Astrology: ಜ್ಯೋತಿಷ್ಯಶಾಸ್ತ್ರದಲ್ಲಿ (Jyotishya Shastra) 12 ರಾಶಿಗಳ ಕುರಿತು ವರ್ಣಿಸಲಾಗಿದೆ. ಪ್ರತಿಯೊಂದು ರಾಶಿಗೆ ಅಧಿಪತಿ ಕೂಡ ಇರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಹಾಗೂ ಮಂಗಳರು ಅಧಿಪತಿಯಾಗಿರುವ ರಾಶಿಗಳ (Zodiac Signs) ಜನರು ಭಾಗ್ಯಶಾಲಿಗಳಾಗಿರುತ್ತಾರೆ ಎನ್ನಲಾಗಿದೆ. ಮೇಷ ಹಾಗೂ ವೃಶ್ಚಿಕ ರಾಶಿಗಳಿಗೆ ಮಂಗಳ ಅಧಿಪತಿ. ಮಕರ ಹಾಗೂ ಕುಂಭ ರಾಶಿಗಳ ಅಧಿಪತಿ ಶನಿದೇವ. ಈ ರಾಶಿಗಳ ಮೇಲೆ ಮಂಗಳ (Mangal Dev) ಹಾಗೂ ಶನಿದೇವರ (Shani Dev) ವಿಶೇಷ ಕೃಪೆ ಇರುತ್ತದೆ. ಹೀಗಾಗಿ ಈ ರಾಶಿಯ ಜನರು ತುಂಬಾ ಭಾಗ್ಯಶಾಲಿಗಳಾಗಿರುತ್ತಾರೆ. ಹಾಗಾದರೆ ಬನ್ನಿ ಈ ರಾಶಿಗಳ ಕುರಿತು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

1. ಮೇಷ ರಾಶಿ 
>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಅಧಿಪತಿಯಾಗಿರುವ ರಾಶಿಗಳ ಜನರು ಜೀವನದಲ್ಲಿ ಬಡ್ತಿ ಹೊಂದುತ್ತಲೇ ಇರುತ್ತಾರೆ ಎನ್ನಲಾಗಿದೆ.
>> ಈ ರಾಶಿಯ ಜನರು ಜೀವನದಲ್ಲಿ ಎಂದಿಗೂ ಕೂಡ ಹಿಂದಿರುಗಿ ನೋಡುವುದಿಲ್ಲ.
>> ಮೇಷ ರಾಶಿಯ ಜಾತಕದವರು ಕಷ್ಟಪಟ್ಟು ದುಡಿಯುತ್ತಾರೆ ಹಾಗೂ ಸ್ಪರ್ಧಾಳುಗಳಾಗಿರುತ್ತಾರೆ.
>> ಇವರು ಹುಟ್ಟಿನಿಂದಲೇ ಅದೃಷ್ಟಶಾಲಿಗಳಾಗಿರುತ್ತಾರೆ.
>> ಇವರ ಜೊತೆಗಿನ ಸ್ಪರ್ಧೆಯಲ್ಲಿ ಗೆಲುವು ಸುಲಭವಾಗಿ ಸಿಗುವುದಿಲ್ಲ.
>> ಈ ಜನರು ಜೇವನದಲ್ಲಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಾರೆ.


2. ವೃಶ್ಚಿಕ ರಾಶಿ
>> ಮಂಗಳ ಅಧಿಪತಿಯಾಗಿರುವ ಎರಡನೇ ರಾಶಿ ಎಂದರೆ ಅದು ವೃಶ್ಚಿಕ.
>> ಜೀವನದಲ್ಲಿ ಇವರು ಗೆಲುವು ಸಾಧಿಸಲೆಂದೇ ಬಂದಿರುತ್ತಾರೆ.
>> ಇವರು ಪ್ರಾಮಾಣಿಕತೆಯನ್ನು ಮೆರೆಯುತ್ತಾರೆ.
>> ಇವರು ಪ್ರತಿ ಸವಾಲನ್ನು ಎದುರಿಸಲು ಸಿದ್ಧರಾಗಿರುತ್ತಾರೆ.
>> ಇವರು ಹೇಳಿದ್ದನ್ನು ಮಾಡಿ ತೋರಿಸುತ್ತಾರೆ..
>> ಇವರ ಜೀವನ ಖುಷಿಯಿಂದ ತುಂಬಿರುತ್ತದೆ.
>>  ಸ್ಕಾರ್ಪಿಯೋ ರಾಶಿಚಕ್ರದ ಜನರು ರಹಸ್ಯಗಳನ್ನು ಮರೆಮಾಚುವುದನ್ನು ಬಲ್ಲರು.
>> ಇವರು ಅಪಾಯಕಾರಿ ಶತ್ರುಗಳೆಂದೂ ಕೂಡ ಸಾಬೀತಾಗುತ್ತಾರೆ.
>> ಸ್ನೇಹದ ರೀತಿಯೇ ಇವರು ಶತ್ರುತ್ವವನ್ನು ಕೂಡ ನಿಭಾಯಿಸುತ್ತಾರೆ.


ಇದನ್ನೂ ಓದಿ- Budh Rashi Parivartan 2021: ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಸಿಗಲಿದೆ ಭಾರೀ ಸಫಲತೆ


3. ಮಕರ ರಾಶಿ
>> ಶನಿ ಮಕರ ರಾಶಿಯ ಅಧಿಪತಿ.
>> ಈ ರಾಶಿಚಕ್ರವು ವ್ಯಕ್ತಿಯನ್ನು ಶ್ರೀಮಂತ ಮತ್ತು ಬುದ್ಧಿವಂತನನ್ನಾಗಿ ಮಾಡುತ್ತದೆ.
>> ಈ ರಾಶಿಚಕ್ರದ ಜನರು ತಮ್ಮ ಕ್ಷೇತ್ರದಲ್ಲಿ ನಿಪುಣರಗಿರುತ್ತಾರೆ.
>> ಈ ಜನರು ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.
>> ಅವರು ತಮ್ಮ ಮಿತಿಗಳ ಬಗ್ಗೆ ಹೆದರುವುದಿಲ್ಲ.
>> ಶನಿಯ ಅನುಗ್ರಹದಿಂದ, ಇವರು ಯಶಸ್ವಿ ಮತ್ತು ಬುದ್ಧಿವಂತರಾಗಿರುತ್ತಾರೆ.
>> ಮಕರ ರಾಶಿಯ  ಜನರು ಬೇಗನೆ ಅಥವಾ ಇದ್ದಕ್ಕಿದ್ದಂತೆ ಯಶಸ್ಸನ್ನು ಪಡೆಯುತ್ತಾರೆ.


ಇದನ್ನೂ ಓದಿ- ತುಳಸಿ ಎಲೆ ಕೀಳುವ ಮುನ್ನ ಈ ವಿಚಾರಗಳು ತಿಳಿದಿರಲಿ


4. ಕುಂಭ ರಾಶಿ
>> ಕುಂಭ  ಜನರು ಶನಿಯಿಂದ ಪ್ರಭಾವಿತರಾಗಿರುತ್ತಾರೆ.
>> ಶನಿಯ ಪ್ರಭಾವದಿಂದಾಗಿ, ಇವರು ತಮ್ಮ ಗುರಿಗಳತ್ತ ಗಮನ ಹರಿಸುತ್ತಾರೆ.
>> ಜ್ಯೋತಿಷ್ಯದಲ್ಲಿ, ಶನಿಯನ್ನು ನಕಾರಾತ್ಮಕ ಪರಿಣಾಮಗಳಿಗೆ ಹೋಲಿಸಲಾಗುತ್ತದೆ. ಆದರೆ ಶನಿ ತಾನು ಅಧಿಪತಿಯಾಗಿರುವ ರಾಶಿಚಕ್ರ ಚಿಹ್ನೆಗಳ ಮೇಲೆ ಅನುಗ್ರಹವನ್ನು ನೀಡುತ್ತಾನೆ
>> ಶನಿಯ ಅನುಗ್ರಹದಿಂದಾಗಿ, ಈ ರಾಶಿಚಕ್ರದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ.
>> ಶನಿಯ ಕಾರಣದಿಂದಾಗಿ, ಈ ಜನರು ಕರುಣಾಮಯಿ ಮತ್ತು ಸಹಾನುಭೂತಿಯಿಂದ ತುಂಬಿದ್ದಾರೆ.
>> ಕುಂಭ ರಾಶಿಯ ಜನರು ತುಂಬಾ ಪರಿಶ್ರಮಿಗಳಾಗಿರುತ್ತಾರೆ.


ಇದನ್ನೂ ಓದಿ-Temples Of India: ದೇಶದ ಈ 5 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧ, ಮಹಿಳೆಯರಿಗೆ ಮಾತ್ರ ಎಂಟ್ರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.