ಈ ಸಮಯದಲ್ಲಿ ಮಿಸ್ ಆಗಿ ಕೂಡ ಗ್ರೀನ್ ಟೀ ಕುಡಿಯಬೇಡಿ

Green Tea Side Effects: ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಗ್ರೀನ್ ಟೀ ಕುಡಿಯುವಾಗ ಕೆಲವು ವಿಷಯಗಳ ಬಗ್ಗೆ ನಿಗಾವಹಿಸದಿದ್ದರೆ ಅದರಿಂದ ಅನಾನುಕೂಲಗಳೂ ಆಗಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Jul 14, 2022, 01:58 PM IST
  • ಇತ್ತೀಚಿನ ದಿನಗಳಲ್ಲಿ ತೂಕ ನಿಯಂತ್ರಣದ ದೃಷ್ಟಿಯಿಂದ ಕೆಲವರು ಗ್ರೀನ್ ಟೀ ಸೇವಿಸುತ್ತಾರೆ.
  • ಕೆಲವರು ಊಟವಾದ ನಂತರ ಗ್ರೀನ್ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ.
  • ಆಹಾರ ಸೇವಿಸಿದ ನಂತರ ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ.
ಈ ಸಮಯದಲ್ಲಿ ಮಿಸ್ ಆಗಿ ಕೂಡ ಗ್ರೀನ್ ಟೀ ಕುಡಿಯಬೇಡಿ  title=
Green Tea Side Effects

ಗ್ರೀನ್ ಟೀ ಸೈಡ್ ಎಫೆಕ್ಟ್ಸ್:  ಸಾಮಾನ್ಯವಾಗಿ ಮೂಡ್ ಫ್ರೆಶ್ ಗಾಗಿ ಕೆಲವರು ಆಗಾಗ್ಗೆ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಅತಿಯಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೆಲವರು ಗ್ರೀನ್ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಈ ವಿಶೇಷ ಗಿಡಮೂಲಿಕೆ ಚಹಾ  ತೂಕ ನಿಯಂತ್ರಣದಲ್ಲಿ ಸಹಾಯಕ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಗ್ರೀನ್ ಟೀ  ನಮ್ಮ ಚರ್ಮ ಮತ್ತು ಕೂದಲಿಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಹಸಿರು ಚಹಾದ ಸೇವನೆಯಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸಹ ಅಗತ್ಯವಾಗಿದೆ. ಗ್ರೀನ್ ಟೀ ಕುಡಿಯುವ ವೇಳೆ ಕೆಲವು ವಿಷಯಗಳ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರೆ ಅದರಿಂದ ಅನುಕೂಲಗಳ ಬದಲಿಗೆ ಅನಾನುಕೂಲವಾಗಬಹುದು. ಅವುಗಳ ಬಗ್ಗೆ ತಿಳಿಯೋಣ...

ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬಾರದು:
ಗ್ರೀನ್ ಟೀ ಕುಡಿಯುವುದು ಮಾತ್ರವಲ್ಲ, ಗ್ರೀನ್ ಟೀ ಅನ್ನು ಯಾವ ಸಮಯದಲ್ಲಿ ಕುಡಿಯಬೇಕು ಎಂಬ ಬಗ್ಗೆ ಎಚ್ಚರವಹಿಸುವುದು ಸಹ ಅಗತ್ಯ. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎದ್ದು ಏನನ್ನೂ ತಿನ್ನದೆ ಗ್ರೀನ್ ಟೀ ಕುಡಿದರೆ, ಹೆಚ್ಚುತ್ತಿರುವ ತೂಕ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಲವರದ್ದು. ಆದರೆ, ಎಚ್ಚರ, ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡುವುದರಿಂದ ಆ್ಯಂಟಿಆಕ್ಸಿಡೆಂಟ್ ಮತ್ತು ಈ ಗಿಡಮೂಲಿಕೆ ಚಹಾದಲ್ಲಿ ಇರುವ ಪಾಲಿಫಿನಾಲ್‌ಗಳು ಗ್ಯಾಸ್ಟ್ರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಇದು ಆಂತರಿಕೀಕರಣದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಹಸಿರು ಚಹಾವನ್ನು ಕುಡಿಯುವ ಮೊದಲು, ಏನಾದರು ತಿಂದಿದ್ದರೆ ಒಳ್ಳೆಯದು. 

ಇದನ್ನೂ ಓದಿ- Garlic Benefits: ಈ ಸಮಸ್ಯೆಗಳಿಗೆ ಸುಲಭ ಪರಿಹಾರ ಬೆಳ್ಳುಳ್ಳಿ

ಮಲಗುವ ಮೊದಲು ಗ್ರೀನ್ ಟೀ ಕುಡಿಯಬಾರದು:
ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಕುಡಿದು ಮಲಗುವ ಅಭ್ಯಾಸ ನಿಮ್ಮಲ್ಲಿದ್ದರೆ ಆದಷ್ಟು ಬೇಗ ಬದಲಾಯಿಸಿ, ಏಕೆಂದರೆ ಈ ಟೀಯಲ್ಲಿರುವ ಕೆಫೀನ್ ಮೆಲಟೋನಿನ್ ಹಾರ್ಮೋನ್ ಸ್ರವಿಸುವಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಹಾರ್ಮೋನ್ ನಿದ್ರೆಯನ್ನು ತರಲು ಸಹಾಯ ಮಾಡುತ್ತದೆ. ಹಾಗಾಗಿ ರಾತ್ರಿ ಮಲಗುವ ಮೊದಲು ಟೀ ಕುಡಿಯಬಾರದು.
 
ಊಟವಾದ ನಂತರ ಗ್ರೀನ್ ಟೀ:
ಕೆಲವರು ಊಟವಾದ ನಂತರ ಗ್ರೀನ್ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆಹಾರ ಸೇವಿಸಿದ ನಂತರ ಗ್ರೀನ್ ಟೀ ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ವಾಸ್ತವವಾಗಿ, ನೀವು ಊಟ ಮಾಡಿದ ತಕ್ಷಣ ಹಸಿರು ಚಹಾವನ್ನು ಸೇವಿಸಿದರೆ, ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ಆಹಾರ ಸೇವಿಸಿದ ಬಳಿಕ ಗ್ರೀನ್ ಟೀ ಕುಡಿಯದಿರುವುದು ಉತ್ತಮ.

ಇದನ್ನೂ ಓದಿ- ಈ ಮೂರು ಕಾರಣಗಳಿಂದ ಮಳೆಗಾಲದಲ್ಲಿ ಸಲಾಡ್ ಸೇವಿಸಬಾರದು

ಗ್ರೀನ್ ಟೀ ಕುಡಿಯಲು ಸರಿಯಾದ ಸಮಯ ಯಾವುದು?
ಗ್ರೀನ್ ಟೀ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ, ಆದರೆ ನೀವು ಅದನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ನಂತರ ನಷ್ಟವಾಗುತ್ತದೆ. ಆದ್ದರಿಂದ, ಈ ಚಹಾವನ್ನು ದಿನಕ್ಕೆ 3 ಬಾರಿಗಿಂತ ಹೆಚ್ಚು ಕುಡಿಯಬಾರದು. ಹಸಿರು ಚಹಾವನ್ನು ಆಹಾರ ಸೇವಿಸಿದ ಒಂದು ಗಂಟೆ ನಂತರ ಅಥವಾ ಊಟಕ್ಕೆ ಒಂದು ಗಂಟೆ ಮೊದಲು ಸೇವಿಸಬೇಕು, ಆಗ ಮಾತ್ರ ನೀವು ಈ ಗಿಡಮೂಲಿಕೆ ಚಹಾದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News