Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ

Shopping In Pitru Paksha: ಪಿತೃ ಪಕ್ಷದಲ್ಲಿ ಶಾಪಿಂಗ್ ಕೂಡ ಮಾಡಬಹುದು ಮತ್ತು ಇದಕ್ಕಾಗಿ ಕೆಲವು ವಿಶೇಷ ಮುಹೂರ್ತಗಳಿವೆ. ಆದಾಗ್ಯೂ, ಇದನ್ನು ಮಾಡುವಾಗ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  

Written by - Yashaswini V | Last Updated : Sep 24, 2021, 08:13 AM IST
  • ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಬಹುದು
  • ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಲು ಕೂಡ ಕೆಲವು ವಿಶೇಷ ಮುಹೂರ್ತಗಳಿವೆ
  • ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಲು 5 ಮುಹೂರ್ತಗಳಿವೆ
Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ title=
Shopping in Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ

ಬೆಂಗಳೂರು: Shopping In Pitru Paksha- ಪಿತೃ ಪಕ್ಷ  (Pitru Paksha) ಅಥವಾ ಶ್ರಾದ್ದ ಪಕ್ಷದ (Shradh Paksha) ಪ್ರಮುಖ ವಿಷಯವೆಂದರೆ ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. 15 ದಿನಗಳ ಈ ಅವಧಿಯಲ್ಲಿ ಶಾಪಿಂಗ್ ಕೂಡ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ ಜ್ಯೋತಿಷಿಗಳ ಪ್ರಕಾರ, ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಲು ಕೂಡ ಕೆಲವು ವಿಶೇಷ ಮುಹೂರ್ತಗಳಿವೆ (Vishesh Muhurat) . ಈ ವರ್ಷ,  ಅಷ್ಟಮಿ ದಿನಾಂಕದಂದು (Pitru Paksha Ashtami)ಸೆಪ್ಟೆಂಬರ್ 29 ರಂದು ಈ ವಿಶೇಷ ಮುಹೂರ್ತವಿದೆ. ಮಹಾಲಕ್ಷ್ಮಿ ವ್ರತ 2021 (Mahalaxmi Vrat 2021)  ಅಥವಾ ಜೀವಿತಪುತ್ರಿಕ ವ್ರತವನ್ನು ಸಹ ಈ ದಿನದಂದು ಆಚರಿಸಲಾಗುತ್ತದೆ. 

ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಲು ಮುಹೂರ್ತ :
28 ಸೆಪ್ಟೆಂಬರ್ 2021 ರಂದು, ಸಪ್ತಮಿ ತಿಥಿ ಸಂಜೆ 06:17 ಕ್ಕೆ ಕೊನೆಗೊಳ್ಳುತ್ತದೆ ಮತ್ತು ಅಷ್ಟಮಿ ತಿಥಿ ಆರಂಭವಾಗುತ್ತದೆ. ಪಿತೃ ಪಕ್ಷದ ಅಷ್ಟಮಿ ದಿನದಂದು ತಾಯಂದಿರು ತಮ್ಮ ಮಕ್ಕಳ ದೀರ್ಘಾಯುಷ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಇದನ್ನು ಜೀವಿತಪುತ್ರಿಕ ವ್ರತ ಎಂದೂ ಕರೆಯುತ್ತಾರೆ. ಇದಲ್ಲದೇ, ಶ್ರೀ ಮಹಾಲಕ್ಷ್ಮಿ ಉಪವಾಸ ಮತ್ತು ಪೂಜೆಯನ್ನು ಕೂಡ ಈ ದಿನ ಮಾಡಲಾಗುತ್ತದೆ. ಈ ದಿನ (ಸೆಪ್ಟೆಂಬರ್ 29), ಪಿತೃ ಪಕ್ಷವಾಗಿದ್ದರೂ, ಚಿನ್ನ, ಕಾರು, ಮನೆಗೆ ಸಂಬಂಧಿಸಿದ ಶಾಪಿಂಗ್ ಮತ್ತು ಐಷಾರಾಮಿ ವಸ್ತುಗಳನ್ನು ದಿನವಿಡೀ ಖರೀದಿಸಬಹುದು. ಇದರ ಹೊರತಾಗಿ, ಸೆಪ್ಟೆಂಬರ್ 26 ಮತ್ತು ಸೆಪ್ಟೆಂಬರ್ 27 ರಂದು ರವಿ ಯೋಗ, 27 ಸೆಪ್ಟೆಂಬರ್, 30 ಸೆಪ್ಟೆಂಬರ್ ಮತ್ತು 6 ಅಕ್ಟೋಬರ್ ನಲ್ಲಿ ಸರ್ವಾರ್ಥ ಸಿದ್ದಿ ಯೋಗ ಮತ್ತು ಅಕ್ಟೋಬರ್ 1 ರಂದು ಗುರು ಪುಷ್ಯ ಯೋಗ ರೂಪುಗೊಳ್ಳುತ್ತಿದೆ. ಈ ರೀತಿಯಾಗಿ,ಸೆಪ್ಟೆಂಬರ್ 27, 29 ಮತ್ತು 30 ಹಾಗೂ ಅಕ್ಟೋಬರ್‌ನಲ್ಲಿ 1 ಮತ್ತು 6ನೇ ತಾರೀಖಿನಂದು  ಶಾಪಿಂಗ್ ಮಾಡಬಹುದು. 

ಇದನ್ನೂ ಓದಿ- Pitru Paksha 2021: ನೀವು ಪೂರ್ವಜರ ಸಂಪೂರ್ಣ ಆಶೀರ್ವಾದವನ್ನು ಬಯಸಿದರೆ, ಈ ಪ್ರಮುಖ ವಿಷಯಗಳ ಬಗ್ಗೆ ಇರಲಿ ಎಚ್ಚರ

ವಾಸ್ತವವಾಗಿ, ಪಿತೃ ಪಕ್ಷದಲ್ಲಿ  (Pitru Paksha) , ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಹಾಗೂ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ ಮತ್ತು ಅವರ ಆತ್ಮದ ಶಾಂತಿಗಾಗಿ ಶ್ರಾದ್ಧ-ತರ್ಪಣ ಇತ್ಯಾದಿಗಳನ್ನು ಮಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ, ಈ 15 ದಿನಗಳು ಪೂರ್ವಜರಿಗಾಗಿ ಮಾತ್ರ ಮೀಸಲಾಗಿವೆ, ಆದ್ದರಿಂದ ನಿಮ್ಮ ಗಮನವು ದಾನ ಇತ್ಯಾದಿಗಳನ್ನು ನೆನಪಿಸಿಕೊಳ್ಳುವುದರಲ್ಲಿ ಮಾತ್ರ ಇರಬೇಕು. ಬೇರೆ ಯಾವುದೇ ಕೆಲಸದಲ್ಲಿ ಅಲ್ಲ. ಈ ಸಮಯದಲ್ಲಿ, ಪೂರ್ವಜರು ಭೂಮಿಗೆ ಬರುತ್ತಾರೆ ಮತ್ತು ನಾವು ಅವರನ್ನು ಪೂರ್ಣ ಗೌರವದಿಂದ ನೆನಪಿಸಿಕೊಂಡು ನಮ್ಮ ಜೀವನವನ್ನು ನಡೆಸಬೇಕು ಎಂದು ಹೇಳಲಾಗುತ್ತದೆ.

ಇದಲ್ಲದೇ, ಶ್ರಾದ್ಧದಲ್ಲಿ ಖರೀದಿಸಿದ ಎಲ್ಲಾ ವಸ್ತುಗಳು ಪೂರ್ವಜರಿಗೆ ಸಮರ್ಪಿತವಾಗಿದೆ ಎಂದು ನಂಬಲಾಗಿದೆ, ಏಕೆಂದರೆ ಅವುಗಳು ಆತ್ಮಗಳ ಭಾಗವನ್ನು ಹೊಂದಿರುವುದರಿಂದ ಬಳಸಲು ಸೂಕ್ತವಲ್ಲ. ಈ ಸಮಯದಲ್ಲಿ ಯಾವುದೇ ಹೊಸ ವಸ್ತುಗಳನ್ನು ಖರೀದಿಸಿದರೆ, ನಮ್ಮ ಪೂರ್ವಜರು ದುಃಖಿತರಾಗುತ್ತಾರೆ ಮತ್ತು ಕೋಪಗೊಳ್ಳುತ್ತಾರೆ ಎಂದು ಜನರು ನಂಬುತ್ತಾರೆ. ಪಿತೃಪಕ್ಷ ಹಬ್ಬವಲ್ಲ, ಆದರೆ ಇದು ನಮ್ಮೊಂದಿಗೆ ಇಲ್ಲದವರಿಗೆ ಶೋಕಾಚರಣೆಯ ಸಮಯವಾಗಿದೆ.

ಇದನ್ನೂ ಓದಿ- ಪಿತೃ ಪಕ್ಷದಲ್ಲಿ ಸಿಗುವ ಈ ಸಂಕೇತಗಳಿಂದ ಪೂರ್ವಜರು ಸಂತೋಷವಾಗಿದ್ದಾರೋ ಇಲ್ಲವೋ ಎನ್ನುವುದನ್ನು ಹೀಗೆ ತಿಳಿದುಕೊಳ್ಳಿ

ಶಾಪಿಂಗ್ ಹಿಂದೆ ಆಧುನಿಕ ನಂಬಿಕೆ:
ಅದೇ ಸಮಯದಲ್ಲಿ, ಪಿತೃ ಪಕ್ಷದ ಸಮಯದಲ್ಲಿ ಶಾಪಿಂಗ್ (Shopping In Pitru Paksha) ಮಾಡಬಾರದು ಎಂದು ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಬರೆಯಲಾಗಿಲ್ಲ ಎಂಬ ಆಧುನಿಕ ನಂಬಿಕೆ ಇದೆ. ಗಣೇಶ ಚತುರ್ಥಿ ಮತ್ತು ನವರಾತ್ರಿಯ ನಡುವೆ ಪಿತೃ ಪಕ್ಷ ಬರುವುದರಿಂದ, ಅದು ಹೇಗೆ ಅಶುಭವಾಗುತ್ತದೆ? ಏಕೆಂದರೆ ಯಾವುದೇ ಪವಿತ್ರ ಕಾರ್ಯವು ಗಣೇಶನ ಪೂಜೆಯಿಂದ ಆರಂಭವಾಗುತ್ತದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ, ಇದನ್ನು ಈಗಾಗಲೇ ಪಿತೃ ಪಕ್ಷಕ್ಕೆ ಮುಂಚಿತವಾಗಿ ಮಾಡಲಾಗಿದೆ. ಈ ಅರ್ಥದಲ್ಲಿ, ಪೂರ್ವಜರು ಅಶುಭಕರಲ್ಲ ಎಂದೂ ಕೂಡ ಕೆಲವರು ನಂಬಿದ್ದಾರೆ.

ಅದೇ ಸಮಯದಲ್ಲಿ, ಭೂಮಿಯಲ್ಲಿರುವ ತಮ್ಮ ಕುಟುಂಬಗಳನ್ನು ಭೇಟಿಯಾಗಲು ಬರುವ ಪಿತೃಗಳು ತಮ್ಮ ಮಕ್ಕಳು ಸಂತೋಷವಾಗಿರುವುದನ್ನು ನೋಡುತ್ತಾರೆ ಮತ್ತು ಅವರು ಏನನ್ನಾದರೂ ಖರೀದಿಸುತ್ತಿದ್ದರೆ, ಆಗ ಪಿತೃಗಳು ಸಂತೋಷವಾಗಿರುತ್ತಾರೆ. ಈ ರೀತಿಯಾಗಿ, ನೀವು ನಿಮ್ಮ ಸಂತೋಷದ ಜೊತೆಗೆ ನಿಮ್ಮ ಪೂರ್ವಜರನ್ನು ನೋಡಿಕೊಂಡು ಅವರನ್ನು ಗೌರವಿಸಿದರೆ, ಪಿತೃ ಪಕ್ಷದಲ್ಲಿ ಶಾಪಿಂಗ್ ಮಾಡಬಹುದು ಎಂದು ಕೂಡ ಕೆಲವು ಹೇಳುತ್ತಾರೆ.

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News