ನವದೆಹಲಿ: ಖ್ಯಾತ ಪ್ರವಾದಿ ಬಾಬಾ ವಂಗಾ ಮುಂದಿನ ಹಲವು ದಶಕಗಳು ಮತ್ತು ಶತಮಾನಗಳ ಭವಿಷ್ಯ ನುಡಿದಿದ್ದಾರೆ. ಭಾರತವೂ ಸೇರಿದಂತೆ ಪ್ರಪಂಚದ ಬಗ್ಗೆ ಬಾಬಾ ವಂಗಾ ನುಡಿದಿರುವ ಅನೇಕ ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವಾಗಿವೆ. ಈ ಪೈಕಿ ಪ್ರಿನ್ಸೆಸ್ ಡಯಾನಾ ಸಾವು, ಅಮೆರಿಕದ ಮೇಲೆ 9/11 ಭಯೋತ್ಪಾದಕ ದಾಳಿ, ಬರಾಕ್ ಒಬಾಮಾ ಅಧ್ಯಕ್ಷರಾಗುವುದು, ಥೈಲ್ಯಾಂಡ್‌ನ ಸುನಾಮಿಯ ವಿನಾಶ, ಕೊರೊನಾ ವೈರಸ್‌ ವಿನಾಶದಂತಹ ಭವಿಷ್ಯವಾಣಿಗಳು ಸೇರಿವೆ. ಬಾಬಾ ವಂಗಾ 2023ರ ವರ್ಷ ಮತ್ತು ಮುಂಬರುವ ಕೆಲವು ವರ್ಷಗಳಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯವಾಣಿ ನುಡಿದಿದ್ದಾರೆ. ಇವು ಏನಾದರೂ ನಿಜವಾದರೆ ಇಡೀ ಪ್ರಪಂಚದ ಭವಿಷ್ಯವೇ  ತಲೆಕೆಳಗಾಗಬಹುದು.


COMMERCIAL BREAK
SCROLL TO CONTINUE READING

ರಷ್ಯಾ ಜಗತ್ತನ್ನು ಆಳುತ್ತದೆಯೇ..?


ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಅವರು ತಮ್ಮ ಜೀವನದ ಕೊನೆಯ ದಿನಗಳಲ್ಲಿ ರಷ್ಯಾದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದರು. ಇದು ಈಗಾಗಲೇ ನಿಜವೆಂದು ಸಾಬೀತಾಗಿದೆ. ಈ ಭವಿಷ್ಯವು ರಷ್ಯಾದ ದಾಳಿ ಮತ್ತು 3ನೇ ಮಹಾಯುದ್ಧದ ಮುನ್ಸೂಚನೆಗೆ ಸಂಬಂಧಿಸಿದೆ. 2023ರಲ್ಲಿ 3ನೇ ಮಹಾಯುದ್ಧ ನಡೆಯಲಿದೆ ಎಂದು ವಂಗಾ ಹೇಳಿದ್ದರು. ಜೈವಿಕ ಆಯುಧಗಳ ಬಳಕೆಯ ಬಗ್ಗೆಯೂ ಅವರು ತಿಳಿಸಿದ್ದರು. ಇದು ಏನಾದರೂ ನಿಜವಾದರೆ ಜಗತ್ತಿನಲ್ಲಿ ದೊಡ್ಡಮಟ್ಟದ ಹಾನಿಯುಂಟಾಗುತ್ತದೆ.   


ಇದನ್ನೂ ಓದಿ: Viral News: ಗೇರ್ ಬದಲಿಸುವ ರೀತಿಗೆ ಫಿದಾ ಆಗಿ ಪಾಕಿಸ್ತಾನಿ ಡ್ರೈವರನ್ನೇ ಮದುವೆಯಾದ 17ರ ಹುಡುಗಿ!


ಅಷ್ಟೇ ಅಲ್ಲ, ರಷ್ಯಾ ಮತ್ತು ವ್ಲಾಡಿಮಿರ್‌ ಪುಟಿನ್‌ ಆಳ್ವಿಕೆಯ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ‘ಜಗತ್ತಿನಲ್ಲಿ ಅಮೆರಿಕದ ಪ್ರಾಬಲ್ಯವು ಕೊನೆಗೊಳ್ಳುವ ಸಮಯ ಬರುತ್ತದೆ ಮತ್ತು ಇಡೀ ಜಗತ್ತು ರಷ್ಯಾ ಮತ್ತು ಪುಟಿನ್ ಆಳ್ವಿಕೆಯನ್ನು ನೋಡುತ್ತದೆ’ ಎಂದು ವಂಗಾ ಹೇಳಿದ್ದರು. ದಟ್ಟ ಮಂಜುಗಡ್ಡೆಯ ಪದರವು ಕರಗುತ್ತದೆ ಮತ್ತು ಅನೇಕ ನಗರಗಳು ನೀರಿನಲ್ಲಿ ಮುಳುಗುತ್ತವೆ ಎಂದು ಸಹ ವಂಗಾ ಹೇಳಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ರಷ್ಯಾ ಮತ್ತು ಪುಟಿನ್ ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎನ್ನಲಾಗಿದೆ.


ಬಾಬಾ ವಂಗಾ ಯಾರು?


1911ರಲ್ಲಿ ಜನಿಸಿದ ಬಾಬಾ ವಂಗಾ ಚಂಡಮಾರುತ ಪರಿಣಾಮ ಬಾಲ್ಯದಲ್ಲಿಯೇ ತಮ್ಮ ಕಣ್ಣುಗಳನ್ನು ಕಳೆದುಕೊಂಡರು. ಇದರ ನಂತರ ಅವರು ಅನೇಕ ಭವಿಷ್ಯವಾಣಿಗಳನ್ನು ನುಡಿದರು. ಅವರ ನುಡಿದ ಭವಷ್ಯವಾಣಿಗಳ ಪೈಕಿ ಕೆಲವು ಕಾಲಕಾಲಕ್ಕೆ ನಿಜವೆಂದು ಸಾಬೀತಾಗಿವೆ. ಭೂಮಿಯ ಅಂತ್ಯದ ಬಗ್ಗೆಯೂ ವಂಗಾ ಭವಿಷ್ಯ ನುಡಿದಿದ್ದಾರೆ. ಇವರು ವೈದಿಕ ಜ್ಯೋತಿಷ್ಯದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಹೊಸ ವರ್ಷ ಪ್ರಾರಂಭವಾಗುವ ಮೊದಲೇ ಮತ್ತೊಮ್ಮೆ ವಂಗಾ ಅವರ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿವೆ.


ಇದನ್ನೂ ಓದಿ: ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಪ್ರಯಾಣಿಕರ ವಿಮಾನ ಪತನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.