ನಿಮ್ಮ ಜಾತಕದಲ್ಲಿಯೂ ಬುಧ ದೋಷ ವಿದ್ದರೆ ಈ ಸರಳ ಉಪಾಯಗಳನ್ನು ಇಂದೇ ಪ್ರಯತ್ನಿಸಿ
ಬುಧ ಗ್ರಹವನ್ನು ಬುದ್ಧಿವಂತಿಕೆಯ ಅಂಶ ಎಂದು ಕರೆಯಲಾಗುತ್ತದೆ. ಬುಧನ ಸ್ಥಾನ ಉತ್ತಮವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ. ಬುಧ ದುರ್ಬಲನಾಗಿದ್ದರೆ ವ್ಯಕ್ತಿಯು ನಾನಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ನವದೆಹಲಿ : ಗಣೇಶನ ಆರಾಧನೆಗೆ ಬುಧವಾರ ಬಹಳ ವಿಶೇಷ ದಿನವಾಗಿರುತ್ತದೆ. ಬುಧವಾರವನ್ನು ವಿಘ್ನವಿನಾಶಕ ಗಣೇಶನಿಗೆ (Lord ganesha) ಮೀಸಲು. ಇದರೊಂದಿಗೆ, ಈ ದಿನವನ್ನು ಬುಧ ಗ್ರಹಕ್ಕೆ ಸಮರ್ಪಿಸಲಾಗಿದೆ. ಬುಧ ಗ್ರಹವನ್ನು ಬುದ್ಧಿವಂತಿಕೆಯ ಅಂಶ ಎಂದು ಕರೆಯಲಾಗುತ್ತದೆ. . ಬುಧನ ಸ್ಥಾನ ಉತ್ತಮವಾಗಿದ್ದರೆ, ವ್ಯಕ್ತಿಯು ತನ್ನ ಜೀವನದಲ್ಲಿ ಖ್ಯಾತಿಯನ್ನು ಪಡೆಯುತ್ತಾನೆ. ಬುಧ ದುರ್ಬಲನಾಗಿದ್ದರೆ ವ್ಯಕ್ತಿಯು ನಾನಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ತಲೆನೋವು, ಚರ್ಮ ಮತ್ತು ಕತ್ತಿನ ಸಮಸ್ಯೆ ಮುಖ್ಯವಾದದ್ದು. ಜ್ಯೋತಿಷ್ಯದಲ್ಲಿ (Astrology), ಬುಧ ಗ್ರಹವನ್ನು ಬುದ್ಧಿವಂತಿಕೆ, ಮಾತು, ತಾರ್ಕಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯಗಳ ಗ್ರಹ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಬುಧ ದೋಷವಿದ್ದರೆ (Budha dosha), ಕೆಲವು ವಿಶೇಷ ಕ್ರಮಗಳನ್ನು ಅನುಸರಿಯಬೇಕಾಗುತ್ತದೆ. ಹೀಗೆ ಮಾಡಿದರೆ ಸಮಸ್ಯೆಗಳು ದೂರವಾಗುತ್ತವೆ.
ಈ ಕ್ರಮಗಳನ್ನು ಆಸರಿಸಿದರೆ ಸಿಗಲಿದೆ ಸಮಸ್ಯೆಗೆ ಪರಿಹಾರ :
1.ಜ್ಯೋತಿಷಿಗಳ (Astrology) ಪ್ರಕಾರ, ಬುಧ ದೋಷವನ್ನು ತೆಗೆದುಹಾಕಬೇಕಾದರೆ, ತಮ್ಮ ಸಂಬಂಧಿಕರೊಂದಿಗೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ, ಮೊದಲನೆಯದಾಗಿ, ನಿಮ್ಮ ನಡವಳಿಕೆಯನ್ನು ಸುಧಾರಿಸಿಕೊಳ್ಳಬೇಕು .
2.ಮಹಿಳೆಯರಿಗೆ ಬುಧ ದೋಷವು ಬಲವಾಗಿದ್ದರೆ ಮೂಗು ಚುಚ್ಚುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Rashi Parivartan 2021: ಡಿಸೆಂಬರ್ ತಿಂಗಳಿನಿಂದ ಈ 5 ರಾಶಿಗಳ ಜನರ ಭಾಗ್ಯ ನಕ್ಷತ್ರಗಳಂತೆ ಬೆಳಗಲಿದೆ
3.ಸನಾತನ ಧರ್ಮದಲ್ಲಿ ಗೋವಿಗೆ ತಾಯಿ ಸ್ಥಾನವಿದೆ. ಹಾಗಾಗಿ, ಹಸುವಿಗೆ ಸೇವೆ ಸಲ್ಲಿಸಬೇಕು. ಹಸುವಿಗೆ ಹಸಿರು ಹುಲ್ಲು ತಿನ್ನಿಸುವುದರಿಂದ ಬುಧ ದೋಷ (Budha dosha) ನಿವಾರಣೆಯಾಗುತ್ತದೆ. ಆದುದರಿಂದ ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ.
4.ಮನೆಯ ಪೂರ್ವ ದಿಕ್ಕಿನಲ್ಲಿ ಕೆಂಪು ಧ್ವಜವನ್ನು (red flag) ಇಡುವುದರಿಂದ ಬುಧ ದೋಷ ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
5.ಬುಧದೋಷವನ್ನು ಹೋಗಲಾಡಿಸಲು ಪ್ರತಿದಿನ 'ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚೇ' ಎಂಬ ಮಂತ್ರವನ್ನು ಪಠಿಸಿ.
6.ಬುಧ ಗ್ರಹದ ಚಿಹ್ನೆ ಹಸಿರು. ಆದ್ದರಿಂದ, ಬುಧವಾರದಂದು ಹಸಿರು ಬಟ್ಟೆಗಳನ್ನು ಧರಿಸುವುದರಿಂದ ಬುಧ ಗ್ರಹದ ದೋಷಗಳನ್ನು ಸಹ ತೆಗೆದುಹಾಕಬಹುದು. ಇದಲ್ಲದೆ, ಬುಧವಾರದಂದು ಹಸಿರು ಧಾನ್ಯಗಳನ್ನು ಸೇವಿಸುವುದು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.
7.ಜ್ಯೋತಿಷಿಗಳ ಪ್ರಕಾರ, ಬುಧ ಗ್ರಹದ ದೋಷಗಳನ್ನು ತೊಡೆದುಹಾಕಲು, ನಿಮ್ಮ ಪರ್ಸ್‌ನಲ್ಲಿ ಒಂದು ಸುತ್ತಿನ ಬೆಳ್ಳಿ (Silver) ಅಥವಾ ಕಂಚಿನ ತುಂಡನ್ನು ಇರಿಸಿ. ಹೀಗೆ ಮಾಡುವುದರಿಂದ ಹಣದ ಕೊರತೆ ಎದುರಾಗುವುದಿಲ್ಲ.
8.ಬುಧ ಗ್ರಹದ ದೋಷಗಳನ್ನು ತೊಡೆದುಹಾಕಲು, ನಿಯಮ ಪ್ರಕಾರ ಗಣೇಶನನ್ನು (Lord Ganesha) ಪೂಜಿಸಿ. ಬುಧವಾರದಂದು ಲಡ್ಡುಗಳನ್ನು ಮತ್ತು 11 ಅಥವಾ 21 ಗರಿಕೆಯನ್ನು ಗಣಪತಿಗೆ (Ganapathi) ಅರ್ಪಿಸುವುದು ಮಂಗಳಕರವಾಗಿರುತ್ತದೆ.
ಇದನ್ನೂ ಓದಿ: Surya Grahan : 10 ದಿನಗಳಲ್ಲಿ ಸೂರ್ಯಗ್ರಹಣ; ಇಂದಿನಿಂದ ಜಾಗರೂಕರಾಗಿರಿ, ಈ 5 ರಾಶಿಯವರಿಗೆ ಬೀರಲಿದೆ ಅಶುಭ ಪರಿಣಾಮ!
ಬುಧ ಶಾಂತಿ ಗ್ರಹ ಮಂತ್ರ:
ಪ್ರಿಯಂಗುಕಲಿಕಾಶ್ಯಂ ರೂಪೇಣಪ್ರತಿಮಂ ಬುಧಮ್ ।
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮಯಮ್॥
ಈ ಮಂತ್ರದ ಅರ್ಥ - ನಿಮ್ಮ ದೇಹವು ನಿಶಾದ ಹಾಗೆ. ನಿಮ್ಮದು ಗಾಢವಾದ ಬಣ್ಣ . ನಿಮ್ಮ ಮುಖ ಪ್ರಕಾಶಮಾನವಾಗಿ ಬೆಳೆಗುತ್ತಿದೆ. ನೀವು ಎಲ್ಲಾ ಗುಣಗಳಲ್ಲಿ ಪ್ರವೀಣರು. ಓ ಬುಧದೇವನೇ, ನಿನಗೆ ನಮಸ್ಕಾರ - ನನ್ನನ್ನೂ ರಕ್ಷಿಸು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.