Atma Ratna Stone: ನಿಮಗೆ ಈ ಕಲ್ಲು ಸಿಕ್ಕರೆ ಅದೃಷ್ಟದ ಜೊತೆಗೆ ಧನಲಾಭವಾಗಲಿದೆ
ಸಮುದ್ರದಲ್ಲಿ ಸಿಗುವ ಕೆಲವು ಕಲ್ಲುಗಳು ಅದ್ಭುತವಾಗಿರುತ್ತವೆ. ಇವುಗಳಲ್ಲಿ ಆತ್ಮರತ್ನ ಶಿಲೆಯೂ ಒಂದು. ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಇವುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಕಲ್ಲು ಯಾರಿಗಾದರೂ ಸಿಕ್ಕರೆ ಅವರ ಅದೃಷ್ಟ ತೆರೆದುಕೊಳ್ಳುತ್ತದೆ ಎಂದು ನಂಬಲಾಗಿದೆ.
ನವದೆಹಲಿ: ಸಮುದ್ರದ ದಡದಲ್ಲಿ ಅನೇಕ ಕಲ್ಲುಗಳು ಕಂಡುಬರುತ್ತವೆ. ವಾಸ್ತವವಾಗಿ ಈ ಕಲ್ಲುಗಳು ನೀರಿನ ಹರಿವಿನಿಂದ ಸಮುದ್ರದ ಅಲೆಗಳಿಂದ ಹೊರಬರುತ್ತವೆ. ಸಮುದ್ರದಲ್ಲಿ ಸಿಗುವ ಕಲ್ಲುಗಳು ತುಂಬಾ ಸುಂದರ ಮತ್ತು ಹೊಳೆಯುತ್ತಿರುತ್ತವೆ. ಈ ಹೊಳೆಯುವ ಕಲ್ಲನ್ನು ಸ್ಪರ್ಶಿಸುವ ವ್ಯಕ್ತಿ ಅದೃಷ್ಟಶಾಲಿಯಾಗುತ್ತಾನೆ ಎಂದು ನಂಬಲಾಗಿದೆ. ಪುರಾಣ ಗ್ರಂಥಗಳಲ್ಲಿ ಆತ್ಮ ರತ್ನ(Atma Ratna Stone) ಎಂಬ ಶಿಲೆಯ ಬಗ್ಗೆ ಉಲ್ಲೇಖವಿದೆ. ಈ ಕಲ್ಲು ಯಾರಿಗಾದರೂ ಸಿಕ್ಕರೆ ಅವರ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ. ಈ ಅಪರೂಪದ ರತ್ನದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿರಿ.
ಆತ್ಮರತ್ನ ಕಲ್ಲಿನ ಪ್ರಯೋಜನಗಳು
ಈ ಕಲ್ಲುಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ ಎಂದು ರತ್ನದ ತಜ್ಞರು ನಂಬುತ್ತಾರೆ. ಕೆಲವರು ಹೂಮಾಲೆ ಮಾಡಲು ಸಹ ಬಳಸುತ್ತಾರೆ. ಈ ಕಲ್ಲು ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಇದು ನೋಟದಲ್ಲಿ ಅಂಡಾಕಾರವಾಗಿರುತ್ತದೆ. ಅಲ್ಲದೆ ಈ ರತ್ನದ ದೊಡ್ಡ ವೈಶಿಷ್ಟ್ಯವೆಂದರೆ ಅದನ್ನು ನೋಡುವಾಗ ಅದರ ರೇಖೆಗಳು ಚಲಿಸುತ್ತವೆ. ಆತ್ಮ ರತ್ನ(Atma Ratna Stone Benefits)ವನ್ನು ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಧರಿಸುವುದರಿಂದ ದೈವಿಕ ಆತ್ಮವು ಯಾವಾಗಲೂ ರಕ್ಷಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Palmistry: ಅಂಗೈಯಲ್ಲಿ ಈ ರೇಖೆ ಇರುವವರು ಹುಟ್ಟು ಶ್ರೀಮಂತರಾಗಿರುತ್ತಾರೆ, ನಿಮ್ಮ ಕೈಯಲ್ಲಿ ಇದೆಯಾ?
ಆತ್ಮ ರತ್ನ ಹೇಗಿರುತ್ತದೆ?
ಆತ್ಮ ರತ್ನ ಕಲ್ಲು(Atma Ratna Stone) ಗಾಢ ಕಂದು ಬಣ್ಣದಲ್ಲಿ ಹೊಳೆಯುತ್ತದೆ. ಇದು ಬಹುತೇಕ ಶಾಲಿಗ್ರಾಮದಂತೆ ಕಾಣುತ್ತದೆ. ಜ್ಯೋತಿಷ್ಯ ಶಾಸ್ತ್ರದ ತಜ್ಞರು ಹೇಳುವ ಪ್ರಕಾರ ಈ ಕಲ್ಲನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ. ಇದರೊಂದಿಗೆ ಜೀವನದಲ್ಲಿ ಬರುವ ಆರ್ಥಿಕ ತೊಂದರೆಗಳಿಂದ ಮುಕ್ತಿಯೂ ಸಿಗುತ್ತದೆ. ಅಷ್ಟೇ ಅಲ್ಲ ಶಾರೀರಿಕ ನೋವಿನಿಂದಲೂ ಪರಿಹಾರ ನೀಡುತ್ತದೆ. ವಿದೇಶಗಳಲ್ಲಿ ಈ ಕಲ್ಲನ್ನು ಪವಾಡವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Weekly Horoscope : ಮುಂದಿನ ವಾರ ಈ ರಾಶಿಯವರಿಗೆ ಆರ್ಥಿಕ ಪ್ರಗತಿ : ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.