Viral News: ಗೇರ್ ಬದಲಿಸುವ ರೀತಿಗೆ ಫಿದಾ ಆಗಿ ಪಾಕಿಸ್ತಾನಿ ಡ್ರೈವರನ್ನೇ ಮದುವೆಯಾದ 17ರ ಹುಡುಗಿ!

Pakistan Marriage: ಪಾಕಿಸ್ತಾನದಲ್ಲಿ ಮೂಡಿದ ಈ ಪ್ರೇಮದ ಕಹಾನಿ ಕೇಳಿದ್ರೆ ನಿಮಗೆ ಕೊಂಚ ಸಂತೋಷ, ಕೊಂಚ ತಮಾಷೆ ಎನಿಸಬಹುದು. 17 ವರ್ಷ ಪ್ರಾಯದ ಹುಡುಗಿಯೊಬ್ಬಳು ಕಾರು ಕಲಿಯಲೆಂದು ತೆರಳಿದ್ದಾಳೆ. ಅಲ್ಲಿ 21 ವರ್ಷದ ಡ್ರೈವರ್ ನ್ನು ಕಂಡು ಫಿದಾ ಆಗಿದ್ದಾಳೆ. ಆಕೆಗೆ ಇಷ್ಟವಾಗಿದ್ದು ಆತ ಗೇರ್ ಬದಲಾಯಿಸುವ ರೀತಿ. ಈ ಬಗ್ಗೆ ಸ್ವತಃ ಆ ಹುಡುಗಿಯೇ ಹೇಳಿಕೊಂಡಿದ್ದಾಳೆ.

Written by - Bhavishya Shetty | Last Updated : Nov 6, 2022, 11:57 AM IST
    • ಗೇರ್ ಬದಲಾಯಿಸುವ ರೀತಿಗೆ ಫಿದಾ ಆದ ಹುಡುಗಿ
    • ಡ್ರೈವರನ್ನೇ ಮದುವೆಯಾದ 17ರ ಬಾಲಕಿ
    • ಪಾಕಿಸ್ತಾನದಲ್ಲಿ ಮೂಡಿದ ವಿಚಿತ್ರ ಪ್ರೇಮ
Viral News: ಗೇರ್ ಬದಲಿಸುವ ರೀತಿಗೆ ಫಿದಾ ಆಗಿ ಪಾಕಿಸ್ತಾನಿ ಡ್ರೈವರನ್ನೇ ಮದುವೆಯಾದ 17ರ ಹುಡುಗಿ! title=
Driver marriage

Pakistan Marriage: ಯಾರ ಮೇಲೆ ಯಾರಿಗೆ? ಯಾಕೆ? ಯಾವ ಸಂದರ್ಭದಲ್ಲಿ ಪ್ರೀತಿ ಹುಟ್ಟುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಪ್ರೀತಿಗೆ ಕಣ್ಣಿಲ್ಲ ಎಂದು ಕೆಲವರು ಹೇಳುವುದುಂಟು. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ತಿಳಿದಿರುವ ಕಾರಣಕ್ಕಿಂತ ವಿಭಿನ್ನವಾಗಿ ಇಲ್ಲೊಂದು ಪ್ರೇಮಾಂಕುರವಾಗಿದೆ. ಕೇಳಲು ತಮಾಷೆ ಎನಿಸಿದ್ರೂ ಇದು ಸತ್ಯ.

ಪಾಕಿಸ್ತಾನದಲ್ಲಿ ಮೂಡಿದ ಈ ಪ್ರೇಮದ ಕಹಾನಿ ಕೇಳಿದ್ರೆ ನಿಮಗೆ ಕೊಂಚ ಸಂತೋಷ, ಕೊಂಚ ತಮಾಷೆ ಎನಿಸಬಹುದು. 17 ವರ್ಷ ಪ್ರಾಯದ ಹುಡುಗಿಯೊಬ್ಬಳು ಕಾರು ಕಲಿಯಲೆಂದು ತೆರಳಿದ್ದಾಳೆ. ಅಲ್ಲಿ 21 ವರ್ಷದ ಡ್ರೈವರ್ ನ್ನು ಕಂಡು ಫಿದಾ ಆಗಿದ್ದಾಳೆ. ಆಕೆಗೆ ಇಷ್ಟವಾಗಿದ್ದು ಆತ ಗೇರ್ ಬದಲಾಯಿಸುವ ರೀತಿ. ಈ ಬಗ್ಗೆ ಸ್ವತಃ ಆ ಹುಡುಗಿಯೇ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ:Bride Groom Video : ಮದುವೆ ಮಂಟಪದಲ್ಲಿ ಪೂಜಾರಿ ಹೇಳಿದ್ದು ಕೇಳಿ, ಎದ್ದು ಬಿದ್ದು ನಕ್ಕ ವಧು : Video ನೋಡಿ

ಈ ಹುಡುಗಿಯ ಹೆಸರು ಖತೀಜಾ. ಈಕೆ ಪಾಕಿಸ್ತಾನದ ಶ್ರೀಮಂತ ಕುಟುಂಬದ ವ್ಯಕ್ತಿಯೊಬ್ಬರ ಮಗಳು. ಇವರ ತಂದೆ ಖತೀಜಾ ಕಾರು ಡ್ರೈವಿಂಗ್ ಕಲಿಯಲೆಂದು ಡ್ರೈವರ್ ಒಬ್ಬನನ್ನು ನೇಮಕ ಮಾಡುತ್ತಾನೆ. ಆದರೆ ಆಕೆ ಆತನ ಪ್ರೇಮದಲ್ಲಿ ಬೀಳುತ್ತಾಳೆ. ಈ ಬಗ್ಗೆ ಪ್ರೇಮ ನಿವೇದನೆಯನ್ನೂ ಮಾಡುತ್ತಾಳೆ. ಆದರೆ ಆತ ಅದಕ್ಕೆ ಮೊದಲು ಒಪ್ಪಲಿಲ್ಲ. “ಬೇಡ ಬೇಡ, ನನ್ನ ಬಗ್ಗೆ ಅಂಕಲ್​ ಏನು ತಿಳಿದುಕೊಳ್ಳುತ್ತಾರೆ? ನಾನು ಸಾಮಾನ್ಯ ಡ್ರೈವರ್, ನೀನು ಶ್ರೀಮಂತರ ಮಗಳು” ಎಂದು ಹೇಳುತ್ತಾನೆ.

ಆ ಬಳಿಕ ಪ್ರೀತಿಯ ವಿಚಾರವನ್ನು ತಂದೆಯ ಬಳಿ ಹೇಳುತ್ತಾರೆ. ಆದರೆ ಅದಕ್ಕೆ ಅವರು ಮೊದಲು ಒಪ್ಪಿಗೆ ಸೂಚಿಸುವುದಿಲ್ಲ. ಆಗ ಆಹಾರ ಬಿಟ್ಟು ಹಠ ಹಿಡಿದು ಕೂರುತ್ತಾಳೆ. ಇತ್ತ ಹುಡುಗ, ಅವಳ ತಂದೆ ಒಪ್ಪದಿದ್ದರೆ ಏನು ಗತಿ? ಮೊದಲ ಸಲ ನನಗೆ ಹುಡುಗಿಯೊಬ್ಬಳು ಪ್ರೊಪೋಸ್ ಮಾಡಿದ್ದಾಳೆ. ಈಗ ಅವರು ಒಪ್ಪದಿದ್ದರೆ ನನ್ನ ಕೆಲಸವೂ ಹೋಗುತ್ತದೆ ಎಂದು ಚಿಂತೆಗೀಡಾಗುತ್ತಾನೆ. ಕೊನೆಗೆ ಖತೀಜಾ ತನ್ನ ತಂದೆಯನ್ನು ಒಪ್ಪಿಸುವಲ್ಲಿ ಸಫಲವಾಗುತ್ತಾಳೆ.

ಇದನ್ನೂ ಓದಿ: ವಿದ್ಯಾರ್ಥಿಗೆ ರಾಡ್‌ನಿಂದ ಥಳಿಸಿ, ಐರನ್‌ಬಾಕ್ಸ್‌ನಿಂದ ಸುಟ್ಟ ಸಹಪಾಠಿಗಳು : ಭಯಾನಕ ವಿಡಿಯೋ ನೋಡಿ..!

ಆಕೆ ಪಾಕಿಸ್ತಾನದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, “ಪ್ರತೀದಿನವೂ ಕಾರಿನ ಗೇರು ಹಾಕುವ ಇವರ ಕೈಯನ್ನೇ ಗಮನಿಸುತ್ತಿದ್ದೆ. ಆ ಸ್ಟೈಲ್​ಗೆ ಫಿದಾ ಆಗಿ ಕೈ ಹಿಡಿಯಬೇಕು ಅನ್ನಿಸುತ್ತಿತ್ತು. ಈಗ ಶಾಶ್ವತವಾಗಿ ಕೈ ಹಿಡಿದಿದ್ದೇನೆ. ಆದರೆ ಡ್ರೈವಿಂಗ್ ಮಾತ್ರ ಕಲಿತಿಲ್ಲ” ಎಂದು ನಗುತ್ತಾ ಹೇಳಿದ್ದಾಳೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್

Trending News