ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಸರಳ ಮನೆಮದ್ದು

ತಲೆಹೊಟ್ಟಿನ ಸಮಸ್ಯೆಗೆ ಮನೆಮದ್ದು : ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯಿಂದಾಗಿ ಹೆಚ್ಚಿನ ಜನರು ಹೊರ ಹೋಗಲು ಹಿಂಜರಿಯುತ್ತಾರೆ. ಕೆಲವರು ಮಾರುಕಟ್ಟೆಯಲ್ಲಿ ಸಿಗುವ ವಿಧ ವಿಧದ ಶಾಂಪು, ಎಣ್ಣೆಗಳನ್ನೂ ಬಳಸುತ್ತಾರೆ. ಆದರೆ, ಕೆಲವು ಸರಳ ಮನೆಮದ್ದುಗಳ ಸಹಾಯದಿಂದಲೂ ನೀವು ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Written by - Yashaswini V | Last Updated : Jul 13, 2022, 02:05 PM IST
  • ಅಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಿದ್ದಂತೆ.
  • ಆದರೆ ಈ ಸಸ್ಯವು ಕೂದಲಿನ ಹೊಳಪನ್ನು ಮರಳಿ ತರುತ್ತದೆ ಎಂದು ನಿಮಗೆ ತಿಳಿದಿದೆಯೇ?
  • ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.
ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಸರಳ ಮನೆಮದ್ದು title=
Dandruff Treatment at Home

ತಲೆಹೊಟ್ಟಿನ ಸಮಸ್ಯೆಗೆ ಮನೆಮದ್ದು : ಬದಲಾಗುತ್ತಿರುವ ಹವಾಮಾನವು ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೇವಲ ಹವಾಮಾನ ಬದಲಾವಣೆ ಮಾತ್ರವಲ್ಲ, ಅನಾರೋಗ್ಯಕರ ಆಹಾರ, ಎಣ್ಣೆ ಮಸಾಜ್, ಮಾಲಿನ್ಯ, ಧೂಳು, ಹೊಗೆ ಮತ್ತು ವಾತಾವರಣದಲ್ಲಿನ ತೇವಾಂಶದಿಂದ ಕೂದಲು ಹಾಳಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ತಲೆಹೊಟ್ಟು ಮತ್ತು ಶುಷ್ಕತೆಯ ಸಮಸ್ಯೆ ಸಾಮಾನ್ಯವಾಗಿದೆ. ಕೆಲವು ಮನೆಮದ್ದುಗಳು ನಿಮ್ಮ ಈ ಸಮಸ್ಯೆಗಳಿಗೆ ಸುಲಭ ಪರಿಹಾರ ನೀಡಬಹುದು. 

ತಲೆಹೊಟ್ಟು ಮತ್ತು ಶುಷ್ಕತೆಗೆ ಪರಿಹಾರ ಪಡೆಯಲು ಈ ಮನೆಮದ್ದುಗಳನ್ನು ಒಮ್ಮೆ ಟ್ರೈ ಮಾಡಿ...
ಅಲೋವೆರಾ:

ಅಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣವಿದ್ದಂತೆ.  ಆದರೆ ಈ ಸಸ್ಯವು ಕೂದಲಿನ ಹೊಳಪನ್ನು ಮರಳಿ ತರುತ್ತದೆ ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ಅಲೋವೆರಾ ಜೆಲ್ ಅನ್ನು ಟ್ರೀ ಆಯಿಲ್ ಜೊತೆ ಮಿಶ್ರಣ ಮಾಡಿ, ಕೂದಲಿಗೆ ಹಚ್ಚಿ. ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ.

ಇದನ್ನೂ ಓದಿ- Fenugreek Tea For Weight loss: ಈ ಚಹಾ ಸೇವನೆಯಿಂದ ವೇಗವಾಗಿ ತೂಕ ಇಳಿಯುತ್ತಂತೆ!

ಮೊಸರು: 
ಮೊಸರನ್ನು ಸಾಮಾನ್ಯವಾಗಿ ಸೌಂದರ್ಯವರ್ಧಕವಾಗಿ ಬಳಸುತ್ತೇವೆ. ಮುಖದ ಅಂದವನ್ನು ಹೆಚ್ಚಿಸಲು ನೀವು ಆಗಾಗೆ ಮೊಸರನ್ನು ಬಳಸಿರಬಹುದು. ಆದರೆ, ಕೂದಲಿಗೆ ನೀವು ಇದನ್ನು ಪ್ರಯತ್ನಿಸಿದ್ದೀರಾ. ಇದಕ್ಕಾಗಿ, ಒಂದು ಕಪ್ ಮೊಸರಿಗೆ ಒಂದು ಚಮಚ ಅಡಿಗೆ ಸೋಡಾವನ್ನು ಬೆರೆಸಿ ಮತ್ತು ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ. ನಿಯಮಿತವಾಗಿ ಹೀಗೆ ಮಾಡುವುದರಿಂದ ತಲೆಹೊಟ್ಟು ಕಣ್ಮರೆಯಾಗಿರುವುದನ್ನು ನೀವು ಗಮನಿಸಬಹುದು.

ಟೀ ಟ್ರೀ ಆಯಿಲ್:
ಟೀ ಟ್ರೀ ಆಯಿಲ್‌ನಲ್ಲಿ ಉರಿಯೂತ ನಿವಾರಕ ಮತ್ತು ಆ್ಯಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳಿವೆ. ಇದು ಕೂದಲಿನಲ್ಲಿ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಿತ್ಯವೂ ಈ ವಿಶೇಷವಾದ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡರೆ ಕೂದಲಿನ ಶುಷ್ಕತೆಯೂ ದೂರವಾಗಿ ಅದರಲ್ಲಿ ಅದ್ಭುತವಾದ ಹೊಳಪು ಮರಳಿ ಬರುತ್ತದೆ.

ಇದನ್ನೂ ಓದಿ- ಈ ಬಣ್ಣದ ಪಾದರಕ್ಷೆಗಳನ್ನು ತಪ್ಪಿಯೂ ಧರಿಸಬೇಡಿ: ಇದರಿಂದ ಅದೃಷ್ಟ ಕೆಡಬಹುದು!

ತೆಂಗಿನೆಣ್ಣೆ :
ತೆಂಗಿನೆಣ್ಣೆ  ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದರ ಔಷಧೀಯ ಗುಣಗಳಿಂದಾಗಿ ತಲೆಹೊಟ್ಟು ಮುಂತಾದ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಮೂಲದಿಂದ ನಿರ್ಮೂಲನೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News