ದೀಪಾವಳಿ : ಒಂದೇ ರಾಶಿಯಲ್ಲಿ ಸೇರಲಿವೆ 4 ಗ್ರಹಗಳು, ರೂಪುಗೊಳ್ಳಲಿದೆ ಶುಭ ಯೋಗ

ದೀಪಾವಳಿಯ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಲಾಗುತ್ತದೆ. ಈ ವರ್ಷ ದೀಪಾವಳಿ ದಿನದಂದು, ನಾಲ್ಕು ಗ್ರಹಗಳು ಸಂಯೋಗವನ್ನು ರೂಪಿಸುತ್ತವೆ. ದೀಪಾವಳಿಯಂದು ತುಲಾ ರಾಶಿಯಲ್ಲಿ ಸೂರ್ಯ, ಬುಧ, ಮಂಗಳ ಮತ್ತು ಚಂದ್ರ ಇರುತ್ತಾರೆ.

Written by - Ranjitha R K | Last Updated : Sep 24, 2021, 06:37 PM IST
  • ದೀಪಾವಳಿ ಹಿಂದೂಗಳ ಮುಖ್ಯ ಹಬ್ಬ
  • 2021 ರ ದೀಪಾವಳಿಯ ಶುಭ ಮುಹೂರ್ತ ಯಾವಾಗ ತಿಳಿಯಿರಿ
  • ಲಕ್ಷ್ಮೀ ಪೂಜೆಯ ವೇಳೆ ವಿಶೇಷ ಗೊತ್ತಾ?
ದೀಪಾವಳಿ : ಒಂದೇ ರಾಶಿಯಲ್ಲಿ ಸೇರಲಿವೆ 4 ಗ್ರಹಗಳು, ರೂಪುಗೊಳ್ಳಲಿದೆ ಶುಭ ಯೋಗ  title=
2021 ರ ದೀಪಾವಳಿಯ ಶುಭ ಮುಹೂರ್ತ ಯಾವಾಗ ತಿಳಿಯಿರಿ (file photo)

ನವದೆಹಲಿ : ಹಿಂದೂ ಧರ್ಮದಲ್ಲಿ ದೀಪಾವಳಿ (Deepavali) ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿಯನ್ನು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಕಾರ್ತಿಕ ಅಮಾವಾಸ್ಯೆ ನವೆಂಬರ್ 04, ಗುರುವಾರದಂದು ಬರಲಿದೆ. ದೀಪಾವಳಿಯಂದು ಲಕ್ಷ್ಮಿ (Godess lakshmi) ಮತ್ತು ಗಣೇಶನನ್ನು (Lord Ganesha) ಪೂಜಿಸಲಾಗುತ್ತದೆ. ಈ ವರ್ಷ ಲಕ್ಷ್ಮಿ ಪೂಜೆಯಂದು (lakshmi pooja), ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಸೇರಲಿವೆ. ಒಂದೇ ರಾಶಿಯಲ್ಲಿ ನಾಲ್ಕು ಗ್ರಹಗಳು ಸೇರುವುದರಿಂದ ಮಂಗಳಕರ ಯೋಗ ರೂಪುಗೊಳ್ಳುತ್ತದೆ. ಜ್ಯೋತಿಷಿಗಳ ಪ್ರಕಾರ, ಈ ಶುಭ ಯೋಗದಲ್ಲಿ ಮಾಡುವ ಪೂಜೆಯಿಂದಾಗಿ, ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವು ಆಕೆಯ ಭಕ್ತರ ಮೇಲೆ ಇರಲಿದೆ.

ನಾಲ್ಕು ಗ್ರಹಗಳ ಸಂಯೋಜನೆ :
ದೀಪಾವಳಿಯ (deepavali) ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀಗೆ (Godess lakshmi) ವಿಶೇಷ ಪೂಜೆ ಸಲ್ಲಿಲಾಗುತ್ತದೆ. ಈ ವರ್ಷ ದೀಪಾವಳಿ ದಿನದಂದು, ನಾಲ್ಕು ಗ್ರಹಗಳು ಸಂಯೋಗವನ್ನು ರೂಪಿಸುತ್ತವೆ. ದೀಪಾವಳಿಯಂದು ತುಲಾ ರಾಶಿಯಲ್ಲಿ (Libra) ಸೂರ್ಯ, ಬುಧ, ಮಂಗಳ ಮತ್ತು ಚಂದ್ರ ಇರುತ್ತಾರೆ.

ಇದನ್ನೂ ಓದಿ : Palmistry: ತಮ್ಮ ಕೈಯಲ್ಲಿ ಈ ಗುರುತಿರುವ ಹೆಣ್ಣು ಮಕ್ಕಳು ತುಂಬಾ ಅದೃಷ್ಟವಂತರು

ಅಮವಾಸ್ಯೆ ತಿಥಿ ಯಾವಾಗ ಯಾವಾಗ?
ಅಮವಾಸ್ಯೆ ತಿಥಿ 04 ನವೆಂಬರ್ 06:03 ರಿಂದ ಆರಂಭವಾಗುತ್ತದೆ ಮತ್ತು 05 ನವೆಂಬರ್ 02:44 ಕ್ಕೆ ಕೊನೆಗೊಳ್ಳುತ್ತದೆ. ದೀಪಾವಳಿಯ ಲಕ್ಷ್ಮೀ ಪೂಜೆಯ ಮುಹೂರ್ತವು ಸಂಜೆ 06:09 ರಿಂದ ರಾತ್ರಿ 08:20 ರವರೆಗೆ ಇರುತ್ತದೆ. ಪೂಜೆಯ ಒಟ್ಟು ಅವಧಿ 01 ಗಂಟೆ 55 ನಿಮಿಷಗಳು.

ರೂಪುಗೊಳ್ಳಲಿದೆ ಮಂಗಳಕರ ಯೋಗ : 
ತುಲಾ ರಾಶಿಯ (Libra) ಅಧಿಪತಿ ಶುಕ್ರ. ಲಕ್ಷ್ಮೀಯ ಆರಾಧನೆಯು ಶುಕ್ರ ಗ್ರಹದ (Venus) ಮಂಗಳವನ್ನು ಹೆಚ್ಚಿಸುತ್ತದೆ. ಜ್ಯೋತಿಷ್ಯದಲ್ಲಿ, (Astrology) ಶುಕ್ರವನ್ನು ಐಷಾರಾಮಿ ಜೀವನ, ಸೌಕರ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ, ಮಂಗಳ ಗ್ರಹಗಳ ಸೇನಾಧಿಪತಿ ಎಂದು ನಂಬಲಾಗಿದೆ. ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಇದರೊಂದಿಗೆ, ಚಂದ್ರನನ್ನು ಮನಸ್ಸಿನ ಅಂಶವೆಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ಸೂರ್ಯನನ್ನು ತಂದೆ ಮತ್ತು ಚಂದ್ರನನ್ನು (Moon)ತಾಯಿ ಅಂಶವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ : Dreams In Pitru Paksha : ಪಿತೃ ಪಕ್ಷದಲ್ಲಿ ಬೀಳುವ ಕನಸುಗಳಿಗೂ ಇದೇ ವಿಶೇಷ ಅರ್ಥ

ದೀಪಾವಳಿ ಪೂಜೆಯ ಶುಭ ಮುಹೂರ್ತ :
ದೀಪಾವಳಿ: 4 ನವೆಂಬರ್ 2021, ಗುರುವಾರ
ಅಮವಾಸ್ಯೆ ಆರಂಭ: 04 ನವೆಂಬರ್ 2021 ಬೆಳಿಗ್ಗೆ 06:03 ಕ್ಕೆ
ಅಮವಾಸ್ಯೆ ಅಂತ್ಯ : 05 ನವೆಂಬರ್ 2021 ರಿಂದ 02:44 ಮುಂಜಾನೆ
ದೀಪಾವಳಿ ಲಕ್ಷ್ಮೀ ಪೂಜೆ ಮುಹೂರ್ತ: ಸಂಜೆ 6:09 ರಿಂದ ರಾತ್ರಿ 8:20 ರವರೆಗೆ
ಪೂಜೆಯ ಅವಧಿ: 1 ಗಂಟೆ 55 ನಿಮಿಷಗಳು 

ಹೇಗೆ ಪೂಜಿಸಬೇಕು ?
-ಮೊದಲು ಸಂಕಲ್ಪ ಮಾಡಿಕೊಳ್ಳಿ 
-ಲಕ್ಷ್ಮೀ, ಗಣೇಶ, ಸರಸ್ವತಿಯೊಂದಿಗೆ ಕುಬೇರನನ್ನೂ ಪೂಜಿಸಿ 
-ಓಂ ಶ್ರೀ ಶ್ರೀ ಹೂಂ ನಮಃ ಎಂದು 11 ಬಾರಿ ಪಠಿಸಿ.
-ಪೂಜೆಯ ಸ್ಥಳದಲ್ಲಿ ಒಂದು ತೆಂಗಿನಕಾಯಿ ಇಟ್ಟುಕೊಳ್ಳಿ
-ಶ್ರೀ ಯಂತ್ರವನ್ನು ಪೂಜಿಸಿ ಮತ್ತು ಉತ್ತರ ದಿಕ್ಕಿನಲ್ಲಿ ಸ್ಥಾಪಿಸಿ.

ಇದನ್ನೂ ಓದಿ : Shopping In Pitru Paksha: ಪಿತೃ ಪಕ್ಷದಲ್ಲೂ ಮಾಡಬಹುದು ಶಾಪಿಂಗ್, ಆದರೆ ಈ ಬಗ್ಗೆ ಇರಲಿ ಎಚ್ಚರ

ಲಕ್ಷ್ಮೀಗೆ ಭೋಗವನ್ನು ಅರ್ಪಿಸಿ : 
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ನೀವು ಲಕ್ಷ್ಮಿ ಆರಾಧನೆಯಲ್ಲಿ ದಾಳಿಂಬೆ, ಶ್ರೀಫಲಗಳನ್ನು ಅರ್ಪಿಸಿ. ದೀಪಾವಳಿ ಪೂಜೆಯಲ್ಲಿ ಸೀತಾಫಲವನ್ನು ಇಡಲಾಗುತ್ತದೆ. ಇದಲ್ಲದೇ, ಕೆಲವರು ದೀಪಾವಳಿಯ ಪೂಜೆಯ ವೇಳೆ, ಕಬ್ಬನ್ನು ಕೂಡಾ ಇಡುತ್ತಾರೆ.  ಇನ್ನು ಸಿಹಿ ಪ್ರಸಾದವಾಗಿ ಕೇಸರಿಬಾತ್, ಅಕ್ಕಿ ಮತ್ತು ಬೆಲ್ಲ ಸೇರಿಸಿ ಮಾಡಿರುವ ಪಾಯಸವನ್ನು ಅರ್ಪಿಸಬಹುದು. ಈ ವಸ್ತುಗಳನ್ನು ಲಕ್ಷ್ಮೀ ಇಷ್ಟಪಡುತ್ತಾಳೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News