Temples Of India: ದೇಶದ ಈ 5 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧ, ಮಹಿಳೆಯರಿಗೆ ಮಾತ್ರ ಎಂಟ್ರಿ

ಸಾಮಾನ್ಯವಾಗಿ ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಎಂಬುದನ್ನು ನೀವು ಕೇಳಿರಬಹುದು. ಆದರೆ ದೇಶದಲ್ಲಿ ಇಂತಹ ಕೆಲವು ದೇವಾಲಯಗಳೂ ಇವೆ, ಅಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. 

Written by - Yashaswini V | Last Updated : Jul 2, 2021, 10:36 AM IST
  • ಕೆಲವು ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧವಿದೆ
  • ಕೆಲವೆಡೆ ದ್ವಾರದಲ್ಲಿಯೇ ನಿಂತು ಪುರುಷರು ದೇವರ ದರ್ಶನ ಪಡೆಯಬಹುದು
  • ಕೆಲವು ದೇವಾಲಯಗಳಲ್ಲಿ ಮಹಿಳೆಯರೇ ಅರ್ಚಕರಾಗಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ
Temples Of India: ದೇಶದ ಈ 5 ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷೇಧ, ಮಹಿಳೆಯರಿಗೆ ಮಾತ್ರ ಎಂಟ್ರಿ title=
ದೇಶದ ಈ ದೇವಾಲಯಗಳಲ್ಲಿ ಪುರುಷರಿಗೆ ಇಲ್ಲ ಎಂಟ್ರಿ, ಮಹಿಳೆಯರೇ ಅರ್ಚಕರು

ನವದೆಹಲಿ: ದೇಶದಲ್ಲಿ ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಅಥವಾ ಕೆಲವು ವಯಸ್ಸಿನ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಎಂಬುದರ ಬಗ್ಗೆ ನೀವು ಕೇಳಿರಬೇಕು. ಉದಾಹರಣೆಗೆ ಶಬರಿಮಲೈ ದೇವಾಲಯದಲ್ಲಿ ಮಹಿಳೆಯರ ಪ್ರವೇಶದ ಬಗ್ಗೆ ಸಾಕಷ್ಟು ವಿವಾದಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದಾಗ್ಯೂ, ಶದಲ್ಲಿ ಇಂತಹ ಕೆಲವು ದೇವಾಲಯಗಳೂ ಇವೆ, ಅಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಕೆಲವೇ ಜನರಿಗಷ್ಟೇ ತಿಳಿದಿದೆ. ಈ ದೇವಾಲಯಗಳಲ್ಲಿ ಮಹಿಳೆಯರು ಮಾತ್ರ ದೇವರಿಗೆ ಪೂಜಿಸಬಹುದು. ಅಂತಹ ದೇವಾಲಯಗಳ ಬಗ್ಗೆ ಮತ್ತು ಅಲ್ಲಿ ಪುರುಷರಿಗೆ ಸಂಬಂಧಿಸಿದಂತೆ ವಿಶೇಷ ನಿಯಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ.

ಈ ದೇವಾಲಯಗಳಲ್ಲಿ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ :
ರಾಜಸ್ಥಾನದ ಬ್ರಹ್ಮ ದೇವಾಲಯ:
ಭಗವಾನ್ ಬ್ರಹ್ಮ ದೇವಾಲಯವು ಪುಷ್ಕರ್‌ನಲ್ಲಿದೆ. ಇದನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಸರಸ್ವತಿ ದೇವಿಯ ಶಾಪದಿಂದಾಗಿ, ವಿವಾಹಿತ ಪುರುಷರಿಗೆ (Men) ಈ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಅವರು ದೇವಾಲಯದ ಅಂಗಳದಿಂದ ಕೈ ಮುಗಿಯಬಹುದು. ಮಹಿಳೆಯರು ಮಾತ್ರ ದೇವಸ್ಥಾನಕ್ಕೆ ಹೋಗಿ ಪೂಜಿಸುತ್ತಾರೆ.

ಇದನ್ನೂ ಓದಿ-  Gemstones: ನಿಮ್ಮ ರಾಶಿಗೆ ಅನುಗುಣವಾಗಿ ಯಾವ ರತ್ನ ಧರಿಸಬೇಕು? ಇಲ್ಲಿದೆ ಮಾಹಿತಿ

ಭಗವತಿ ದೇವಿ ದೇವಸ್ಥಾನ, ಕನ್ಯಾಕುಮಾರಿ: ಇದು ತಾಯಿ ಭಗವತಿಯ ದೇವಾಲಯ. ಶಿವನನ್ನು ತನ್ನ ಗಂಡನನ್ನಾಗಿ ಪಡೆಯಲು ತಪಸ್ಸು ಮಾಡಲು ತಾಯಿ ಭಗವತಿ ಒಮ್ಮೆ ಇಲ್ಲಿಗೆ ಬಂದಿದ್ದಳು ಎನ್ನಲಾಗಿದೆ. ಭಗವತಿ ಮಾತಾ ಅವರನ್ನು ಸನ್ಯಾಸ ದೇವಿ ಎಂದೂ ಕರೆಯುತ್ತಾರೆ. ಆದ್ದರಿಂದ ಸನ್ಯಾಸಿ ಪುರುಷರು ದೇವಾಲಯದ (Temple) ದ್ವಾರದಿಂದ ತಾಯಿಯ ದರ್ಶನ ಪಡೆಯಬಹುದು. ಮತ್ತೊಂದೆಡೆ, ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿಲ್ಲ, ಮಹಿಳೆಯರು ಮಾತ್ರ ಇಲ್ಲಿ ಪೂಜಿಸಬಹುದು.

ಕಾಮಖ್ಯಾ ದೇವಸ್ಥಾನ, ಗುವಾಹಟಿ: ಮಾತೆಯ ಎಲ್ಲಾ ಶಕ್ತಿಪೀಠಗಳ ಪೈಕಿ, ಕಾಮಾಕ್ಯ ಶಕ್ತಿಪೀಠದ ಸ್ಥಳವು ಮೇಲ್ಭಾಗದಲ್ಲಿದೆ. ತಾಯಿಯ ಮುಟ್ಟಿನ ದಿನಗಳಲ್ಲಿ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ, ದೇವಾಲಯದಲ್ಲಿ ಪುರುಷರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (Men Entry Ban In Temples). ಈ ಸಮಯದಲ್ಲಿ ಸಹ ಒಬ್ಬ ಮಹಿಳೆ ಮಾತ್ರ ಅರ್ಚಕರ ಕೆಲಸವನ್ನು ಮಾಡುತ್ತಾರೆ.

ಇದನ್ನೂ ಓದಿ - ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಪಾಲಿಗೆ ಅದೃಷ್ಟ ಲಕ್ಷ್ಮಿ ಯರಂತೆ

ಕೇರಳದ ಚಕ್ಕಲಥುಕಾವ್ ದೇವಸ್ಥಾನ: ದುರ್ಗಾ ದೇವಿಯ ಈ ದೇವಾಲಯದಲ್ಲಿ ಪೊಂಗಲ್ ಸಮಯದಲ್ಲಿ ಪ್ರತಿವರ್ಷ ಮಹಿಳೆಯರನ್ನು ಪೂಜಿಸಲಾಗುತ್ತದೆ. ಇದು 10 ದಿನಗಳವರೆಗೆ ಇರುತ್ತದೆ ಮತ್ತು ಈ ಸಮಯದಲ್ಲಿ ಪುರುಷರು ದೇವಾಲಯಕ್ಕೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಪೂಜೆಯ ಕೊನೆಯ ದಿನದಂದು ಪುರುಷರು ಮಹಿಳೆಯರ ಪಾದ ತೊಳೆದು ಪೂಜಿಸುವ ಸಂಪ್ರದಾಯವಿದೆ.

ಜೋಧಪುರದ ಸಂತೋಶಿ ಮಾತಾ ದೇವಸ್ಥಾನ: ಶುಕ್ರವಾರ ಈ ದೇವಾಲಯದಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧವಿದೆ. ಉಳಿದ ದಿನಗಳಲ್ಲಿ ಪುರುಷರು ಈ ದೇವಾಲಯದ ಬಾಗಿಲಿನಿಂದ ತಾಯಿಯನ್ನು ನೋಡಬಹುದು, ಅವರಿಗೆ ಇಲ್ಲಿ ತಾಯಿಯನ್ನು ಪೂಜಿಸಲು ಎಂದಿಗೂ ಅವಕಾಶವಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News