How To Remove Unwanted Facial Hairs: ಹೆಣ್ಣು ಮಕ್ಕಳು ಎಷ್ಟೇ ಸುಂದರವಾಗಿದ್ದರೂ ಹಲವು ಬಾರಿ ಅವರ ಮುಖದ ಮೇಲೆ ಕಾಣಿಸುವ ಅನಗತ್ಯ ಕೂದಲುಗಳು ಅವರ ಸೌಂದರ್ಯವನ್ನು ಮರೆಮಾಡುತ್ತದೆ. ಮುಖದಲ್ಲಿ ಕಾಣಿಸಿಕೊಳ್ಳುವ ಅಂತಹ ಅನಗತ್ಯ ಕೂದಲಿನ ಸಮಸ್ಯೆಗೆ ಪರಿಹಾರ ಪಡೆಯಲು ಮಹಿಳೆಯರು ಪಾರ್ಲರ್‌ಗಳ ಮೊರೆ ಹೋಗುತ್ತಾರೆ. ಆದರೆ ಇಂದು ನಾವು ನಿಮಗೆ ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಲಿದ್ದು, ಇವುಗಳನ್ನು ಬಳಸುವ ಮೂಲಕ ನೀವು ಮನೆಯಲ್ಲಿಯೇ ಕುಳಿತು ಮುಖದಲ್ಲಿ ಕಾಣಿಸಿಕೊಳ್ಳುವ ಅನಗತ್ಯ ಕೂದಲಿನ ಸಮಸ್ಯೆಯನ್ನು ಪರಿಹರಿಸಬಹುದು.
ನಿಂಬೆ ರಸ ಮತ್ತು ಸಕ್ಕರೆ- ಇದಕ್ಕಾಗಿ, ಒಂದು ಟೀಚಮಚ ನಿಂಬೆ ರಸ (Lemon Juice) ಮತ್ತು 1 ಟೀಸ್ಪೂನ್ ಸಕ್ಕರೆ ಮಿಶ್ರಣ ಮಾಡಿ. ಅದಕ್ಕೆ ಬೇಕಾದಷ್ಟು ನೀರು ಸೇರಿಸಿ. ಈ ಮಿಶ್ರಣವನ್ನು ಗುಳ್ಳೆಗಳು ಅಂದರೆ ಬಬಲ್ಸ್ ಕಾಣಿಸಿಕೊಳ್ಳುವವರೆಗೆ ಬಿಸಿ ಮಾಡಿ. ಅದನ್ನು ತಣ್ಣಗಾದ ನಂತರ ಮುಖದಲ್ಲಿ ಕಾಣಿಸಿಕೊಳ್ಳುವ ಅನಗತ್ಯ ಕೂದಲಿನ (Unwanted Facial Hairs) ಭಾಗಗಳಿಗೆ ಹಚ್ಚಿ 20-25 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ ಮತ್ತು ನೀರಿನಿಂದ ತೊಳೆಯಿರಿ.
ಇದನ್ನೂ ಓದಿ- Disadvantages Of Maida: ನೀವು ಬಳಸುವ ಮೈದಾ ಹಿಟ್ಟು ನಿಮ್ಮನ್ನು ಗಂಭೀರ ಕಾಯಿಲೆಗೆ ಗುರಿಯಾಗಿಸಬಹುದು
ಜೇನುತುಪ್ಪ ಮತ್ತು ನಿಂಬೆ- ಇದನ್ನು ಮಾಡಲು, 2 ಚಮಚ ಸಕ್ಕರೆ, 1-1 ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು (Honey) ಮಿಶ್ರಣ ಮಾಡಿ. ಮಿಶ್ರಣವನ್ನು 3 ನಿಮಿಷಗಳ ಕಾಲ ಬಿಸಿ ಮಾಡಿ ಮತ್ತು ಅದನ್ನು ತೆಳುವಾಗಿಸಲು ಬೇಕಾದಷ್ಟು ನೀರನ್ನು ಸೇರಿಸಿ. ಅದನ್ನು ತಣ್ಣಗಾಗಲು ಬಿಡಿ. ಬಳಿಕ ಇದನ್ನು ಪೀಡಿತ ಪ್ರದೇಶದ ಮೇಲೆ ನಿಧಾನವಾಗಿ ಹಚ್ಚಿ ಮತ್ತು ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಅನ್ವಯಿಸಿ ಮತ್ತು ಕೂದಲ ಬೆಳವಣಿಗೆಯ ವಿರುದ್ಧ ದಿಕ್ಕಿನಲ್ಲಿ ಎಳೆಯಿರಿ.
ಇದನ್ನೂ ಓದಿ- Food For Strong Bones: ದುರ್ಬಲ ಮೂಳೆಗಳನ್ನು ಬಲಿಷ್ಠಗೊಳಿಸುವ ಪ್ರಮುಖ ಆಹಾರಗಳಿವು
ಆಲೂಗಡ್ಡೆ ಮತ್ತು ಬೇಳೆ - ಇದನ್ನು ತಯಾರಿಸಲು, ಒಂದು ಬಟ್ಟಲಿನಲ್ಲಿ 5 ಟೀ ಚಮಚ ಆಲೂಗೆಡ್ಡೆ ರಸ, 1-1 ಟೀಸ್ಪೂನ್ ಜೇನುತುಪ್ಪ ಮತ್ತು ನಿಂಬೆ ಮಿಶ್ರಣ ಮಾಡಿ. 1 ಟೀಸ್ಪೂನ್ ರಾತ್ರಿಯಿಡೀ ನೆನೆಸಿ ರುಬ್ಬಿರುವ ಬೇಳೆಯನ್ನು ಇದರೊಂದಿಗೆ ಮಿಶ್ರಣ ಮಾಡಿ. ಪೀಡಿತ ಪ್ರದೇಶದ ಮೇಲೆ ಇದನ್ನು ಹಚ್ಚಿ, 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ.
(ಸೂಚನೆ- ಇದು ವೈದ್ಯರ ಸಲಹೆ ಅಲ್ಲ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.