ಬೆಂಗಳೂರು : ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು  ಆರಂಭವಾಗುತ್ತದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಸಾವಿರ ಕಾರನಾಳು ಸಿಗುತ್ತವೆ. ಅದರಲ್ಲಿ ನಾವು ಸೇವಿಸುವ ಆಹಾರ ಮತ್ತು ಬದುಕುತ್ತಿರುವ ಶೈಲಿ ಕೂಡಾ ಮುಖ್ಯವಾದುದು. ಇನ್ನು ಫ್ಯಾಷನ್  ಗೋಜಿಗೆ ಬಿದ್ದು, ಕೂದಲಿಗೆ ವಿವಿಧ ಬಗೆಯ ಶಾಂಪೂ, ಸೋಪ್, ಕಂಡೀಶನರ್ ಹಚ್ಚಿ ಕೂದಲಿನ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಯಾಕೆಂದರೆ ಇವುಗಳಲ್ಲಿ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಅತಿಯಾದ ರಾಸಾಯನಿಕಗಳ ಬಳಕೆಯಿಂದ ಕೂದಲಿನ ಮೇಲೆ ಕೆಟ್ಟ ಪರಿಣಾಮ ಗೋಚರಿಸಲು ಆರಂಭವಾಗುತ್ತದೆ. 


COMMERCIAL BREAK
SCROLL TO CONTINUE READING

ಇನ್ನು, ತಲೆಯಲ್ಲಿ ಒಂದು ಬಿಳಿ ಕೂದಲು ಕಂಡ ತಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೇರ್ ಕಲರ್ ಮೊರೆ ಹೋಗುವುದು ಯುವ ಪೀಳಿಗೆ ಮಾಡುವ ಸಾಮಾನ್ಯ ತಪ್ಪು. ಈ ಹೇರ್ ಕಲರ್ ಬಳಕೆಯಿಂದಾಗಿ ಒಂದು ಬಿಳಿ ಕೂದಲು ಹತ್ತಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಆದರೆ ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸಿ ಬಿಳಿ ಕುದಳನನ್ನು ಶಾಶ್ವತವಾಗಿ ಕಪ್ಪಾಗಿಸುವುದು ಸಾಧ್ಯ. 


ಇದನ್ನೂ ಓದಿ : Health Tips: ಈ ಆರೋಗ್ಯ ಸಮಸ್ಯೆ ಇದ್ದವರ ಮೇಲೆ ಬೀಟ್ರೂಟ್ ನೆರಳು ಸಹ ಬೀಳಬಾರದು: ಎಚ್ಚರ!!


ಕರಿಬೇವಿನ ಹೇರ್ ಕಲರ್ : 
ಕರಿಬೇವು ಅನೇಕ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಕೂದಲಿನ ಆರೋಗ್ಯಕ್ಕೆ ಇದು ಬೆಸ್ಟ್ ಮೆಡಿಸಿನ್. ಕರಿಬೇವನ್ನು ಬಳಸಿ ಹೇರ್ ಕಲರ್ ಅನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. 


-ಇದಕ್ಕಾಗಿ ಮೊದಲು ಸ್ವಲ್ಪ ಕರಿಬೇವನ್ನು ತೆಗೆದುಕೊಳ್ಳಿ. 
-ಕರಿಬೇವನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಂದು ದಿನ ಒಣಗಿಸಿ.
-ನಂತರ ಒಂದು ಬಾಣಲೆಯಲ್ಲಿ ಹಾಕಿ ಎಲೆಗಳನ್ನು ಕಪ್ಪು ಬಣ್ಣ ಬರುವವರೆಗೆ ಹುರಿಯಿರಿ. ನೆನಪಿರಲಿ ಹುರಿಯುವಾಗ ಎಣ್ಣೆ ಹಾಕುವಂತಿಲ್ಲ. 
- ಈಗ ಹುರಿದ ಎಲೆಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. 
- ಪುಡಿ ಮಾಡುವಾಗ ನೀರು ಸೇರಿಸಬಾರದು. 
-  ಹೀಗೆ ತಯಾರಿಸಿದ ಪುಡಿಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಮೊಸರಿನಲ್ಲಿ ಅಥವಾ ಆಲೋವಿರಾ ಜೆಲ್ ನಲ್ಲಿ ಮಿಕ್ಸ್ ಮಾಡಿ ಬಿಳಿ ಕೂದಲ ಮೇಲೆ ಹಚ್ಚಿ. 
ಈ ಕ್ರಮವನ್ನು ನಿಯಮಿತವಾಗಿ ಅನುಸರಿಸುತ್ತಾ ಬಂದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಮಾತ್ರವಲ್ಲ, ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. 


ಇದನ್ನೂ ಓದಿ Premature White Hair : ನಿಮ್ಮ ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸುತ್ತೆ ಮೆಂತೆ ಕಾಳು!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.