Mangal Dosh: ಮಂಗಳ ದೋಷ ನಿವಾರಣೆಗೆ ಇಂದೇ ಈ ಸಣ್ಣ ಕೆಲಸ ಮಾಡಿ

Mangal Dosh: ಅಂಗಾರ್ಕಿ ಚತುರ್ಥಿಯ ದಿನದಂದು ತೆಗೆದುಕೊಂಡ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ವಿಶೇಷವಾಗಿ ಈ ದಿನ ಮಂಗಳದೋಷವನ್ನು ತೊಡೆದುಹಾಕಲು ಬಹಳ ಮುಖ್ಯವಾಗಿದೆ. 

Written by - Yashaswini V | Last Updated : Nov 23, 2021, 08:09 AM IST
  • ಸಂಕಷ್ಟಿ ಚತುರ್ಥಿ ಮಂಗಳವಾರದಂದು ಬಂದಾಗ ಅದನ್ನು ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ
  • ಮಂಗಳ ದೋಷವನ್ನು ತೆಗೆದುಹಾಕಲು ಸುಲಭವಾದ ಪರಿಹಾರವನ್ನು ತೆಗೆದುಕೊಳ್ಳಿ
  • ಮನೆಯಿಂದ ನಕಾರಾತ್ಮಕತೆಯನ್ನು ಹೋಗಲಾಡಿಸಲು ಗಣೇಶ ಯಂತ್ರವನ್ನು ತನ್ನಿ
Mangal Dosh: ಮಂಗಳ ದೋಷ ನಿವಾರಣೆಗೆ ಇಂದೇ ಈ ಸಣ್ಣ ಕೆಲಸ ಮಾಡಿ title=
Angarki Chaturthi 2021

Mangal Dosh: ಪ್ರತಿ ಕೆಲಸವನ್ನು ಆರಂಭಿಸುವ ಮೊದಲು ಯಾವುದೇ ರೀತಿಯ ಅಡೆತಡೆಗಳು ಬರದಿರಲಿ ಎಂದು ವಿಘ್ನಹರ್ತ ಗಣಪತಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಶೇಷವಾಗಿ ಸಂಕಷ್ಟ ಚತುರ್ಥಿಯ ದಿನದಂದು ಗಣೇಶನನ್ನು  ಪೂಜಿಸುವುದರಿಂದ ಗಣಪನ ಭಕ್ತರ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. ಅದರಲ್ಲೂ ಅಂಗಾರ್ಕಿ ಚತುರ್ಥಿಯನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸಂಕಷ್ಟಿ ಚತುರ್ಥಿ ಮಂಗಳವಾರದಂದು ಬಂದಾಗ ಅದನ್ನು ಅಂಗಾರಕಿ ಚತುರ್ಥಿ ಎಂದು ಕರೆಯಲಾಗುತ್ತದೆ. ಇಂದು ಅಂದರೆ 23 ನವೆಂಬರ್ 2021 ಅಂಗಾರಕಿ ಚತುರ್ಥಿ. ಜೀವನದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಮೂಲಕ ನಿಮ್ಮ ಆಸೆಗಳನ್ನು ಪೂರೈಸಲು ಇಂದು ಬಹಳ ವಿಶೇಷವಾದ ದಿನವಾಗಿದೆ. ಜ್ಯೋತಿಷ್ಯದಲ್ಲಿ ಇದಕ್ಕೆ ಕೆಲವು ಸುಲಭ ಪರಿಹಾರಗಳನ್ನೂ ನೀಡಲಾಗಿದೆ. 

ಈ ಪರಿಹಾರವನ್ನು ಇಂದೇ ಮಾಡಿ :
ಮಂಗಳದೋಷ ನಿವಾರಣೆಗೆ ಪರಿಹಾರ-
ಅಂಗಾರಕಿ ಚತುರ್ಥಿಯ ದಿನದಂದು ಗಣಪತಿ ಹಾಗೂ ಹನುಮಾನ್ ಜೀ ಯನ್ನು ಪೂಜಿಸಿ ಮತ್ತು ಸಿಂಧೂರದಿಂದ ತಿಲಕವನ್ನು ಹಚ್ಚಿ. ಅಂಗಾರಕಿ ಚತುರ್ಥಿಯಂದು  (Angarki Chaturthi) ಹನುಮಂತನಿಗೆ ಸಿಂಧೂರವನ್ನು ಅರ್ಪಿಸುವುದರಿಂದ ಮಂಗಳದೋಷ ನಿವಾರಣೆಯಾಗುತ್ತದೆ. ಈ ಕಾರಣದಿಂದಾಗಿ, ನಿಮ್ಮ ಕೆಲಸದಲ್ಲಿ ಎದುರಾಗುವ ನಾನಾ ರೀತಿಯ ವಿಘ್ನಗಳು ಸುಲಭವಾಗಿ ಬಗೆಹರಿಯಲಿವೆ.  ಈ ದಿನ ಉಪವಾಸವನ್ನು ಆಚರಿಸುವುದರಿಂದಲೂ ಉತ್ತಮ ಫಲ ದೊರೆಯಲಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Best Husband: ಅತ್ಯುತ್ತಮ ಪತಿ ಎಂದು ಸಾಬೀತು ಪಡಿಸುತ್ತಾರೆ ಈ 4 ರಾಶಿಯ ಪುರುಷರು

ಮನೆಯ ಋಣಾತ್ಮಕತೆಯನ್ನು ತೊಡೆದುಹಾಕಲು ಪರಿಹಾರ - ಗಣೇಶ ಯಂತ್ರವನ್ನು ಜ್ಯೋತಿಷ್ಯದಲ್ಲಿ (Astrology) ಬಹಳ ಅದ್ಭುತವೆಂದು ಪರಿಗಣಿಸಲಾಗುತ್ತದೆ. ಅಂಗಾರಕಿ ಚತುರ್ಥಿಯ ದಿನದಂದು ಈ ಯಂತ್ರವನ್ನು ಸ್ಥಾಪಿಸುವುದರಿಂದ ಮನೆಯ ಋಣಾತ್ಮಕತೆ ಕೊನೆಗೊಳ್ಳುತ್ತದೆ ಮತ್ತು ನಕಾರಾತ್ಮಕ ಶಕ್ತಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. 

ಇಷ್ಟಾರ್ಥಗಳ ನೆರವೇರಿಕೆಗೆ ಪರಿಹಾರ- ಗಣೇಶನಿಗೆ (Ganesh Puja) ದರ್ಬೆ ಎಂದರೆ ಬಹಳ ಪ್ರಿಯ. ದರ್ಬೆ ಮತ್ತು ಮೋದಕವನ್ನು ಅರ್ಪಿಸುವುದರಿಂದ ಗಣೇಶನ ಆಶೀರ್ವಾದ ಪಡೆಯಬಹುದು. ಅಂಗಾರಕಿ ಚತುರ್ಥಿಯ ದಿನದಂದು ಗಣಪತಿಯನ್ನು ಪೂಜಿಸುವಾಗ, ಅವನಿಗೆ 21 ಗಂಟುಗಳ ದರ್ಬೆಯನ್ನು ಅರ್ಪಿಸಿ ಮತ್ತು ಅವನ ಅವನ 21 ನಾಮಗಳನ್ನು ಒಟ್ಟಿಗೆ ಜಪಿಸುತ್ತಾ ಇರಿ. ಈ ರೀತಿ ಇಂದು ಗಣೇಶನನ್ನು ಪೂಜಿಸುವುದರಿಂದ ಇಷ್ಟಾರ್ಥ ನೆರವೇರುತ್ತದೆ. 

ಇದನ್ನೂ ಓದಿ-  Vastu Shastra: ನಿಮ್ಮ ದೇವರ ಕೋಣೆಯಲ್ಲಿ ಎಷ್ಟು ಮೂರ್ತಿಗಳಿವೆ? ಈಗಲೇ ಪರಿಶೀಲಿಸಿ, ಇಲ್ದಿದ್ರೆ... !

ಸಂತೋಷ ಮತ್ತು ಶಾಂತಿಯನ್ನು ಪಡೆಯಲು ಪರಿಹಾರ- ಅಂಗಾರಕಿ ಚತುರ್ಥಿಯಂದು ಗಣೇಶ ಅಥರ್ವಶೀರ್ಷವನ್ನು ಪಠಿಸುವುದು ತುಂಬಾ ಮಂಗಳಕರವಾಗಿದೆ. ಅದೇ ಸಮಯದಲ್ಲಿ, ಇದು ಮನೆಯಲ್ಲಿ ಶಾಂತಿ, ನೆಮ್ಮದಿಯನ್ನು ತರಲಿದೆ. ಇದನ್ನು ಪಠಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News