Astrology: ಈ 4 ರಾಶಿಚಕ್ರದ ಜನರು ಜನ್ಮತಃ ಅದೃಷ್ಟವಂತರು, ಇವರು ಇತರರಿಗೆ ಸಹಾಯ ಮಾಡುವಲ್ಲಿಯೂ ಹಿಂದೆ ಸರಿಯುವುದಿಲ್ಲ
ಕೆಲವು ರಾಶಿಯ ಜನರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಅವರು ಜೀವನದಲ್ಲಿ ಹೆಸರು-ಕೀರ್ತಿ ಗಳಿಸುತ್ತಾರೆ. ದ್ವಾದಶ ರಾಶಿಗಳಲ್ಲಿ ಈ 4 ರಾಶಿಯ ಜನರು ಈ ವಿಷಯದಲ್ಲಿ ತುಂಬಾ ಅದೃಷ್ಟವಂತರು ಮತ್ತು ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಬೆಂಗಳೂರು: ಸಾಮಾನ್ಯವಾಗಿ ಮಾತನಾಡುವಾಗ ಎಲ್ಲವನ್ನೂ ಪಡೆದುಕೊಂಡು ಬಂದಿರಬೇಕು ಎಂದು ಹೇಳುವುದನ್ನು ನಾವು-ನೀವೆಲ್ಲರೂ ಕೇಳಿರಬಹುದು. ಅಂತೆಯೇ, ಅಂದು ಕೊಂಡದ್ದು ಆಗದಿದ್ದಾಗ ಅಯ್ಯೋ... ನನ್ನ ಅದೃಷ್ಟವೇ ಸರಿಯಿಲ್ಲ ಎಂದು ಹೇಳುವುದನ್ನೂ ನಾವು ನೋಡಿರಬಹುದು. ಜ್ಯೋತಿಷ್ಯದಲ್ಲಿ (Astrology), ದ್ವಾದಶ ರಾಶಿಗಳ ಅಂದರೆ 12 ರಾಶಿ ಚಕ್ರಗಳ ಸ್ವಭಾವ, ನಡವಳಿಕೆ, ಅಭ್ಯಾಸಗಳು ಹಾಗೂ ಅದೃಷ್ಟವನ್ನು ಹೇಳಲಾಗಿದೆ. ಜ್ಯೋತಿಷ್ಯದಲ್ಲಿ ನಂಬಿಕೆ ಇರುವವರು ಇದನ್ನು ನಂಬುತ್ತಾರೆ. ಜ್ಯೋತಿಷ್ಯದ ಪ್ರಕಾರ ದ್ವಾದಶ ರಾಶಿಗಳಲ್ಲಿ (Zodiac Signs) ನಾಲ್ಕು ರಾಶಿಯ ಜನರು ಜನ್ಮತಃ ಅದೃಷ್ಟವಂತರು ಎಂದು ಹೇಳಲಾಗಿದೆ. ಅದೃಷ್ಟದಿಂದ ಅವರು ತಮ್ಮ ಜೀವನದಲ್ಲಿ ಬಹಳಷ್ಟು ಪಡೆಯುತ್ತಾರೆ. ವಿಶೇಷವೆಂದರೆ ಈ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ ಎಂದು ಹೇಳಲಾಗುತ್ತದೆ.
ಯಾವ ರಾಶಿಯವರು ಜನ್ಮತಃ ಅದೃಷ್ಟವಂತರಾಗಿರುತ್ತಾರೆ ತಿಳಿಯೋಣ...
ಮೇಷ ರಾಶಿ (Aries):
ಮೇಷ ರಾಶಿಯ ಜನರು ಜನ್ಮತಃ ಅದೃಷ್ಟವಂತರು. ದೇವರು ಅವರಿಗೆ ಅನೇಕ ಗುಣಗಳನ್ನು ನೀಡುತ್ತಾನೆ, ಅದು ಅವರಿಗೆ ಯಶಸ್ಸನ್ನು (Succeseeful) ಪಡೆಯಲು ಸಹಾಯ ಮಾಡುತ್ತದೆ. ಈ ಜನರು ಶ್ರಮಶೀಲರು, ಬುದ್ಧಿವಂತರು ಮತ್ತು ಇತರರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಈ ಜನರು ಯಾವಾಗಲೂ ಸಾಕಷ್ಟು ಹಣವನ್ನು ಹೊಂದಿರುತ್ತಾರೆ ಮತ್ತು ಅವರು ಅದನ್ನು ಇತರರ ಒಳಿತಿಗಾಗಿ ಬಳಸುತ್ತಾರೆ.
ಇದನ್ನೂ ಓದಿ- Vakri Budh: ಇಂದಿನಿಂದ ಈ ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್, ಸಿಗಲಿದೆ ಬುಧನ ಆಶೀರ್ವಾದ
ಕರ್ಕ ರಾಶಿ (Cancer):
ಕರ್ಕಾಟಕ ರಾಶಿಯ ಜನರು ಕೂಡ ಅಂತಹ ಗುಣಗಳನ್ನು ಹೊಂದಿದ್ದಾರೆ, ಅದರ ಆಧಾರದ ಮೇಲೆ ಅವರು ಹೆಸರು, ಹಣ ಮತ್ತು ಎಲ್ಲವನ್ನೂ (Name-Fame) ಗಳಿಸುತ್ತಾರೆ. ಈ ಜನರು ಕಠಿಣ ಪರಿಶ್ರಮ ಮತ್ತು ಶುದ್ಧ ಹೃದಯದವರು. ಅವರು ಎಂದಿಗೂ ಇತರರಿಗೆ ಸಹಾಯ ಮಾಡುವುದರಿಂದ ಹಿಂದೆ ಸರಿಯುವುದಿಲ್ಲ. ಇವರು ಇತರರಿಗಾಗಿ ಮುಕ್ತ ಮನಸ್ಸಿನಿಂದ ಹಣವನ್ನು ಖರ್ಚು ಮಾಡುತ್ತಾರೆ. ಅವರ ಅತ್ಯುತ್ತಮ ಗುಣವೆಂದರೆ ಜನರು ಅವರನ್ನು ಸುಲಭವಾಗಿ ನಂಬಬಹುದು. ಏಕೆಂದರೆ ಅವರು ಯಾರಿಗೂ ಮೋಸ ಮಾಡುವುದಿಲ್ಲ.
ಸಿಂಹ ರಾಶಿ (Leo):
ಸಿಂಹ ರಾಶಿಚಕ್ರದ ಜನರು ಬಲಶಾಲಿ, ಧೈರ್ಯಶಾಲಿ ಮತ್ತು ಬಹಿರಂಗವಾಗಿ ಮಾತನಾಡುತ್ತಾರೆ. ಹಾಗೆಯೇ ಅವರು ಮನಸ್ಸಿನಲ್ಲಿ ಚುರುಕಾಗಿದ್ದಾರೆ. ಈ ಜನರು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ ಮತ್ತು ಯಾವಾಗಲೂ ತಮ್ಮ ಶತ್ರುಗಳ ಮೇಲೆ ಮೇಲುಗೈ ಸಾಧಿಸುತ್ತಾರೆ. ಅದೇ ಸಮಯದಲ್ಲಿ, ಅವರು ಎಲ್ಲರನ್ನೂ ಒಳ್ಳೆಯವರು ಎಂದು ನಂಬುತ್ತಾರೆ. ಅವರು ಯಾವಾಗಲೂ ಅವರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ.
ಇದನ್ನೂ ಓದಿ- Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ
ವೃಶ್ಚಿಕ ರಾಶಿ (Scorpio):
ಅದೃಷ್ಟವನ್ನು (Luck) ಹೊರತುಪಡಿಸಿ, ವೃಶ್ಚಿಕ ರಾಶಿಯ ಜನರು ಎಲ್ಲದರಲ್ಲೂ ಪರಿಣತರಾಗಿರುತ್ತಾರೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದ್ದರಿಂದ ಅವರು ಎಂದಿಗೂ ತಮ್ಮ ಕನಸುಗಳನ್ನು ಬೆನ್ನಟ್ಟುವುದನ್ನು ನಿಲ್ಲಿಸುವುದಿಲ್ಲ. ಇದರಿಂದಾಗಿ ಅವರು ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ. ಹಾಗೆಯೇ, ಅವರು ಸದಾ ತಮ್ಮ ಸುತ್ತಲಿನ ಜನರು ಬೆಳವಣಿಗೆ ಹೊಂದಬೇಕು ಎಂದು ಇಚ್ಚಿಸುತ್ತಾರೆ ಮತ್ತು ಇತರರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ ಎಂದು ಹೇಳಲಾಗುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.