ಕಿತ್ತಳೆ ಸಿಪ್ಪೆಯ ಆರೋಗ್ಯ ಪ್ರಯೋಜನಗಳು: ಖಟ್ಟಾ-ಮೀಠಾ ಎಂದರೆ ಹುಳಿ-ಸಿಹಿ ರುಚಿ ಹೊಂದಿರುವ ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಫೋಲೇಟ್ ಆರೋಗ್ಯಕ್ಕೆ ಪ್ರಯೋಜನಕಾರಿ. ಹಾಗಾಗಿಯೇ, ಕಿತ್ತಳೆಯನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ನಾವು ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ,  ಆರೋಗ್ಯ ತಜ್ಞರ ಪ್ರಕಾರ ಹೀಗೆ ಮಾಡುವುದರಿಂದ ಕಿತ್ತಳೆ ಸಿಪ್ಪೆಯ ಪ್ರಯೋಜನಗಳಿಂದ ವಂಚಿತರಾಗುತ್ತೀರಿ.


COMMERCIAL BREAK
SCROLL TO CONTINUE READING

ಕಿತ್ತಳೆ ಸಿಪ್ಪೆಯ 5 ಅದ್ಭುತ ಪ್ರಯೋಜನಗಳು :
ನಿಮಗೆ ಗೊತ್ತೇ ಕಿತ್ತಳೆ ಮಾತ್ರವಲ್ಲ ಅದರ ಸಿಪ್ಪೆಯೂ ಸಹ ಬಹಳ ಪ್ರಯೋಜನಕಾರಿ ಆಗಿದೆ. ಕಿತ್ತಳೆ ಸಿಪ್ಪೆ ಹೇಗೆ ಪ್ರಯೋಜನಕಾರಿ ಆಗಿದೆ. ಅದರ ಪ್ರಯೋಜನವನ್ನು ಪಡೆಯಲು ಕಿತ್ತಳೆ ಸಿಪ್ಪೆಯನ್ನು ಹೇಗೆ ಬಳಸಬೇಕು? ಎಂದು ತಿಳಿಯೋಣ...


ಉತ್ತಮ ನಿದ್ರೆಗಾಗಿ: 
ಬದಲಾದ ಜೀವನ ಶೈಲಿಯಿಂದಾಗಿ ಹಲವರಿಗೆ ನಿದ್ರಾಹೀನತೆ ಸಮಸ್ಯೆ ಸಾಮಾನ್ಯವಾಗಿದೆ. ನೀವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಿತ್ತಳೆ ಸಿಪ್ಪೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ನೀರಿಗೆ ಹಾಕಿ ಗಾರ್ಗ್ಲ್ ಮಾಡಿ ನಂತರ ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ರಾತ್ರಿಯಲ್ಲಿ ನೀವು ಉತ್ತಮ ನಿದ್ರೆಯನ್ನು ಪಡೆಯುತ್ತೀರಿ.


ಇದನ್ನೂ ಓದಿ- ಬೆಲ್ಲಿ ಫ್ಯಾಟ್ ಕರಗಿಸಲು ರಾತ್ರಿ ಊಟ ಮಾಡುವಾಗ ಈ ನಿಯಮ ಅನುಸರಿಸಿ


ಡ್ಯಾಂಡ್ರಫ್ ನಿಂದ ಮುಕ್ತಿ: 
ಕೂದಲಿನಲ್ಲಿ ತಲೆಹೊಟ್ಟು ಕಾಣಿಸಿಕೊಳ್ಳುವುದರಿಂದ ಕೆಲವರು ಮುಜುಗರವನ್ನು ಎದುರಿಸಬೇಕಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ನೀವು ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿಯನ್ನು ತಯಾರಿಸಿ ನಂತರ ಅದರಲ್ಲಿ ತೆಂಗಿನ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ದೂರವಾಗುತ್ತದೆ.


ಹೇರ್ ಕಂಡೀಷನರ್ :
ಕೂದಲಿಗಾಗಿ ನಾವು ಸಾಮಾನ್ಯವಾಗಿ ಮಾರುಕಟ್ಟೆಯಿಂದ ದುಬಾರಿ ಮತ್ತು ರಾಸಾಯನಿಕಯುಕ್ತ ಕಂಡೀಷನರ್ಗಳನ್ನು ಬಳಸುತ್ತೇವೆ, ಆದರೆ ಕಿತ್ತಳೆ ಸಿಪ್ಪೆಯು ಇದಕ್ಕೆ ತುಂಬಾ ಪರಿಣಾಮಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? ಈ ಸಿಪ್ಪೆಯು ಕೂದಲಿಗೆ ಪ್ರಯೋಜನಕಾರಿಯಾದ ಶುದ್ಧೀಕರಣ ಗುಣಗಳನ್ನು ಹೊಂದಿದೆ. ಇದಕ್ಕಾಗಿ, ಕಿತ್ತಳೆ ಸಿಪ್ಪೆಯನ್ನು ಒಣಗಿಸಿ  ಪುಡಿಯನ್ನು ತಯಾರಿಸಿ ಅದರಲ್ಲಿ ಮೊಸರನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಕೂದಲನ್ನು ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಇದು ನೈಸರ್ಗಿಕ ಹೇರ್ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ.


ಚರ್ಮಕ್ಕೆ ಪ್ರಯೋಜನಕಾರಿ:
ಕಿತ್ತಳೆ ಸಿಪ್ಪೆಯು ನಮ್ಮ ಚರ್ಮಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ.  ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಅದು ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಇದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಿಮ್ಮ ಮುಖದ ಮೇಲೆ ಹೊಳಪು ಬರುತ್ತದೆ ಮತ್ತು ಕಲೆಗಳು ಸಹ ಮಾಯವಾಗುತ್ತವೆ.


ಇದನ್ನೂ ಓದಿ- ಈ ಸಮಯದಲ್ಲಿ ಮಿಸ್ ಆಗಿ ಕೂಡ ಗ್ರೀನ್ ಟೀ ಕುಡಿಯಬೇಡಿ


ರೋಗನಿರೋಧಕ ಶಕ್ತಿ ಹೆಚ್ಚಿಸಲು :
ಕಿತ್ತಳೆ ಸಿಪ್ಪೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುವ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ಕರೋನಾ ಯುಗದಲ್ಲಿ ಹೆಚ್ಚು ಕಿತ್ತಳೆಯನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತಿತ್ತು. ಈ ವಿಷಯದಲ್ಲಿಯೂ ಕಿತ್ತಳೆ ಹಣ್ಣು ಮಾತ್ರವಲ್ಲ ಈ ಹಣ್ಣಿನ ಸಿಪ್ಪೆಯು ನಿಮಗೆ ಹೆಚ್ಚು ಉಪಯುಕ್ತವಾಗಬಹುದು. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಬಿಸಿ ನೀರಿನಲ್ಲಿ ತೊಳೆದ ನಂತರ ತಿನ್ನಬಹುದು. ಕೆಲವರು ಇದನ್ನು ಸಕ್ಕರೆ ಮತ್ತು ನಿಂಬೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.