ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ.
ಇದನ್ನೂ ಓದಿ: Diabetes: ಮಧುಮೇಹ ರೋಗಿಗಳು ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಹೆಚ್ಚಿನ ಪ್ರಯೋಜನ ಪಡೆಯಿರಿ
(ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.