Skin Hair Removal Remedies: ಮುಖದ ಮೇಲೆ ಮೂಡುವ ಅನಗತ್ಯ ಕೂದಲು ನಮ್ಮ ಸೌಂದರ್ಯವನ್ನು ಮರೆ ಮಾಡುತ್ತವೆ. ಹುಡುಗಿಯರು ಎಷ್ಟೇ ಲಕ್ಷಣವಾಗಿದ್ದರೂ, ಚೆನ್ನಾಗಿದ್ದರೂ ಕೂಡ ಮುಖ ಮೇಲೆ ಕಾಣುವ ಅನಗತ್ಯ ಕೂದಲುಗಳು ಅವರ ಅಂದವನ್ನು ಕೆಡಿಸುತ್ತವೆ. ಹಾಗಾಗಿಯೇ, ಈ ಬೇಡದ ಕೂದಲುಗಳಿಂದ ಪರಿಹಾರ ಪಡೆಯಲು (Skin Hair Removal Remedies) ಹೆಚ್ಚಿನ ಮಹಿಳೆಯರು ಪಾರ್ಲರ್‌ಗೆ ಭೇಟಿ ನೀಡುವ ಮೂಲಕ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದನ್ನು ನಾವು ನೋಡುತ್ತೇವೆ. ವ್ಯಾಕ್ಸಿಂಗ್, ರೇಜರ್ ಮತ್ತು ಇತರ ಚಿಕಿತ್ಸೆಗಳ ಸಹಾಯದಿಂದ ದೇಹದ ಕೂದಲನ್ನು ತೆಗೆಯಬಹುದು, ಆದರೆ ಮುಖದ ಕೂದಲು ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಕೂದಲನ್ನು ತೆಗೆಯಲು ಥ್ರೆಡಿಂಗ್ ಅಥವಾ ವ್ಯಾಕ್ಸಿಂಗ್ ಮಾಡಬಹುದು. ಇದರ ಹೊರತಾಗಿ, ನೀವು ನಿಮ್ಮ ಮನೆಯಲ್ಲಿಯೇ ಸಿಗುವ ಹಲವು ವಸ್ತುಗಳಿಂದ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ವಿಶೇಷವೆಂದರೆ ಈ ಪರಿಹಾರಗಳಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
ಮುಖದ ಮೇಲೆ ಮೂಡುವ ಬೇಡದ ಕೂದಲುಗಳನ್ನು ತೆಗೆಯಲು ಸುಲಭ ಮನೆಮದ್ದು (How to remove unwated facial hairs):
1. ಮೊಟ್ಟೆಯ ಬಿಳಿ ಲೋಳೆ :-
>> ಒಂದು ಮೊಟ್ಟೆಯಲ್ಲಿ ಒಂದು ಚಮಚ ಜೋಳದ ಹಿಟ್ಟು ಮತ್ತು ಒಂದು ಚಮಚ ಸಕ್ಕರೆಯನ್ನು ತೆಗೆದುಕೊಳ್ಳಿ.
>> ಈ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
>> ಈಗ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ.
>> ಈ ಮಾಸ್ಕ್ ಒಣಗಿದ ನಂತರ, ಉಗುರುಬೆಚ್ಚಗಿನ ನೀರನ್ನು ಬಳಸಿ ತೆಗೆಯಿರಿ.
>> ಈ ಫೇಸ್ ಮಾಸ್ಕ್ ಅನ್ವಯಿಸುವುದರಿಂದ, ನಿಮ್ಮ ಮುಖದಲ್ಲಿರುವ ಅನಗತ್ಯ ಕೂದಲನ್ನು (Unwanted Facial Hair) ಸುಲಭವಾಗಿ ತೆಗೆದು ಹಾಕಬಹುದು.
ಪ್ರಯೋಜನಗಳು - ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಇದು ಚರ್ಮವನ್ನು ಹಗುರಗೊಳಿಸಲು ಮತ್ತು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಇದು ಮುಖದ ಅನಗತ್ಯ ಕೂದಲನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ- Unwanted Facial Hair: ಮುಖದ ಮೇಲಿನ ಅನಗತ್ಯ ಕೂದಲಿಗೆ Toothpaste ನೀಡುತ್ತೆ ಪರಿಹಾರ
2. ನಿಂಬೆ ರಸ :-
* ಒಂದು ಬಟ್ಟಲಿನಲ್ಲಿ ಒಂದು ಕಪ್ ನೀರು, 2 ಕಪ್ ಸಕ್ಕರೆ ಮತ್ತು ನಿಂಬೆ ರಸವನ್ನು ತೆಗೆದುಕೊಳ್ಳಿ.
* ಈ ಮಿಶ್ರಣವನ್ನು ನೀರಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
* ಮಿಶ್ರಣವು ತಣ್ಣಗಾದಾಗ ಅದನ್ನು ಮುಖಕ್ಕೆ ಹಚ್ಚಿ.
* ಈ ಮಿಶ್ರಣ ಚೆನ್ನಾಗಿ ಒಣಗಿದಾಗ, ನಂತರ ಉಗುರುಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
ಪ್ರಯೋಜನಗಳು - ನಿಂಬೆಹಣ್ಣಿನಲ್ಲಿ ಆಂಟಿ -ಆಕ್ಸಿಡೆಂಟ್‌ಗಳಿವೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಚರ್ಮದ (Skin Care) ಕಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಎಕ್ಸ್‌ಫೋಲಿಯೇಟರ್ ಅನ್ನು ಹೊಂದಿದ್ದು ಅದು ಮುಖದ ಅನಗತ್ಯ ಕೂದಲನ್ನು ತೆಗೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- Glowing Skin tips: ಚರ್ಮದ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಕೊತ್ತಂಬರಿ ಸೊಪ್ಪು
3. ಅರಿಶಿನ:
** ಒಂದು ಚಮಚ ಅರಿಶಿನ ಮತ್ತು ಮೂರು ಚಮಚ ಹಾಲನ್ನು ಎರಡು ಸ್ಪೂನ್ ಕಡಲೆ ಹಿಟ್ಟಿನಲ್ಲಿ ಬೆರೆಸಬೇಕು.
** ಈ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಖಕ್ಕೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಬಿಡಿ.
** ಈ ಮಿಶ್ರಣವು ಸಂಪೂರ್ಣವಾಗಿ ಒಣಗಿದಾಗ, ಅದನ್ನು ತೆಗೆಯಿರಿ.
ಇದರ ಪ್ರಯೋಜನಗಳು - ಅರಿಶಿನದ ನೈಸರ್ಗಿಕ ಗುಣಲಕ್ಷಣಗಳು ಚರ್ಮದ ಹೊಳಪನ್ನು ಮರಳಿ ತರಲು ಸಹಾಯ ಮಾಡುತ್ತದೆ, ಆದರೆ ಕಡಲೆ ಹಿಟ್ಟು ಮತ್ತು ಅರಿಶಿನವನ್ನು ಬಳಸುವುದರಿಂದ ಚರ್ಮದಿಂದ ಅನಗತ್ಯ ಕೂದಲನ್ನು ತೊಡೆದುಹಾಕಬಹುದು. ಇದು ನೈಸರ್ಗಿಕ ವಿಧಾನವಾಗಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.