Premature White Hair Problem : ಬದಲಾಗುತ್ತಿರುವ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ಇದರಲ್ಲಿ ಕಿರಿ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.   ಇಂದಿನ ದಿನಗಳಲ್ಲಿ 20 ರಿಂದ 25 ವರ್ಷದ ಯುವಕ ಯುವತಿಯರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾದಾಗ ಬಿಳಿ ಕೂದಲನ್ನು ಮರೆ ಮಾಚಲು ಹೇರ್ ಡೈ ಅಥವಾ ರಾಸಾಯನಿಕ  ಕಲರ್ ಅನ್ನು ಬಳಸುತ್ತಾರೆ. ಇದರಿಂದ ಕೂದಲು ತಾತ್ಕಾಲಿಕವಾಗಿ ಕಪ್ಪು ಬಣ್ಣಕ್ಕೆ ಮರಳಬಹುದು, ಆದರೆ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ.  ಹಾಗಿದ್ದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವ ಬಗೆ ಹೇಗೆ ನೋಡೋಣ. 


COMMERCIAL BREAK
SCROLL TO CONTINUE READING

ಕೂದಲು ಕಪ್ಪಾಗಲು ಈ ವಸ್ತುಗಳನ್ನು ಬಳಸಿ :
1. ಈರುಳ್ಳಿ ರಸ ಮತ್ತು ಆಲಿವ್ ಎಣ್ಣೆ :
ಬಿಳಿ ಕೂದಲನ್ನು ಕಡಿಮೆ ಮಾಡಲು ಈರುಳ್ಳಿ ರಸ ಪ್ರಯೋಜನಕಾರಿಯಾಗಿರಲಿದೆ. ಕೂದಲಿನ ಬೆಳವಣಿಗೆಗೂ ಇದು ಸಹಕಾರಿ. ಆಲಿವ್ ಎಣ್ಣೆಯಲ್ಲಿ ಈರುಳ್ಳಿ ರಸ ಮತ್ತು ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚಿ  ಮಸಾಜ್ ಮಾಡಿ. ಹೀಗೆ ಮಾಡುತ್ತಾ ಬಂದರೆ, ಬಿಳಿ ಕೂದಲು  ಕಡಿಮೆಯಾಗುವುದರ ಜೊತೆಗೆ ಕೂದಲು ಬೆಳೆಯಲು ಕೂಡಾ ಸಹಾಯ ಮಾಡುತ್ತದೆ. 


ಇದನ್ನೂ ಓದಿ : Hair loss treatment: ಪ್ರತಿದಿನ ಆಹಾರದಲ್ಲಿ ಬಳಸುವ ಈ ಪದಾರ್ಥವೇ ಬೋಳು ತಲೆಗೆ ಕಾರಣವಾಗುತ್ತಿದೆ!


2. ಬ್ಲಾಕ್ ಟೀ :
ಬ್ಲಾಕ್ ಟೀ  ಬಳಸಿ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು. ಬ್ಲಾಕ್ ಟೀ  ನಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿವೆ. ಇದು ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ 2 ಚಮಚ ಬ್ಲಾಕ್ ಟೀ ಮತ್ತು ಒಂದು ಚಮಚ ಉಪ್ಪನ್ನು ಹಾಕಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ, ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ.


3. ತೆಂಗಿನೆಣ್ಣೆ ಮತ್ತು ನಿಂಬೆ ರಸ :
ತೆಂಗಿನ ಎಣ್ಣೆಯು ಕೂದಲನ್ನು ನೈಸರ್ಗಿಕವಾಗಿ ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಗೆ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಮಸಾಜ್ ಮಾಡಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಬಿಳಿ ಕೂದಲು ಬೆಳೆಯುವುದನ್ನು ಕಡಿಮೆ ಮಾಡಬಹುದು.


ಇದನ್ನೂ ಓದಿ : Banana Storage Tips: ಬಾಳೆಹಣ್ಣು ಬೇಗ ಹಾಳಾಗದಂತೆ ಇಡಲು ಇಲ್ಲಿದೆ ಸುಲಭ ಉಪಾಯ


4. ಶುಂಠಿ ಮತ್ತು ಜೇನು :
ಶುಂಠಿ ಮತ್ತು ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚಿದರೆ ಸಹಾಯವಾಗಲಿದೆ.  ಶುಂಠಿ ತುರಿಗೆ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ ಕೂದಲಿಗೆ ಸ್ನಾನ ಮಾಡಿ.  ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿಯಾದರೂ ಪುನರಾವರ್ತಿಸಬಹುದು.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.