Banana Facial at Home : ಪ್ರತಿಯೊಬ್ಬರೂ ಸುಂದರವಾದ, ಹೊಳೆಯುವ ಮತ್ತು ಮೃದುವಾದ ಚರ್ಮವನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಕೂಡಾ ಬಳಸುತ್ತಾರೆ. ಇದರೊಂದಿಗೆ ಹಲವರು ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಫೇಶಿಯಲ್‌ ಮಾಡಿಸಿದಾಗ ಮುಖದ ಮೇಲೆ ಸಂಗ್ರಹವಾಗಿರುವ ಕೊಳೆ, ಡೆಡ್ ಸೆಲ್ ಗಳನ್ನೂ ಸುಲಭವಾಗಿ ತೆಗೆದುಹಾಕಬಹುದು. ಹೀಗೆ ಮಾಡಿದಾಗ ತ್ವಚೆಯೂ ಹೊಳೆಯುತ್ತದೆ. ಆದರೆ ಪ್ರತಿ ಬಾರಿ ಪಾರ್ಲರ್‌ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುವುದು ತುಂಬಾ ದುಬಾರಿಯಾಗುತ್ತದೆ.  ಇದಕ್ಕಾಗಿ, ಮನೆಯಲ್ಲಿಯೇ ಬಾಳೆಹಣ್ಣಿನ ಫೇಶಿಯಲ್ ಮಾಡಿಸಿ ಕೊಳ್ಳಬಹುದು. ಇದರಿಂದ ಮುಖದ ಹೊಳಪು ಹೆಚ್ಚುತ್ತದೆ.  ಹಾಗಿದ್ದರೆ, ಮನೆಯಲ್ಲಿಯೇ ಫೇಶಿಯಲ್ ಮಾಡಿಕೊಳ್ಳುವುದು ಹೇಗೆ  ನೋಡೋಣ. 


COMMERCIAL BREAK
SCROLL TO CONTINUE READING

ಈ ರೀತಿ ಬಾಳೆಹಣ್ಣಿನ ಫೇಶಿಯಲ್ ಅನ್ನು ಮನೆಯಲ್ಲಿಯೇ ಮಾಡಿ: 
ಮನೆಯಲ್ಲಿ ಬಾಳೆಹಣ್ಣಿನ ಫೇಶಿಯಲ್ ಮಾಡಲು, ಮೊದಲು ಮುಖವನ್ನು ಚೆನ್ನಾಗಿ ತೊಳೆಯಿರಿ. ಇದರ ನಂತರ, ಹೈಡ್ರೇಟಿಂಗ್ ಕ್ಲೆನ್ಸರ್ ಸಹಾಯದಿಂದ ಮುಖವನ್ನು ಸ್ವಚ್ಛಗೊಳಿಸಿ. ಇದರಿಂದ ಮುಖದಲ್ಲಿ ಸಂಗ್ರಹವಾಗಿರುವ ಎಲ್ಲಾ ಕೊಳಕು ಮತ್ತು ಧೂಳನ್ನು ಸುಲಭವಾಗಿ ತೆಗೆದು ಹಾಕಬಹುದು. 


ಇದನ್ನೂ ಓದಿ : ನಿಮಗೂ ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವ ಅಭ್ಯಾಸವಿದೆಯೇ? ಇದನ್ನು ತಪ್ಪದೇ ಓದಿ


ಬಾಳೆಹಣ್ಣಿನ ಫೇಸ್ ಸ್ಕ್ರಬ್ :
ಮುಖವನ್ನು ಸ್ವಚ್ಛಗೊಳಿಸಿದ ನಂತರ, ಮುಖದ ಸ್ಕ್ರಬ್ಬಿಂಗ್ ಮಾಡಬೇಕು. ಬನಾನಾ ಸ್ಕ್ರಬ್ ಮಾಡಲು, ಹಾಲಿನ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ರವೆ, ನಿಂಬೆ ರಸ ಮತ್ತು ಆಲಿವ್ ಎಣ್ಣೆಯನ್ನು ಸೇರಿಸಿ. ಈಗ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಈ ಮಿಶ್ರಣವನ್ನು ಸಿಪ್ಪೆಯ ಮೇಲೆ ಅನ್ವಯಿಸಿ. ಇದನ್ನು ಮುಖದ ಎಲ್ಲಾ ಕಡೆ ಚೆನ್ನಾಗಿ ಸ್ಕ್ರಬ್ ಮಾಡಿ. 5 ನಿಮಿಷಗಳ ನಂತರ, ಸ್ವಚ್ಛ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ಮಾಡಿದಾಗ ಇದು ಮುಖವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು  ಡೆಡ್ ಸೆಲ್ ಗಳನ್ನು ತೆಗೆದುಹಾಕುತ್ತದೆ. ಇದು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.


ಬಾಳೆಹಣ್ಣಿನ ಮಸಾಜ್ ಕ್ರೀಮ್ :
ಸ್ಕ್ರಬ್ ನಂತರ, ಮುಂದಿನ ಹಂತದಲ್ಲಿ ಮುಖದ ಮಸಾಜ್ ಮಾಡಿಕೊಳ್ಳಬೇಕು. ಇದಕ್ಕಾಗಿ ಅರ್ಧ ಬಾಳೆಹಣ್ಣು, ಜೇನುತುಪ್ಪ, ನಿಂಬೆ ರಸ, ಚಿಟಿಕೆ ಅರಿಶಿನ ಮತ್ತು ಮೊಸರನ್ನು ತೆಗದುಕೊಳ್ಳಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಇದರ ನಂತರ ಈ ಪೇಸ್ಟ್ ಅನ್ನು ಬಳಸಿ ಮುಖದ ಮಸಾಜ್ ಮಾಡಿ. 


ಇದನ್ನೂ ಓದಿ : ಮುಖದ ಹೊಳಪು ಹೆಚ್ಚಿಸಲು ದುಬಾರಿ ಕ್ರೀಮ್‌ಗಿಂತ ಮನೆಯಲ್ಲಿರುವ ಅಕ್ಕಿ ಹಿಟ್ಟು ಬೆಸ್ಟ್‌!


ಬಾಳೆಹಣ್ಣಿನ ಫೇಸ್ ಪ್ಯಾಕ್ :
ಬಾಳೆಹಣ್ಣು ಮಾಸ್ಚರೈಸಿಂಗ್ ಗುಣಗಳನ್ನು ಹೊಂದಿದೆ. ಬಾಳೆಹಣ್ಣು ಚರ್ಮದ ಶುಷ್ಕತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಮೊಡವೆಗಳನ್ನು ಸಹ ತೊಡೆದುಹಾಕುತ್ತದೆ. ಬಾಳೆಹಣ್ಣಿನ ಫೇಸ್ ಪ್ಯಾಕ್ ಮಾಡಲು, ಒಂದು ಬಟ್ಟಲಿನಲ್ಲಿ ಕಿತ್ತಳೆ ಸಿಪ್ಪೆಯ ಪುಡಿ, ಅರ್ಧ ಬಾಳೆಹಣ್ಣು, ಜೇನುತುಪ್ಪ, ನಿಂಬೆ ರಸ ಮತ್ತು ಮೊಸರು  ತೆಗೆದುಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನುಣ್ಣಗೆ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.