ಬುಧಮಾರ್ಗಿ ಪರಿಣಾಮ: ಪ್ರಸ್ತುತ, ಸಂಪತ್ತು, ಬುದ್ಧಿವಂತಿಕೆ, ವ್ಯವಹಾರ, ಸಂವಹನಕ್ಕೆ ಕಾರಣವಾದ ಗ್ರಹಗಳು ವೃಷಭ ರಾಶಿಯಲ್ಲಿವೆ. ಇಲ್ಲಿಯವರೆಗೆ ವಕ್ರವಾಗಿ ನಡೆಯುತ್ತಿದ್ದ ಬುಧ ಗ್ರಹವು ಇಂದು ಅಂದರೆ ಜೂನ್ 3ರಿಂದ ನೇರವಾಗಿ ಸಂಚರಿಸಲಿದ್ದಾನೆ. ವೃಷಭ, ಮಕರ ಮತ್ತು ಕನ್ಯಾ ರಾಶಿಯವರಿಗೆ ಬುಧದ ಸಂಚಾರವು ತುಂಬಾ ಶುಭಕರವಾಗಿರುತ್ತದೆ, ಆದರೆ ಇದು 4 ರಾಶಿಚಕ್ರದ ಚಿಹ್ನೆಗಳಿಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಸಮಯವು ಈ ರಾಶಿಚಕ್ರ ಜನರಿಗೆ ವೃತ್ತಿ-ವ್ಯವಹಾರದಲ್ಲಿ ತೊಂದರೆಗಳನ್ನು ನೀಡುತ್ತದೆ. ಆದ್ದರಿಂದ, ಈ ಸಮಯದಲ್ಲಿ ಇವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ.
ವೃಷಭ ರಾಶಿಯಲ್ಲಿ ಬುಧನ ಸಂಚಾರ:
ಬುಧ ಗ್ರಹವು ಜೂನ್ 3, 2022 ರ ಮಧ್ಯಾಹ್ನ 1.29 ಕ್ಕೆ ವೃಷಭ ರಾಶಿಯಲ್ಲಿ ಚಲಿಸಲು ಪ್ರಾರಂಭಿಸುತ್ತದೆ. ಅದೇ ಸಮಯದಲ್ಲಿ, ಬುಧವು ಅನೇಕ ಜನರ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ.
ಇದನ್ನೂ ಓದಿ- Shani Vakri Effect: ಎರಡು ದಿನಗಳ ಬಳಿಕ ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಶನಿದೇವ
ಈ ರಾಶಿಯವರು ಮುಂದಿನ ಒಂದು ತಿಂಗಳು ಜಾಗರೂಕರಾಗಿರಿ:
ಮಿಥುನ ರಾಶಿ: ಮಿಥುನ ರಾಶಿಯವರು ಬುಧ ಸಂಕ್ರಮಣದ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಖರ್ಚು ಹೆಚ್ಚಾಗಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣಗಳಿಂದ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ.
ತುಲಾ ರಾಶಿ : ತುಲಾ ರಾಶಿಯ ಜನರು ಬುಧಗ್ರಹದ ಮಾರ್ಗದಿಂದಾಗಿ ವೃತ್ತಿಯಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅವರು ಕೆಲಸದಲ್ಲಿ ನಾನಾ ರೀತಿಯ ತೊಂದರೆಗಳನ್ನು ಕಾಣಬಹುದು. ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಬರಬಹುದು. ಹಾಗಾಗಿ ಕೆಲಸದ ಸ್ಥಳದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಸಾಧ್ಯವಾದಷ್ಟು ವಿವಾದಗಳಿಂದ ದೂರವಿರಿ.
ಧನು ರಾಶಿ : ಬುಧಗ್ರಹದ ನೇರ ಸಂಚಾರ ಧನು ರಾಶಿಯವರಿಗೂ ಒಳ್ಳೆಯದೆಂದು ಹೇಳಲಾಗದು. ಈ ರಾಶಿಯ ಜನರು ಮುಂಬರುವ ಒಂದು ತಿಂಗಳು ಜಾಗರೂಕರಾಗಿರಬೇಕು. ಹಣದ ವಹಿವಾಟುಗಳನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ಯಾವುದೇ ವಿಷಯವಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ. ಕೆಲಸದ ಬಗ್ಗೆ ಜಾಗರೂಕರಾಗಿರಿ. ಅತಿಯಾದ ವಿಶ್ವಾಸ ಒಳ್ಳೆಯದಲ್ಲ. ಯಾರನ್ನೂ ಸಹ ಕಣ್ಣು ಮುಚ್ಚಿ ನಂಬಬೇಡಿ.
ಇದನ್ನೂ ಓದಿ- June Monthly Horoscope: ಈ ರಾಶಿಯವರು ಜೂನ್ ಆರಂಭದಲ್ಲಿ ಘರ್ಷಣೆ ಅನುಭವಿಸಬಹುದು
ಮೀನ ರಾಶಿ: ಮೀನ ರಾಶಿಯವರಿಗೆ ಇದು ತಾಳ್ಮೆಯಿಂದ ಇರಬೇಕಾದ ಸಮಯ. ಅವರು ಎಲ್ಲವನ್ನೂ ಎಚ್ಚರಿಕೆಯಿಂದ ಮಾಡಬೇಕು. ವಿಶೇಷವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಈ ಸಮಯವು ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.