Astrology: ಗಾಜಿನ ಗ್ಲಾಸಿನಲ್ಲಿ ನೀರು ಕುಡಿಯುವುದು ಕೇವಲ ಆರೋಗ್ಯ ಅಷ್ಟೇ ಅಲ್ಲ, ಸಂಪತ್ತಿನ ಮೇಲೂ ಪ್ರಭಾವ ಬೀರುತ್ತದೆ
Astrology - ಶುದ್ಧ ನೀರು ಕುಡಿಯುವುದರ ಜೊತೆಗೆ ಅದನ್ನು ಸಂಗ್ರಹಿಸಿಡುವ ಪಾತ್ರೆ ಕೂಡ ತುಂಬಾ ಮಹತ್ವದ್ದಾಗಿರುತ್ತದೆ. ಬೆಳ್ಳಿ, ತಾಮ್ರ, ಹಿತ್ತಾಳೆ ಗ್ಲಾಸಿನಲ್ಲಿ ನೀರು ಕುಡಿಯುವುದು ತುಂಬಾ ಪ್ರಯೋಜನವನ್ನು ನೀಡುತ್ತವೆ.
ನವದೆಹಲಿ: Astrology - ಪ್ರತಿಯೊಬ್ಬ ವ್ಯಕ್ತಿ ದಿನದಲ್ಲಿ ಹಲವು ಬಾರಿ ನೀರನ್ನು (Water) ಕುಡಿಯುತ್ತಾನೆ. ಅಷ್ಟೇ ಯಾಕೆ ದೇಹದ ಬಹುಭಾಗ ನೀರಿನಿಂದಲೇ ಕೂಡಿರುತ್ತದೆ. ಆದರೆ, ಉತ್ತಮ ಅರೋಗ್ಯಕ್ಕೆ ಶುದ್ಧ ನೀರಿನ ಜೊತೆಗೆ ನೀರು ಕುಡಿಯುವ ಪಾತ್ರೆ ಕೂಡ ಮಹತ್ವದ್ದಾಗಿರುತ್ತದೆ. ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದ (Astrological Effect Of Drinking Water) ಜೊತೆಗೂ ಕೂಡ ಇದು ಸಂಬಂಧ ಹೊಂದಿದೆ. ನೀವು ಯಾವ ಲೋಹದಿಂದ ತಯಾರಿಸಲಾಗಿರುವ ಗ್ಲಾಸ್ ನಲ್ಲಿ ನೀರು ಕುಡಿಯುತ್ತೀರಿ ಎಂಬುದರ ಪ್ರಭಾವ ನಿಮ್ಮ ಜೀವನ, ಆರೋಗ್ಯ ಸೇರಿದಂತೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಬೀರುತ್ತದೆ. ಹಾಗಾದರೆ ಬನ್ನಿ ಯಾವ ರೀತಿಯ ಗ್ಲಾಸ್ ನಲ್ಲಿ ನೀರು ಕುಡಿದರೆ ಏನು ಪ್ರಭಾವ ಉಂಟಾಗುತ್ತದೆ ತಿಳಿದುಕೊಳ್ಳೋಣ.
ನೀರಿನ ಗ್ಲಾಸ್ ಹಾಗೂ ಅದರಿಂದಾಗುವ ಪ್ರಭಾವ
ಬೆಳ್ಳಿ ಗ್ಲಾಸ್ (Silver Glass) - ಬೆಳ್ಳಿಯು ಅತ್ಯಂತ ಶುದ್ಧ ಲೋಹಗಳಲ್ಲಿ ಒಂದಾಗಿದೆ. ಮನೆಯಲ್ಲಿ ಬೆಳ್ಳಿ ಪಾತ್ರೆಗಲಿರುವುದು ಹಾಗೂ ಅದರಲ್ಲಿ ಆಹಾರ ಸೇವನೆ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಾಗುತ್ತದೆ. ಇದರಿಂದ ಮನೆ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ. ಸಿಲ್ವರ್ ಗ್ಲಾಸ್ನಲ್ಲಿ ಕುಡಿಯುವುದರಿಂದ ಪದೇ ಪದೇ ಶೀತ-ನೆಗಡಿಯ ಸಮಸ್ಯೆ ಕಾಡುವುದಿಲ್ಲ. ಒಂದು ವೇಳೆ ನಿಮ್ಮ ಬಳಿ ಬೆಳ್ಳಿ ಲೋಹದ ಗ್ಲಾಸ್ ಇಲ್ಲ ಎಂದಾದರೆ. ಬೇರೆಯೊಂದು ಗ್ಲಾಸ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಬೆಳ್ಳಿ ಉಂಗುರ ಹಾಕಬೇಕು ಮತ್ತು ನಂತರ ಆ ನೀರನ್ನು ಕುಡಿಯಬೇಕು. ಇದರಿಂದ ಆರ್ಥಿಕ ಮುಗ್ಗಟ್ಟು ದೂರಾಗುತ್ತದೆ. ಆದರೆ, ಉಂಗುರವನ್ನು ಅದರಲ್ಲಿ ಹಾಕುವ ಮೊದಲು ಅದನ್ನು ಸಂಪೂರ್ಣ ಸ್ವಚ್ಛಗೊಳಿಸಲು ಮರೆಯಬೇಡಿ.
ಇದನ್ನೂ ಓದಿ-Yogasana For Belly Fat: ನಿತ್ಯ ಇವುಗಳಲ್ಲಿ ಒಂದೇ ಒಂದು ಯೋಗಾಸನ ಮಾಡಿದರೂ ಹೊಟ್ಟೆ ಕರಗಿಸಬಹುದು
ತಾಮ್ರದ ಗ್ಲಾಸ್ (Copper Glass) - ತಾಮ್ರದ ಗ್ಲಾಸ್ ನಲ್ಲಿ ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಲಾಭಕಾರಿಯಾಗಿದೆ. ಇದರಿಂದ ಶರೀರದಲ್ಲಿರುವ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟ ನೀರು ತಂಪಾಗಿರುತ್ತದೆ.
ಹಿತ್ತಾಳೆ ಗ್ಲಾಸ್ (Brass Glass) - ಹಿತ್ತಾಳೆಯನ್ನು ಕೂಡ ಒಂದು ಉತ್ತಮ ಲೋಹ ಎಂದು ಪರಿಗಣಿಸಲಾಗುತ್ತದೆ. ಊಟ ಮಾಡಲು ಹಾಗೂ ನೀರು ಕುಸಿಯಲು ಹಿತ್ತಾಳೆ ಪಾತ್ರೆಗಳ ಬಳಕೆಯಿಂದ ದೇಹದ ಇಮ್ಯೂನಿಟಿ ಸುಧಾರಿಸುತ್ತದೆ. ಗುರುತ್ವ ಶಕ್ತಿ ಹೆಚ್ಚಾಗುತ್ತದೆ. ಜನ್ಮ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ, ಆ ಜನರು ಹಿತ್ತಾಳೆ ಪಾತ್ರೆಯಲ್ಲಿ ಆಹಾರ ಸೇವಿಸಬೇಕು ಅಥವಾ ಹಿತ್ತಾಳೆ ಗ್ಲಾಸ್ಟ್ ನಲ್ಲಿ ನೀರು ಕುಡಿಯಬೇಕು
ಸ್ಟೀಲ್ ಗ್ಲಾಸ್ (Steel Glass) - ಸ್ಟೀಲ್ ಶನಿಗೆ ಸಂಬಂಧಿಸಿದ ಲೋಹ ಎನ್ನಲಾಗುತ್ತದೆ. ಸ್ಟೀಲ್ ಗ್ಲಾಸ್ ನಲ್ಲಿ ನೀರು ಕುಡಿಯುವುದರ ಯಾವುದೇ ಲಾಭ ಇಲ್ಲ ಆದರೆ, ಬಿಸಿ ನೀರು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಉಂಟಾಗಬಹುದು.
ಇದನ್ನೂ ಓದಿ-How To Remove Unwanted Facial Hairs: ಮುಖದ ಮೇಲಿನ ಅನಗತ್ಯ ಕೂದಲಿನ ಚಿಂತೆ ಬಿಡಿ, ಇದನ್ನೊಮ್ಮೆ ಟ್ರೈ ಮಾಡಿ
ಪ್ಲಾಸ್ಟಿಕ್ ಅಥವಾ ಗಾಜಿನ ಗ್ಲಾಸ್ (Plastic And Glass) - ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ನೀರು ಕುಡಿಯಬಾರದು. ಪ್ಲಾಸ್ಟಿಕ್ ಗ್ಲಾಸ್ನಲ್ಲಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ ತಲುಪುತ್ತದೆ. ಗಾಜಿನ ಗ್ಲಾಸ್ ನಲ್ಲಿ ನೀರು ಕುಡಿಯಬಹುದು ಆದರೆ ಅದರಿಂದ ಆರೋಗ್ಯಕ್ಕೆ ಯಾವುದೇ ಲಾಭವಿಲ್ಲ.
(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. )
ಇದನ್ನೂ ಓದಿ-Bholenath In Dreams: ಕನಸಿನಲ್ಲಿ ಶಿವನ ಯಾವ ರೂಪವನ್ನು ಕಂಡರೆ ಏನು ಫಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.