ನವದೆಹಲಿ: ವಾಸ್ತು ಶಾಸ್ತ್ರ(Vastu Shastra)ದಲ್ಲಿ ಮನೆಯ ಪ್ರತಿಯೊಂದು ಭಾಗಕ್ಕೂ, ಮೂಲೆ ಮೂಲೆಗೂ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ. ಇವುಗಳನ್ನು ಪಾಲಿಸಿದರೆ ಜೀವನ ಸುಖಮಯವಾಗುತ್ತದೆ. ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ. ಮನೆಯವರ ನಡುವೆ ಪ್ರೀತಿ ಬೆಳೆಯುತ್ತದೆ. ಪತಿ ಮತ್ತು ಪತ್ನಿ ಉತ್ತಮ ದಾಂಪತ್ಯ ಜೀವನವನ್ನು ಆನಂದಿಸುತ್ತಾರೆ. ಆದರೆ ಮನೆಯಲ್ಲಿ ಯಾವುದೇ ವಾಸ್ತು ದೋಷ(Vastu Tips) ಕಾಣಿಸಿಕೊಂಡರೆ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ತೊಂದರೆಗಳು ಬರಲಾರಂಭಿಸುತ್ತವೆ.
ಅದೇ ರೀತಿ ಮಲಗುವ ಕೋಣೆಯಲ್ಲಿ ವಾಸ್ತು ದೋಷ(Bedroom Vastu Tips) ಉಂಟಾದರೆ ಪತಿ-ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡುವ ಅಪಾಯವಿದೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಹಾಕುವ ಕೆಲವು ನಕಾರಾತ್ಮಕ ಚಿತ್ರಗಳು ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ.
ಇದನ್ನೂ ಓದಿ: Holi 2022 : ಮನೆಯಲ್ಲಿ ಹಿಟ್ಟಿನ ದೀಪದ ಬೆಳಗಿಸಿ ಶ್ರೀಮಂತರಾಗಿ, ನಿಮ್ಮ ಹಳೆಯ ಸಾಲಗಳು ತಿರುತ್ತವೆ!
ಮಲಗುವ ಕೋಣೆಯಲ್ಲಿ ಈ ಚಿತ್ರಗಳನ್ನು ಹಾಕಬೇಡಿ
- ಮಲಗುವ ಕೋಣೆಯಲ್ಲಿ ಎಂದಿಗೂ ನದಿ ಅಥವಾ ಹರಿಯುವ ಜಲಪಾತಗಳ ಚಿತ್ರಗಳನ್ನು ಹಾಕಬೇಡಿ(Do Not Put These Pictures In The Bedroom). ಹೀಗೆ ಮಾಡುವುದರಿಂದ ಸಂಬಂಧದಲ್ಲಿ ನಂಬಿಕೆಯ ಕೊರತೆ ಉಂಟಾಗುತ್ತದೆ. ಇಂತಹ ಚಿತ್ರವು ಪರಸ್ಪರ ಅನುಮಾನದ ಭಾವನೆಯನ್ನು ಉಂಟುಮಾಡುತ್ತದೆ. ಇಂತಹ ಪರಿಸ್ಥಿತಿ ಪತಿ-ಪತ್ನಿಯರಿಗೆ ಒಳ್ಳೆಯದಲ್ಲ.
- ಮಲಗುವ ಕೋಣೆಯಲ್ಲಿ ಎಂದಿಗೂ ದೇವರು ಮತ್ತು ದೇವತೆಗಳ ಫೋಟೋಗಳನ್ನು ಹಾಕಬೇಡಿ. ಇದು ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ.
- ಶ್ರೀಕೃಷ್ಣನು ಅರ್ಜುನನಿಗೆ ಗೀತಾಜ್ಞಾನವನ್ನು ನೀಡುವ ಚಿತ್ರವನ್ನು ಹೊರತುಪಡಿಸಿ, ಮಹಾಭಾರತ ಯುದ್ಧದ ಯಾವುದೇ ಚಿತ್ರವನ್ನು ಇಡೀ ಮನೆಯಲ್ಲಿ ಎಲ್ಲಿಯೂ ಹಾಕಬಾರದು. ಅದೇ ರೀತಿ ಮಲಗುವ ಕೋಣೆಯಲ್ಲಿ ಅಪ್ಪಿತಪ್ಪಿಯೂ ಮಹಾಭಾರತ ಅಥವಾ ಯಾವುದೇ ಯುದ್ಧಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹಾಕಬಾರದು(Bad Photos In Bedroom). ಈ ರೀತಿ ಮಾಡುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಉದ್ವಿಗ್ನತೆ ಉಂಟಾಗುತ್ತದೆ.
- ಮಕ್ಕಳ ಸಂತೋಷ ಬಯಸುವ ದಂಪತಿಗಳು ಮಲಗುವ ಕೋಣೆಯಲ್ಲಿ ಪಾರಿವಾಳದ ಚಿತ್ರವನ್ನು ಹಾಕಬಾರದು. ಅಂದಹಾಗೆ ಪಾರಿವಾಳದ ಫೋಟೋ ಅಥವಾ ವಿಗ್ರಹವನ್ನು ಮನೆಯಲ್ಲಿ ಎಲ್ಲಿಯೂ ಇಡಬೇಡಿ. ಇದು ಮಕ್ಕಳ ಪ್ರಾಪ್ತಿ ಅಥವಾ ಸಂತಾನದ ಬೆಳವಣಿಗೆಗೆ ಅಡ್ಡಿಯಾಗುತ್ತದೆ.
- ಮಲಗುವ ಕೋಣೆಯಲ್ಲಿ ಎಂದಿಗೂ ಪೂರ್ವಜರ ಚಿತ್ರವನ್ನೂ ಹಾಕಬೇಡಿ(Ashubh Photos). ಇದು ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಅಂತರವನ್ನು ತರುತ್ತದೆ.
- ಮಲಗುವ ಕೋಣೆಯಲ್ಲಿ ಸೂರ್ಯ ಮುಳುಗುವ ಚಿತ್ರವನ್ನು ಸಹ ಹಾಕಬಾರದು. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ನಿರಾಸಕ್ತಿ ಉಂಟಾಗುತ್ತದೆ.
ಇದನ್ನೂ ಓದಿ: Maharashtra: ಇಲ್ಲಿ ಹೋಳಿ ಹಬ್ಬದ ಪ್ರಯುಕ್ತ ಅಳಿಯನಿಗೆ ಕತ್ತೆಯ ಸವಾರಿ ಮಾಡಿಸಲಾಗುತ್ತದೆ, 80 ವರ್ಷಗಳಷ್ಟು ಹಳೆ ಸಂಪ್ರದಾಯ
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)