Religion: ಶಂಖ ಊದುವುದರಿಂದ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸುತ್ತದೆ

ಶಂಖದ ವಿಶೇಷ ಧಾರ್ಮಿಕ ಮಹತ್ವವನ್ನು ಗ್ರಂಥಗಳಲ್ಲಿ ಹೇಳಲಾಗಿದೆ. ಮನೆಯಲ್ಲಿ ಪ್ರತಿದಿನ ಶಂಖವನ್ನು ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಮನೆಯ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

Written by - Puttaraj K Alur | Last Updated : Mar 13, 2022, 10:56 AM IST
  • ಮನೆಯಲ್ಲಿ ಪ್ರತಿದಿನ ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ
  • ಶಂಖದ ವಿಶೇಷ ಧಾರ್ಮಿಕ ಮಹತ್ವವನ್ನು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ
  • ಶಂಖ ಊದುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ
Religion: ಶಂಖ ಊದುವುದರಿಂದ ಮನೆಯಲ್ಲಿ ಸದಾ ಸುಖ-ಸಮೃದ್ಧಿ ನೆಲೆಸುತ್ತದೆ title=
ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ

ನವದೆಹಲಿ: ಹಿಂದೂ ಧರ್ಮದಲ್ಲಿ(Hinduism) ಶಂಖವನ್ನು ಹೆಚ್ಚಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಪ್ರತಿನಿತ್ಯ ಶಂಖ ಊದುವುದರಿಂದ ಮನೆಯ ದುಷ್ಪರಿಣಾಮ ದೂರವಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಇದರೊಂದಿಗೆ ಮನೆಯ ಕಲಹ ಮತ್ತು ಸಂಕಟದಿಂದ ಮುಕ್ತಿಯೂ ಸಿಗುತ್ತದೆ. ಅಷ್ಟೇ ಅಲ್ಲ ತಾಯಿ ಲಕ್ಷ್ಮಿದೇವಿಯ ಜೊತೆಗೆ ವಿಷ್ಣುವಿನ ಕೃಪೆಯೂ ಇರುತ್ತದೆ ಎಂಬ ನಂಬಿಕೆ ಇದೆ. ಶಂಖ ಊದುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ಇರುತ್ತದಂತೆ. ಶಂಖವನ್ನು ಊದುವ ಶಾಸ್ತ್ರೀಯ ನಿಯಮ ಏನು?(Conch Benefits)ಮತ್ತು ಅದನ್ನು ಹೇಗೆ ಬಳಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳಿರಿ.

ಶಂಖವನ್ನು ಹೇಗೆ ಬಳಸಬೇಕು..?

ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಎರಡು ರೀತಿಯ ಶಂಖವನ್ನು ಇಡಬೇಕು(Conch Benefits For Happiness). ವಾಸ್ತವವಾಗಿ ಊದಿದ ಮತ್ತು ನುಡಿಸುವ ಶಂಖವನ್ನು ಪೂಜೆಯಲ್ಲಿ ಬಳಸಬಾರದು. ಅಂದರೆ ಅದನ್ನು ಬಳಿಸಿ ಪೂಜೆ-ಅಭಿಷೇಕ ಇತ್ಯಾದಿಗಳನ್ನು ಮಾಡಬಾರದು. ಪೂಜೆ ಮಾಡುವ ಶಂಖವನ್ನು ಊದಬಾರದು. ಶಂಖವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಪೂಜಾ ಮನೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ಇಡಬೇಕು. ಭಗವಾನ್ ವಿಷ್ಣುವಿಗೆ ಶಂಖದೊಂದಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Rahu Gochar 2022: ರಾಹು ಸಂಕ್ರಮಣದಿಂದ ಈ 3 ರಾಶಿಗಳ ‘ಅದೃಷ್ಟ’ ಹೊಳೆಯಲಿದೆ

ಶಂಖದಿಂದ ಸೂರ್ಯ ದೇವರು ಮತ್ತು ಶಿವನಿಗೆ ನೀರನ್ನು ಅರ್ಪಿಸುವುದಿಲ್ಲ. ಶಂಖವನ್ನು ಊದುವ ಮೊದಲು ಗಂಗಾಜಲದಿಂದ ಶುದ್ಧಿ ಮಾಡಬೇಕು. ಗಂಗಾಜಲ ಇಲ್ಲದಿದ್ದರೆ ನೀವು ಸಾಮಾನ್ಯ ನೀರಿನಿಂದ ಶಂಖವನ್ನು ಸ್ವಚ್ಛಗೊಳಿಸಬಹುದು. ಇದಲ್ಲದೇ ಪೂಜೆಯ ಶಂಖ(Conch Worship Method)ದಲ್ಲಿ ನೀರು ಸದಾ ಇಡಬೇಕು. ಆ ನೀರನ್ನು ಪೂಜೆಗೆ ಬಳಸಿದ ನಂತರ ಮನೆಯಲ್ಲಿ ಸಿಂಪಡಿಸಬೇಕು.

ಶಂಖವು 14 ರತ್ನಗಳಲ್ಲಿ ಒಂದಾಗಿದೆ

ಪುರಾಣಗಳಲ್ಲಿ ವಿವರಿಸಲಾದ ಕಥೆಯ ಪ್ರಕಾರ, ಶಂಖವು(Shankh Puja Vidhi) 14 ರತ್ನಗಳಲ್ಲಿ ಒಂದಾಗಿದೆ. ಶಂಖವು ಸಾಗರ ಮಂಥನದ ಸಮಯದಲ್ಲಿ ಹುಟ್ಟಿಕೊಂಡಿತು. ಶಂಖವು ಲಕ್ಷ್ಮಿದೇವಿಯ ಸಹೋದರ ಎಂಬ ನಂಬಿಕೆಯೂ ಇದೆ. ಅಲ್ಲದೆ ಇದು ವಿಷ್ಣುವಿಗೆ ಸಂಬಂಧಿಸಿದೆ. ಧಾರ್ಮಿಕ ದಂತಕಥೆಗಳ ಪ್ರಕಾರ, ಶಂಖವು ವಿಷ್ಣುವಿನ ಆಭರಣಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಂಖವನ್ನು ಊದಿದ ಮನೆಯಲ್ಲಿ ವಿಷ್ಣುವು ಲಕ್ಷ್ಮಿಯೊಂದಿಗೆ ನೆಲೆಸುತ್ತಾನೆ ಎಂಬ ನಂಬಿಕೆ ಇದೆ.    

ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಮಲಗುವ ಕೋಣೆಯಲ್ಲಿ ಇಂತಹ ಚಿತ್ರಗಳನ್ನು ಹಾಕಬೇಡಿ!

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News