Astrology Tips: ಈ ಕೆಟ್ಟ ಅಭ್ಯಾಸಗಳು ನಿಮ್ಮನ್ನು ಬಡವರನ್ನಾಗಿ ಮಾಡಬಹುದು ಎಚ್ಚರ!
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ತಪ್ಪು ಅಭ್ಯಾಸಗಳೇ ಆತನ ಜೀವನದ ಸಂತೋಷ ಮತ್ತು ಶಾಂತಿಯನ್ನು ಕಿತ್ತುಕೊಳ್ಳುತ್ತದೆ.
ನವದೆಹಲಿ: ಒಬ್ಬ ವ್ಯಕ್ತಿಗೆ ಏನಾದರೂ ಕೆಟ್ಟದು ಸಂಭವಿಸಿದಾಗ ಅವರು ತಮ್ಮ ಅದೃಷ್ಟವನ್ನು ದೂಷಿಸಲು ಪ್ರಾರಂಭಿಸುತ್ತಾರೆ. ಆದರೆ, ವಾಸ್ತವವಾಗಿ ಈ ಎಲ್ಲಾ ಕೆಟ್ಟ ಘಟನೆಗಳ ಹಿಂದೆ ವ್ಯಕ್ತಿಯ ಕೆಟ್ಟ ಅಭ್ಯಾಸಗಳು ಮತ್ತು ಕ್ರಿಯೆಗಳು ಕಾರಣವಾಗಿರುತ್ತವೆ. ಇದರಿಂದಾಗಿ ಅವರು ತಮ್ಮ ಜೀನದಲ್ಲಿ ಬರುವ ಕಹಿ ಘಟನೆಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಒಬ್ಬ ವ್ಯಕ್ತಿಯ ತಪ್ಪು ಅಭ್ಯಾಸಗಳೇ ಆತನ ಜೀವನದ ಸಂತೋಷ ಮತ್ತು ಶಾಂತಿಯನ್ನು ಕಿತ್ತುಕೊಳ್ಳುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಈ ಅಭ್ಯಾಸಗಳಿಗೆ ಗಮನ ಕೊಡುವುದು ಬಹಳ ಮುಖ್ಯ. ಈ ಬಗ್ಗೆ ನೀವು ಕೊಂಚ ನಿರ್ಲಕ್ಷ್ಯ ಮಾಡಿದರೂ ಬಡತನಕ್ಕೆ ಗುರಿಯಾಗಬಹುದು. ಯಾವುದೇ ಒಬ್ಬ ವ್ಯಕ್ತಿ ವಿಶೇಷ ಕಾಳಜಿ ವಹಿಸಬೇಕಾದ ವಿಷಯಗಳು ಇಲ್ಲಿವೆ ನೋಡಿ.
ಈ ಕೆಟ್ಟ ಅಭ್ಯಾಸಗಳಿಂದ ತಾಯಿ ಲಕ್ಷ್ಮಿದೇವಿಗೆ ಕೋಪ!
ಕಾಲು ಎಳೆದುಕೊಂಡು ನಡೆಯುವುದು
ಕೆಲವರು ನಡೆಯುವಾಗ ಕಾಲು ಎಳೆದುಕೊಂಡು ಹೋಗುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಜ್ಯೋತಿಷ್ಯದಲ್ಲಿ ವ್ಯಕ್ತಿಯ ಈ ಅಭ್ಯಾಸವು ತುಂಬಾ ತಪ್ಪು ಎಂದು ನಂಬಲಾಗಿದೆ. ಇದು ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ನೀವು ಪರಸ್ಪರ ವೈಮನಸ್ಸನ್ನು ಸಹ ಎದುರಿಸಬೇಕಾಗಬಹುದು.
ಇದನ್ನೂ ಓದಿ: Budh Margi 2022: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ತೊಂದರೆ ಹೆಚ್ಚಿಸಲಿದ್ದಾನೆ ಮಾರ್ಗಿ ಬುಧ
ಅಡುಗೆ ಮನೆಯ ಸ್ವಚ್ಛತೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿನ ಅಶುಚಿತ್ವವು ಬಡತನಕ್ಕೆ ಕಾರಣವೆಂದು ಪರಿಗಣಿಸಲಾಗಿದೆ. ಅಡುಗೆ ಮನೆಯಲ್ಲಿನ ಸಾಮಾನು ಮತ್ತು ಪಾತ್ರೆಗಳನ್ನು ಹರಡುವುದು ತಾಯಿ ಲಕ್ಷ್ಮಿದೇವಿಗೆ ಕಿರಿಕಿರಿಯುಂಟು ಮಾಡುತ್ತದೆ. ಇದರಿಂದ ನಿಮಗೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಅಡುಗೆಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡದಿದ್ದರೆ ಅಥವಾ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ವ್ಯಕ್ತಿಯ ಜೇಬಿನಲ್ಲಿ ಹಣ ಉಳಿಯುವುದಿಲ್ಲ. ಇದರಿಂದ ಅನಗತ್ಯ ವೆಚ್ಚಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ.
ಉಗುರು ಕಚ್ಚುವ ಅಭ್ಯಾಸ
ಕೆಲವರು ಸುಮ್ಮನೆ ಕುಳಿತಾಗ ಅನಗತ್ಯವಾಗಿ ಉಗುರುಗಳನ್ನು ಕಚ್ಚುತ್ತಿರುತ್ತಾರೆ. ಇದನ್ನು ಕೆಟ್ಟ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಉಗುರುಗಳನ್ನು ಕಚ್ಚುವುದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹ ದುರ್ಬಲನಾಗುತ್ತಾನೆ ಎಂದು ನಂಬಲಾಗಿದೆ. ಈ ಕಾರಣದಿಂದ ವ್ಯಕ್ತಿಯ ಗೌರವ, ಆರೋಗ್ಯ ಮತ್ತು ಕೆಲಸದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಯಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಆರಂಭಿಸಿ
ಚೆಲ್ಲಾಪಿಲ್ಲಿ ಪಾದರಕ್ಷೆಗಳು
ಅಲ್ಲೊಂದು ಇಲ್ಲೊಂದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪಾದರಕ್ಷೆಗಳ ಸಹ ನಿಮ್ಮನ್ನು ಬಡತಕ್ಕೆ ಗುರಿಮಾಡಬಹುದು. ಚಪ್ಪಲಿಗಳು ವ್ಯಕ್ತಿಯ ದುರಾದೃಷ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂಬುದು ಪ್ರತೀತಿ. ಇದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ರೀತಿ ವ್ಯಕ್ತಿಯು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ವೈಫಲ್ಯತೆ ಉಂಟಾಗುತ್ತದೆ.
ಶುಚಿತ್ವದ ಬಗ್ಗೆ ನಿರ್ಲಕ್ಷ್ಯ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಗೆ ಸ್ವಚ್ಛತೆ ಇಷ್ಟ. ಆದ್ದರಿಂದ ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ಲಕ್ಷ್ಮಿದೇವಿಯ ನೆಲೆಯೂ ಇರುತ್ತದೆ. ಸುತ್ತಲೂ ಕೊಳಕು ವಾತಾವರಣವಿದ್ದರೆ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಬಯಸುವ ಜನರು ತಮ್ಮ ಸುತ್ತ-ಮುತ್ತಲಿನ ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.